ಕಮಲ್ ಹಾಸನ್ ಬಂಧಿಸುವಂತೆ ತಮಿಳುನಾಡು ಸಂಘಟನೆಗಳ ಆಗ್ರಹ

ನಟ ಕಮಲ ಹಾಸನ್ ಅವರನ್ನು ಬಂಧಿಸುವಂತೆ ತಮಿಳುನಾಡಿನ ಬಲಪಂಥೀಯ ಸಂಘಟನೆಗಳ ಒತ್ತಾಯ. ಕಮಲ್ ಹಾಸನ್ ನಡೆಸಿಕೊಡುವ 'ಬಿಗ್ ಬಾಸ್ ತಮಿಳು' ರಿಯಾಲಿಟಿ ಶೋದಲ್ಲಿನ ಕೆಲ ಆಕ್ಷೇಪಾರ್ಹ ವಿಚಾರಗಳ ಬಗ್ಗೆ ಸಂಘಟನೆಗಳ ಕೋಪ.

ಚೆನ್ನೈ, ಜುಲೈ 12: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನು ಬಂಧಿಸುವಂತೆ ಬಲಪಂಥೀಯ ಸಂಘಟನೆಗಳು ತಮಿಳುನಾಡು ಸರ್ಕಾರವನ್ನು ಆಗ್ರಹಿಸಿವೆ.

ಕಮಲ ಹಾಸನ್ ನಡೆಸಿಕೊಡುತ್ತಿರುವ 'ಬಿಗ್ ಬಾಸ್ ತಮಿಳು' ರಿಯಾಲಿಟಿ ಶೋನಲ್ಲಿ ಕಮಲ ಹಾಸನ್ ಅವರು, ತಮಿಳುನಾಡು ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ನಡೆದುಕೊಂಡಿದ್ದಾರೆ ಎಂದು ಆಪಾದಿಸಿರುವ ಹಿಂದು ಮಕ್ಕಳ್ ಕಚ್ಚಿ ಪಕ್ಷ ಸೇರಿದಂತೆ ಕೆಲವಾರು ಸಂಘಟನೆಗಳು, ತಕ್ಷಣವೇ ಕಮಲ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿವೆ.

ಕಮಲ ಹಾಸನ್ ಮಾತ್ರವಲ್ಲದೇ ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿರುವ ಎಲ್ಲಾ 15 ಸ್ಪರ್ಧಾಳುಗಳನ್ನೂ ಬಂಧಿಸಬೇಕೆಂದು ಆಗ್ರಹಿಸಿವೆ.

Arrest Kamal Haasan, Ban Bigg Boss Tamil, Right-Wing Group Tells Police

'ಬಿಗ್ ಬಾಸ್ ತಮಿಳು' ರಿಯಾಲಿಟಿ ಶೋ ಮೂಲಕ, ಕಮಲ್ ಹಾಸನ್ ಅವರು ಟಿವಿ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಆ ಕಾರ್ಯಕ್ರಮವನ್ನು ಅವರೇ ನಡೆಸಿಕೊಡುತ್ತಿದ್ದಾರೆ.

ಈ ಸಂಘಟನೆಗಳು ಮಾಡುತ್ತಿರುವ ಆರೋಪವೇನೆಂದರೆ, ಬಿಗ್ ಬಾಸ್ ತಮಿಳಿನಲ್ಲಿ ಪಾಲ್ಗೊಂಡಿರುವ ಎಲ್ಲಾ ಅಭ್ಯರ್ಥಿಗಳು ಕೆಲವಾರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಅವರು ತಮ್ಮ ದೇಹದ ಶೇ. 75ರಷ್ಟು ನಗ್ನತೆ ಹೊರಸೂಸುವಂತೆ ಉಡುಗೆ ತೊಡುಗೆ ತೊಡುತ್ತಿದ್ದಾರೆ ಎಂಬುದು.

ಜೂನ್ 25ರಂದು ಪ್ರಸಾರವಾದ ಎಪಿಸೋಡ್ ನಲ್ಲಿ ಸ್ಪರ್ಧಾಳುಗಳಲ್ಲಿ ಕೆಲವರು ಜಲ್ಲಿಕಟ್ಟು ವಿವಾದದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಕೆಲ ರಾಜಕೀಯ ನಾಯಕರ ವಿರುದ್ಧ ಟೀಕೆ ಮಾಡಿದ್ದರು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ''ಬಿಗ್ ಬಾಸ್ ತಂಡದಿಂದ ತಪ್ಪಾಗಿದ್ದರೆ ಅದನ್ನು ಕಾನೂನು ನೋಡಿಕೊಳ್ಳುತ್ತದೆ'' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+