ಕಮಲ್ ಹಾಸನ್ ರ ರಾಜಕೀಯ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಗುರುತು

ಚೆನ್ನೈ, ಮಾರ್ಚ್ 10: ನಟ- ರಾಜಕಾರಣಿ ಕಮಲ್ ಹಾಸನ್ ರ ಪಕ್ಷಕ್ಕೆ ಲೋಕಸಭೆ ಚುನಾವಣೆಗೆ 'ಬ್ಯಾಟರಿ ಟಾರ್ಚ್' ಅನ್ನು ಚಿಹ್ನೆಯಾಗಿ ನೀಡಲಾಗಿದೆ. ಈ ನಿರ್ಧಾರವನ್ನು ಸ್ವಾಗತಿಸಿದ ಕಮಲ್ ಹಾಸನ್, ಮಕ್ಕಳ್ ನೀದಿ ಮೈಯ್ಯಮ್ (ಎಂಎನ್ ಎಮ್) ಪಕ್ಷವು ತಮಿಳುನಾಡು ಹಾಗೂ ಭಾರತ ರಾಜಕೀಯ ಹೊಸ ಯುಗಕ್ಕೆ ಯಶಸ್ಸಿನ ಬೆಳಕಿನ ಹಾದಿ ತೋರುತ್ತದೆ ಎಂದಿದ್ದಾರೆ.

ತಮಿಳುನಾಡಿನ ಪ್ರಮುಖ ಪಕ್ಷಗಳು ತಮ್ಮ ಮೈತ್ರಿಯನ್ನು ಘೋಷಿಸಿವೆ. ಬಿಜೆಪಿ ಜತೆಗೆ ಎಐಎಡಿಎಂಕೆ ಹಾಗೂ ಕಾಂಗ್ರೆಸ್ ಜತೆಗೆ ಡಿಎಂಕೆ ಮೈತ್ರಿಯನ್ನು ಘೋಷಿಸಿವೆ. ಕಮಲ್ ಹಾಸನ್ ರ ಪಕ್ಷವು ತಮಿಳುನಾಡಿನ ಮೂವತ್ತೊಂಬತ್ತು ಹಾಗೂ ಪುದುಚೆರಿಯಲ್ಲಿನ ಏಕೈಕ ಲೋಕಸಭಾ ಕ್ಷೇತ್ರದಿಂದ ಎಂಎನ್ ಎಮ್ ಸ್ಪರ್ಧೆ ಮಾಡಲಿದೆ.

Actor turned politician Kamal Haasans party gets Battery Torch as poll symbol

ಕಳೆದ ವರ್ಷ ಕಮಲ್ ಹಾಸನ್ ಅವರು ಹೊಸ ಪಕ್ಷದ ಘೋಷಣೆ ಮಾಡಿದ್ದರು. ತಮಿಳುನಾಡಿನ 'ಎ ತಂಡ'ವೇ ತಮ್ಮ ಪಕ್ಷ ಎಂದು ಕಮಲ್ ಹೇಳಿದ್ದು, ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷವು ಜಯ ಸಾಧಿಸಲಿದೆ ಎಂದಿದ್ದರು. ಜೆ.ಜಯಲಲಿತಾ ಹಾಗೂ ಕರುಣಾನಿಧಿ ಅವರ ನಿಧನ ನಂತರ ಇದೇ ಮೊದಲ ಚುನಾವಣೆಯು ತಮಿಳುನಾಡಿನಲ್ಲಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+