ಅಪೋಲೋ ಆಸ್ಪತ್ರೆ ಹೊರಗೆ ವ್ಯಾಪಾರಿಗಳಿಗೆ ಭರ್ತಿ ಕಮಾಯಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಅಕ್ಟೋಬರ್ 15: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆ ಹೊರಭಾಗದಲ್ಲಿ ವ್ಯಾಪಾರ-ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದೆ. ಜಯಲಲಿತಾ ಅವರ ಅಭಿಮಾನಿಗಳ ಅತಂಕ ಒಂದೆಡೆಯಿದ್ದರೆ, ಸಿಕ್ಕ ಅವಕಾಶದಲ್ಲಿ ಶೀಘ್ರವಾಗಿ ಹಣ ಮಾಡಲು ಈ ಸನ್ನಿವೇಶವನ್ನು ಬಳಸಿಕೊಳ್ಳುತ್ತಿದ್ದಾರೆ.

'ಅಮ್ಮ'ನ ಹೆಸರಿನಲ್ಲಿ ವ್ಯಾಪಾರಿಗಳು ಲಾಭ ಮಾಡುತ್ತಿದ್ದಾರೆ. ಪೆನ್, ಪೆಂಡೆಂಟ್, ಉಂಗುರ, ಪೋಸ್ಟ್ ಕಾರ್ಡ್, ಎನ್ವೆಲಪ್ ಮತ್ತು ಪೋಸ್ಟರ್ ಗಳನ್ನು ಮಾರುತ್ತಾ ದಿನಕ್ಕೆ ಎರಡು ಸಾವಿರದವರೆಗೆ ಸಂಪಾದನೆ ಮಾಡುತ್ತಿದ್ದಾರೆ. ಜಯಲಲಿತಾ ಅವರ ಅನಾರೋಗ್ಯದ ಬಗ್ಗೆ ಆತಂಕಗೊಂಡು ಆಸ್ಪತ್ರೆ ಬಳಿಗೆ ಧಾವಿಸುತ್ತಿರುವವರೇ ಈ ವ್ಯಾಪಾರಿಗಳಿಗೆ ಗ್ರಾಹಕರು.[ಜಯಲಲಿತಾ ಆಸ್ಪತ್ರೆಯಲ್ಲಿದ್ದರೆ ಪಕ್ಷ, ಆಡಳಿತದ ಸ್ಥಿತಿ ಏನು?]

Jayalalithaa

ತಲೆಗೆ ಕಟ್ಟಿಕೊಳ್ಳುವ ಹೆಡ್ ಬ್ಯಾಂಡ್, ಪರ್ಸ್, ಕೀ ಚೈನ್ ಗೆ ಭಾರೀ ಬೇಡಿಕೆ ಇದೆ. ಈ ವಸ್ತುಗಳ ಬೆಲೆ ಇಪ್ಪತ್ತರಿಂದ ನೂರೈವತ್ತರವರೆಗೆ ಇದೆ. ಪೆನ್ ನ ಬೆಲೆ ಇಪ್ಪತ್ತು ರುಪಾಯಿ. ಸದ್ಯಕ್ಕೆ ವಿಪರೀತ ಬೇಡಿಕೆ ಇರುವುದು ಪೆನ್ ಗೆ. ಅ ನಂತರ ಅಮ್ಮಾ ಕೀ ಚೈನ್ ಗೆ ಡಿಮ್ಯಾಂಡ್. ಅದರ ಬೆಲೆ ಮೂವತ್ತು ರುಪಾಯಿ.

ಒಂದು ಕಡೆ ವ್ಯಾಪಾರಿಗಳು ಲಾಭ ಮಾಡಿಕೊಳ್ಳುತ್ತಿದ್ದರೆ, ಜಯಲಲಿತಾ ಅಭಿಮಾನಿಗಳು, ಹಿತೈಶಿಗಳು ಆಸ್ಪತ್ರೆ ಹೊರಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೆಲವರಂತೂ ಕಳೆದ ಐದು ದಿನದಿಂದ ಸ್ಥಳ ಬಿಟ್ಟು ಕದಲಿಲ್ಲ. ಅದರಲ್ಲು ಶುಕ್ರವಾರ ಆಸ್ಪತ್ರೆಯಿಂದ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲವಾದ್ದರಿಂದ ಅತಂಕ ಹೆಚ್ಚಾಗಿತ್ತು.[ಜಯಲಲಿತಾ ಆರೋಗ್ಯ ಪರಿಸ್ಥಿತಿ ಮುಚ್ಚಿಡುವ ಅಗತ್ಯವೇನು: ಡಿಎಂಕೆ ಪ್ರಶ್ನೆ]

ಲಂಡನ್ ಮೂಲದ ವೈದ್ಯ ರಿಚರ್ಡ್ ಬೇಲೆ ಅವರನ್ನು ಮತ್ತೊಮ್ಮೆ ಕರೆಸಲಾಗಿದೆ. ಏಮ್ಸ್ ನ ನಿತಿನ್ ನಾಯಕ್ ಮತ್ತವರ ಸಹೋದ್ಯೋಗಿಗಳು ಅಪೋಲೋ ಆಸ್ಪತ್ರೆಯಲ್ಲೇ ಇದ್ದಾರೆ. ಸಿಂಗಾಪುರದಿಂದ ತಜ್ಞ ವೈದ್ಯರ ತಂಡವನ್ನು ಕರೆಸಲು ನಿರ್ಧರಿಸಲಾಗಿದೆ. ಭಾನುವಾರ ರಾತ್ರಿ ಅವರು ಬರಬಹುದು.[ಜಯಲಲಿತಾರನ್ನು ಭೇಟಿ ಮಾಡಿದ ಅಮಿತ್ ಷಾ, ಜೇಟ್ಲಿ]

ಮಾಜಿ ರಾಜ್ಯಪಾಲ ಹಾಗೂ ಜಯಲಲಿತಾ ನಿಕಟವರ್ತಿಗಳಲ್ಲಿ ಒಬ್ಬರಾದ ರೋಸಯ್ಯ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಕೆ ಎಲ್ಲ ಅನಾರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಾರೆ. ನನ್ನ ಪ್ರಾರ್ಥನೆ ಫಲ ಕೊಡುತ್ತದೆ. ದೇವರು ಆಕೆಗೆ ಒಳ್ಳೆ ಆರೋಗ್ಯ ದಯಪಾಲಿಸಲಿ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
There is a lot of activity outside the Appolo Hospital in Chennai where Tamil Nadu chief minister undergoing treatment. Vendors have set up shops selling Amma merchandise. These include pens, pendants, rings, postcards, envelopes and posters. Vendors make around Rs 2,000 a day.
Please Wait while comments are loading...