ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

65ರ ಈ ಮಹಿಳೆ ವಾಸ 20 ವರ್ಷದಿಂದ ಸಾರ್ವಜನಿಕ ಶೌಚಾಲಯದಲ್ಲಿ

|
Google Oneindia Kannada News

ಮದುರೈ (ತಮಿಳುನಾಡು), ಆಗಸ್ಟ್ 23: ಎರಡು ದಶಕದಿಂದ ಸಾರ್ವಜನಿಕ ಶೌಚಾಲಯವನ್ನೇ ಮನೆಯಂತೆ ಮಾಡಿಕೊಂಡು, ಜೀವನ ನಡೆಸುತ್ತಿರುವ ಈ ಮಹಿಳೆಗೆ ತನ್ನ ಅರವತ್ತೈದನೇ ವಯಸ್ಸಿನಲ್ಲಿ ನೆರವಿನ ಹಸ್ತ ಚಾಚುತ್ತಿದ್ದಾರೆ ಜನರು. ಈಕೆ ಹೆಸರು ಕರುಪ್ಪಾಯಿ. ತಮಿಳುನಾಡಿನ ಮದುರೈನ ರಾಮ್ ನಾಡ್ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲೇ ಕಳೆದ ಇಪ್ಪತ್ತು ವರ್ಷದಿಂದ ವಾಸ ಮಾಡುತ್ತಿದ್ದಾರೆ.

ವೈರಲ್ ಆಯ್ತು ಮಾತುಬಾರದ ಮಹಿಳೆಯ ಮೌನಭಾಷೆಯ ವಿಡಿಯೋವೈರಲ್ ಆಯ್ತು ಮಾತುಬಾರದ ಮಹಿಳೆಯ ಮೌನಭಾಷೆಯ ವಿಡಿಯೋ

ಜೀವನ ನಿರ್ವಹಣೆಗೆ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಾರೆ. ಅದರಿಂದ ಆಕೆಗೆ ದಿನಕ್ಕೆ ಎಪ್ಪತ್ತರಿಂದ ಎಂಬತ್ತು ರುಪಾಯಿ ವರಮಾನ ಇದೆ. "ನಾನು ಹಿರಿಯ ನಾಗರಿಕರ ಪಿಂಚಣಿಗಾಗಿ ಅರ್ಜಿ ಹಾಕಿದೆ. ಆದರೆ ನನಗೆ ದೊರೆಯಲಿಲ್ಲ. ಕಲೆಕ್ಟರ್ ಕಚೇರಿಯಲ್ಲಿ ಹಲವು ಅಧಿಕಾರಿಗಳನ್ನು ಭೇಟಿ ಮಾಡಿದೆ. ಯಾವುದರಿಂದಲೂ ಪ್ರಯೋಜನ ಆಗಿಲ್ಲ" ಎಂದು ಎಎನ್ ಐ ಸುದ್ದಿ ಸಂಸ್ಥೆ ಬಳಿ ತಮ್ಮ ಸಂಕಷ್ಟವನ್ನು ಕರುಪ್ಪಾಯಿ ಹೇಳಿಕೊಂಡಿದ್ದಾರೆ.

65 Year Old Woman Living in Public Toilet From Past 20 Years in Madurai

ಬೇರೆ ಯಾವುದೇ ಆದಾಯ ಮೂಲ ಇಲ್ಲದ ಕಾರಣದಿಂದ ಇಂಥದ್ದೊಂದು ಜೀವನ ಶೈಲಿಗೆ ಒಗ್ಗಿಕೊಳ್ಳುವುದು ಕರುಪ್ಪಾಯಿಗೆ ಅನಿವಾರ್ಯ ಆಗಿದೆ. ''ನನಗೆ ಬೇರೆ ಯಾವುದೇ ಆದಾಯ ಮೂಲ ಇಲ್ಲ. ಆದ್ದರಿಂದ ಈ ಸಾರ್ವಜನಿಕ ಶೌಚಾಲಯದಲ್ಲೇ ವಾಸ ಇದ್ದೀನಿ. ದಿನಕ್ಕೆ ಎಪ್ಪತ್ತರಿಂದ ಎಂಬತ್ತು ರುಪಾಯಿ ದುಡಿಯುತ್ತೀನಿ. ನನಗೆ ಒಬ್ಬಳು ಮಗಳಿದ್ದಾಳೆ. ಅವಳು ಯಾವತ್ತಿಗೂ ನನ್ನನ್ನು ನೋಡಲು ಬಂದಿಲ್ಲ" ಎನ್ನುತ್ತಾರೆ.

65 Year Old Woman Living in Public Toilet From Past 20 Years in Madurai

ಕರುಪ್ಪಾಯಿ ಬಗ್ಗೆ ಎಎನ್ ಐ ಸುದ್ದಿ ಸಂಸ್ಥೆಯಿಂದ ವರದಿ ಆದ ಮೇಲೆ ಹಲವು ಮಂದಿ ನೆರವು ನೀಡಲು ಮುಂದೆ ಬಂದಿದ್ದಾರೆ. ಇನ್ನೂ ಹಲವರು ಸರಕಾರಿ ಅಧಿಕಾರಿಗಳ ಗಮನಕ್ಕೆ ತಂದು, ಕರುಪ್ಪಾಯಿಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

English summary
Karuppayi, 65 year old woman living in public toilet from past 20 years in Tamil Nadu's Madurai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X