• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನಿಮೊಳಿಗೆ ನೀವು ಭಾರತೀಯರೇ ಎಂಬ ಪ್ರಶ್ನೆ ಎದುರಾದಾಗ?

|
Google Oneindia Kannada News

ಚೆನೈ, ಆ.9: ಡಿಎಂಕೆ ಸಂಸದೆ ಕನಿಮೊಳಿ ಅವರಿಗೆ ವಿಮಾನ ನಿಲ್ದಾಣದಲ್ಲಿ ನೀವು ಭಾರತೀಯರೇ ಎಂಬ ಪ್ರಶ್ನೆ ಎದುರಾಗಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಫ್‌ಎಸ್‌) ಮಹಿಳಾ ಸಿಬ್ಬಂದಿಯೊಬ್ಬರು ಈ ರೀತಿ ನನ್ನನ್ನು ಪ್ರಶ್ನೆ ಮಾಡಿದ್ದಾರೆ ಎಂದು ಕನಿಮೊಳಿ ಹೇಳಿದ್ದಾರೆ. ತಮಿಳು ಅಥವಾ ಇಂಗ್ಲೀಷ್ ನಲ್ಲಿ ಮಾತನಾಡಬಾರದೇ ಎಂದು ಆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಕ್ಕೆ ಈ ರೀತಿ ಮರು ಪ್ರಶ್ನೆಯನ್ನು ಕನಿಮೊಳಿ ಎದುರಿಸಿದ್ದಾರೆ.

"ಇಂದು ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಅಧಿಕಾರಿಯೊಬ್ಬರು 'ನಾನು ಭಾರತೀಯಳೆ' ಎಂದು ಪ್ರಶ್ನಿಸಿದರು. ನನಗೆ ಹಿಂದಿ ಗೊತ್ತಿಲ್ಲ, ನನ್ನೊಂದಿಗೆ ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿ ಎಂದು ಕೇಳಿಕೊಂಡಾಗ ಈ ರೀತಿ ಪ್ರಶ್ನಿಸಿದರು. ಭಾರತೀಯರು ಎಂದರೆ ಹಿಂದಿ ಗೊತ್ತಿರಲೇಬೇಕು ಎಂಬುದು ಎಂದಿನಿಂದ ಜಾರಿಯಲ್ಲಿದೆ. hindiimposition (ಹಿಂದಿ ಹೇರಿಕೆ) ಎಂದು ಕನಿಮೊಳಿ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಹಿಂದಿ ಗೊತ್ತಿದ್ದರೆ ಮಾತ್ರ ಭಾರತೀಯರು ಎಂದರೆ ಇದು ಹಿಂದಿ ಹೇರಿಕೆ ಎಂದು ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಮೊಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಫ್‌ಎಸ್‌), ಸಂಸದೆ ಕನಿಮೊಳಿ ಬಳಿ ಕ್ಷಮೆಯಾಚಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳಿದೆ.

English summary
DMK MP Kanimozhi on Sunday said a Central Industrial Security Force officer asked her if she was an Indian, when she asked the woman official to speak in Tamil or English.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X