ಟಿಟಿವಿ ದಿನಕರನ್ ಬೆಂಬಲಿತ ಕರ್ನಾಟಕ ಎಐಎಡಿಎಂಕೆ ಮುಖ್ಯಸ್ಥನ ಉಚ್ಛಾಟನೆ

ಚೆನ್ನೈ, ಡಿಸೆಂಬರ್ 25: ಆರ್.ಕೆ ನಗರ ಉಪಚುನಾವಣೆಯಲ್ಲಿ ಶಶಿಕಲಾ ನಟರಾಜನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಜಯ ಸಾಧಿಸುತ್ತಿದ್ದಂತೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಕ್ರುದ್ಧರಾಗಿದ್ದಾರೆ.

ದಿನಕರನ್ ಬೆಂಬಲಿತ 9 ಎಐಎಡಿಎಂಕೆಯ ಪ್ರತಿನಿಧಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಇಂದು ಚೆನ್ನೈನಲ್ಲಿ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಒ ಪನ್ನೀರ್ ಸೆಲ್ವಂ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಪಾಲ್ಗೊಂಡಿದ್ದರು.

AIADMK to sack 6 office bearers supporting Dhinakaran

ಭಾನುವಾರ ಹೊರಬಿದ್ದ ಆರ್.ಕೆ ನಗರ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ 40,707 ಸಾವಿರ ಮತಗಳಿಂದ ಎಐಎಡಿಎಂಕೆ ಅಭ್ಯರ್ಥಿ ಇ ಮಧುಸೂದನ್ ರನ್ನು ಸೋಲಿಸಿದ್ದರು. ಈ ಗೆಲುವಿಗೆ ಸಹಕರಿಸಿದ್ದಾರೆ ಎಂಬ ಆರೋಪದ ಮೇಲೆ ಆರು ಪದಾಧಿಕಾರಿಗಳನ್ನು ಪಕ್ಷದಿಂದ ಕಿತ್ತು ಹಾಕಲಾಗಿದೆ.

ಉಚ್ಛಾಟಿತರಲ್ಲಿ ಟಿಟಿವಿ ದಿನಕರನ್ ರ ಪ್ರಮುಖ ಬೆಂಬಲಿಗರಾದ ಪಿ ವೆಟ್ರಿವೇಲ್, ತಂಗತಮಿಲ್ ಸೆಲ್ವನ್, ಎಂ. ರಂಗಸ್ವಾಮಿ, ವಿ.ಪಿ. ಕಲೈರಾಜನ್, ಎನ್.ಜಿ. ಪರ್ತಿಬನ್, ವಿ. ಮುತೈಯ, ವಿ.ಎ ಪುಗುಳೇಂದಿ, ನಂಚಿಲ್ ಸಂಪತ್ ಮತ್ತು ಸಿ.ಆರ್. ಸರಸ್ವತಿ ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+