ಶಿಶುಕಾಮಿ, 99 ವರ್ಷದ ನಿವೃತ್ತ ಮುಖ್ಯೋಪಾಧ್ಯಾಯ ಬಂಧನ

ಚೆನ್ನೈ, ಜುಲೈ 9: ಹತ್ತು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 99 ವರ್ಷದ, ನಿವೃತ್ತ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಹೆಸರು ಪರಶುರಾಮನ್. ಹತ್ತು ಮನೆಗಳನ್ನು ಬಾಡಿಗೆಗೆ ಎಂದು ಕೊಟ್ಟಿದ್ದು, ಆ ಪೈಕಿ ಒಂದರಲ್ಲಿ ವಾಸವಿದ್ದ ದಂಪತಿಯ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದೆ.

ಹತ್ತು ವರ್ಷದ ಬಾಲಕಿಗೆ ದಿಢೀರನೇ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಕರೆದುಕೊಂಡು ಹೋದರೂ ಅದು ವಾಸಿಯಾಗಿಲ್ಲ. ಆಗ ಆ ಬಾಲಕಿಯೇ 'ಓನರ್ ತಾತಾ' ಹೀಗೆಲ್ಲ ಮಾಡಿತು ಅಂತ ಹೇಳಿದೆ. ಅಂದಹಾಗೆ ವೃದ್ಧ ಪರಶುರಾಮನ್ ಪತ್ನಿ ಹಾಸಿಗೆ ಹಿಡಿದಿದ್ದಾರೆ. ಅವರ ಸೇವೆಗಾಗಿ ಬಾಲಕಿಯ ತಾಯಿ ಪಾರ್ಟ್ ಟೈಮ್ ಕೆಲಸ ಎಂಬಂತೆ ಹೋಗುತ್ತಾರೆ.

ಹಾಗೆ ಸೇವೆ ಮಾಡುವುದಕ್ಕೆ ಸಂಬಳ ಅಂತಲೂ ಸ್ವಲ್ಪ ಮಟ್ಟಿಗೆ ಹಣ ಕೊಡುತ್ತಿದ್ದರು. ಇನ್ನು ಪರಶುರಾಮನ್ ಮನೆಯಲ್ಲಿ ಕಾರು ಶೆಡ್ ಇದ್ದು, ಅಲ್ಲೊಂದು ಕುರ್ಚಿಯ ಮೇಲೆ ಈತ ಕೂತುಕೊಂಡರೆ, ಸುತ್ತಲೂ ಅಕ್ಕಪಕ್ಕದ ಮನೆಯ ಮಕ್ಕಳು ಸೇರುತ್ತಾರೆ. ಕಾರು ಶೆಡ್ ನ ಮುಂಭಾಗ ಬಟ್ಟೆಯೊಂದನ್ನು ಮುಚ್ಚಲಾಗಿರುತ್ತಿತ್ತು. ಆ ವೇಳೆ ಮಕ್ಕಳು ಒಳಗಿರುವಾಗ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಆರೋಪ ಕೇಳಿಬಂದಿದೆ.

99 year old retire principal held for sexual abuse of minor

ಹಾಗಂತ ಈ ವ್ಯಕ್ತಿ ಮೇಲೆ ಆರೋಪ ಬಂದಿರುವುದು ಇದೇ ಮೊದಲೇನಲ್ಲ. ಒಂಬತ್ತು ವರ್ಷದ ಇನ್ನೊಂದು ಮಗುವಿನ ಮೇಲೂ ಅದೇ ಶೆಡ್ ನಲ್ಲಿ ದೌರ್ಜನ್ಯ ನಡೆಸಿದ ಬಗ್ಗೆ, ಆ ನಂತರ ಬಾಲಕಿ ಪೋಷಕರು ಅಲ್ಲಿಂದ ಮನೆ ಖಾಲಿ ಮಾಡಿಕೊಂಡು ಹೋದ ಬಗ್ಗೆ ಮಾತುಗಳು ಕೇಳಿಬರುತ್ತವೆ. ಅದೇ ವೇಳೆ ಹೆಡ್ ಮಾಸ್ಟರ್ ಆಗಿದ್ದ ವ್ಯಕ್ತಿ ಮಕ್ಕಳೊಂದಿಗೆ ಹೇಗೆ ನಡೆದುಕೊಂಡಿರಬಹುದು ಎಂಬ ಗುಮಾನಿ ಕೂಡ ವ್ಯಕ್ತವಾಗುತ್ತಿದೆ.

ಪರಶುರಾಮನ್ ಅವರ ಮಕ್ಕಳು ಸಂತ್ರಸ್ತ ಬಾಲಕಿಯ ಪೋಷಕರ ಜತೆಗೆ ಸಂಧಾನಕ್ಕೆ ಯತ್ನಿಸಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ಮನೆ ಖಾಲಿ ಮಾಡಿಸಲು ಯತ್ನಿಸಿದ್ದಾರೆ. ಈಗ ಕೂಡ ಪರಶುರಾಮನ್ ನ ಸಂಬಂಧಿಕರೇ ಈ ಎಲ್ಲ ಸಂಗತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ನಾನೇನೂ ಮಾಡೇ ಇಲ್ಲ ಎಂಬ ವಾದ ಮುಂದಿಡುತ್ತಿದ್ದಾರೆ ರಿಟೈರ್ ಹೆಡ್ ಮಾಸ್ಟರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+