ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರುಹುಗಳಿಲ್ಲದೆಯೇ ಎಟಿಎಂ ದರೋಡೆ: ಬ್ಯಾಂಕ್ ಅಧಿಕಾರಿಗಳಿಗೆ ತಲೆಬಿಸಿ

|
Google Oneindia Kannada News

ಚೆನ್ನೈ, ಜೂ.22: ಚೆನ್ನೈನ ವೇಲಾಚೇರಿ, ತಾರಮಣಿ, ವಲಸರವಕ್ಕಂ ಮತ್ತು ರಾಮಪುರಂನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗಳಲ್ಲಿ ದರೋಡೆ ಮಾಡಲಾಗಿದೆ ಎಂದು ಗ್ರೇಟರ್ ಚೆನ್ನೈ ಪೊಲೀಸರಿಗೆ ಅನೇಕ ದೂರುಗಳು ಬಂದಿದೆ. ಆದರೆ ಎಟಿಎಂಗಳು ಯಾವುದೇ ರೀತಿಯ ಹಾನಿಗೊಳಗಾದ ಲಕ್ಷಣಗಳು ಕಂಡು ಬಂದಿಲ್ಲ. ಯಾವುದೇ ದರೋಡೆಯ ಕುರುಹುಗಳು ಇಲ್ಲ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಗೊಂದಲಕ್ಕೊಳಗಾಗಿದ್ದಾರೆ.

ಬ್ಯಾಂಕ್ ಅಧಿಕಾರಿಗಳು, ವಾಡಿಕೆಯಂತೆ, ಎಟಿಎಂಗಳಲ್ಲಿ ಠೇವಣಿ ಇರಿಸಿದ ಹಣ ಮತ್ತು ಹಿಂಪಡೆದ ಹಣವು ಹೊಂದಿಕೆಯಾಗುವುದಿಲ್ಲ ಎಂಬುವುದು ಗಮನಕ್ಕೆ ಬಂದ ಬಳಿಕ ಈ ದರೋಡೆ ಪ್ರಕರಣವು ಬೆಳಕಿಗೆ ಬಂದಿದೆ. ಎಟಿಎಂಗಳಲ್ಲಿ ಠೇವಣಿ ಇರಿಸಿದ ಹಣ ಮತ್ತು ಹಿಂಪಡೆದ ಹಣದ ನಡುವೆ ಲಕ್ಷಾಂತರ ರು. ವ್ಯತ್ಯಾಸ ಕಂಡು ಬಂದ ಸಂದರ್ಭ ಹಿನ್ನೆಲೆ ಈ ಬಗ್ಗೆ ಹೆಚ್ಚಿನ ಗಮನ ವಹಿಸಲಾಗಿದೆ.

ನಕಲಿ ಪೊಲೀಸರ ಗ್ಯಾಂಗ್ ಸೃಷ್ಟಿಸಿ ಸ್ನೇಹಿತನ ಬಳಿ ಸುಲಿಗೆ ಮಾಡಿಸಿದ್ದ ಆಪ್ತಮಿತ್ರ !ನಕಲಿ ಪೊಲೀಸರ ಗ್ಯಾಂಗ್ ಸೃಷ್ಟಿಸಿ ಸ್ನೇಹಿತನ ಬಳಿ ಸುಲಿಗೆ ಮಾಡಿಸಿದ್ದ ಆಪ್ತಮಿತ್ರ !

ಪೊಲೀಸರಿಗೆ ಈ ಬಗ್ಗೆ ಯಾವುದೇ ಕುರುಹುಗಳು ಹೇಗೆ ದೊರೆತಿಲ್ಲ ಎಂಬುದನ್ನು ತಿಳಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಎಲ್ಲಾ ಎಸ್‌ಬಿಐ ನಗದು ಠೇವಣಿ ಯಂತ್ರಗಳ ನಡುವಿನ ಸಾಮಾನ್ಯ ಅಂಶ ಒಂದಿದೆ, ಅದೇ ಜಪಾನಿನ ಸಂಸ್ಥೆಯೊಂದು ಇದನ್ನು ತಯಾರಿಸಿದೆ ಎಂಬುವುದು ಈ ತನಿಖೆಯಿಂದ ಕಂಡು ಬಂದಿದೆ.

ATMs robbed with no sign of tampering in Chennai,Bank officials left confused

ಪೊಲೀಸರ ಆರಂಭಿಕ ತನಿಖೆಯು ದರೋಡೆಕೋರರು ನಗದು ಠೇವಣಿ ಯಂತ್ರದಲ್ಲಿನ ದೋಷವನ್ನು ಗುರುತಿಸಿದ್ದಾರೆ ಎಂದು ಸೂಚಿಸುತ್ತದೆ. ಒಮ್ಮೆ ನೀವು ನಿಮ್ಮ ಪಿನ್ ಅನ್ನು ನಮೂದಿಸಿದ ಬಳಿಕ ಹಣ ಬಂದಾಗ ಗ್ರಾಹಕರು ನಿರ್ದಿಷ್ಟ ಸಮಯದದೊಳಗೆ ಅಂದರೆ 20 ಸೆಕೆಂಡುಗಳಲ್ಲಿ ಹಣವನ್ನು ತೆಗೆದುಕೊಳ್ಳಬೇಕು ಇಲ್ಲವಾದರೆ ಹಣವು ಪುನಃ ಯಂತ್ರದೊಳಗೆ ಹೋಗುತ್ತದೆ.

ಹಣ ಬಂದಾಗ ಕೈಯಲ್ಲಿ ಹಿಡಿದು ಹಣವನ್ನು ಹಿಂತೆಗೆದುಕೊಳ್ಳುವಾಗ ಸೆನ್ಸಾರ್ ಅನ್ನು ನಿಲ್ಲಿಸಲು ದರೋಡೆಕೋರರು ತಂತ್ರವನ್ನು ಬಳಸಿದ್ದಾರೆಂದು ಆರೋಪಿಸಲಾಗಿದೆ. ಹಣವನ್ನು ಯಂತ್ರದಲ್ಲೇ ಹಿಡಿದುಕೊಳ್ಳುವುದರಿಂದ 20 ಸೆಕೆಂಡುಗಳ ಬಳಿಕ ಹಣವು ವಾಪಾಸ್‌ ಹೋಗುತ್ತದೆ. ಆ ಸಂದರ್ಭದಲ್ಲೇ ಈ ಆರೋಪಿಗಳು ಹಣವನ್ನು ಪಡೆದಿದ್ದಾರೆ. ಆದರೆ ಯಂತ್ರದಲ್ಲಿ ಹಣವನ್ನು ತೆಗೆದ ಬಗ್ಗೆ ಯಾವುದೇ ಮಾಹಿತಿ ಇರದಂತೆ ತಂತ್ರ ಬಳಸಿದ್ದಾರೆ ಎಂದು ದೂರಲಾಗಿದೆ.

ಉದ್ಯೋಗಾಕಾಂಕ್ಷಿಗಳ ಗಮನಕ್ಕೆ; ಎಸ್‌ಬಿಐನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಉದ್ಯೋಗಾಕಾಂಕ್ಷಿಗಳ ಗಮನಕ್ಕೆ; ಎಸ್‌ಬಿಐನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೊಲೀಸರು ಹಲವಾರು ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿದ್ದಾರೆ. ಇಬ್ಬರು ಯಂತ್ರಗಳ ಸುತ್ತಲೂ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗುರುತಿಸಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಿಲ್ಲ.

ಏತನ್ಮಧ್ಯೆ, ಜಪಾನಿನ ಸಂಸ್ಥೆಯು ತಯಾರಿಸಿದ ಎಟಿಎಂ ಠೇವಣಿ ಯಂತ್ರಗಳನ್ನು ಹೊಂದಿರುವ ಬ್ಯಾಂಕುಗಳು ಈ ದೋಷದ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ದರೋಡೆಕೋರರಿಗೆ ಈ ದೋಷದ ಬಗ್ಗೆ ಹೇಗೆ ತಿಳಿದಿದೆ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
The Greater Chennai Police received multiple complaints that ATMs of State Bank of India were robbed at Velachery, Tharamani, Valasaravakkam and Ramapuram in Chennai. However, the ATMs showed no signs of tampering and no robbery alerts were raised, leaving bank officials and the police confused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X