Breaking; ಮದ್ರಾಸ್ ಐಐಟಿಯಲ್ಲಿ ಕೋವಿಡ್ ಪ್ರಕರಣ 55ಕ್ಕೆ ಏರಿಕೆ
ಚೆನ್ನೈ, ಏಪ್ರಿಲ್ 24; ಮದ್ರಾಸ್ ಐಐಟಿ ಕ್ಯಾಂಪಸ್‌ನಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿಗಳು ಹೇಳಿದ್ದಾರೆ.
ಐಐಟಿ ಕ್ಯಾಂಪಸ್‌ನ 1420 ಜನರ ಪೈಕಿ 55 ಜನರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. ಕೋವಿಡ್ ಸೋಂಕು ತಗುಲಿದ ಎಲ್ಲರಿಗೂ ಸೋಂಕಿನ ಸಾಮಾನ್ಯ ಲಕ್ಷಣಗಳಿವೆ. ಏಪ್ರಿಲ್ 21ರಂದು ಮೊದಲ ಬಾರಿಗೆ 12 ಜನರಿಗೆ ಕ್ಯಾಂಪಸ್‌ನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು.
ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ರಾಜ್ಯದ ಕೋವಿಡ್ ಲಸಿಕೆ ವಾರ್ ರೂಂಗೆ ಭೇಟಿ ನೀಡಿದ್ದರು. 55 ಪ್ರಕರಣಗಳು ದಾಖಲಾದರೂ ಐಐಟಿ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿಸಿದರು.

ಐಐಟಿ ಕ್ಯಾಂಪಸ್‌ನಲ್ಲಿಯೇ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಆಡಳಿತಾಧಿಕಾರಿಗಳು ಅದನ್ನು ಸಮರ್ಪಕವಾಗಿ ಉಪಯೋಗಿಸುತ್ತಿದ್ದಾರೆ ಎಂದರು. ಸೋಂಕು ಪತ್ತೆಯಾದ ಎಲ್ಲರ ಆರೋಗ್ಯ ಸಹ ಸ್ಥಿರವಾಗಿದೆ.
ತಮಿಳುನಾಡು ಸರ್ಕಾರ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ವಾಪಸ್ ಪಡೆದಿಲ್ಲ. ಆದರೆ ದಂಡ ಹಾಕುವ ಪ್ರಕ್ರಿಯೆಯನ್ನು ಕಡಿಮೆ ಮಾಡಿದೆ. ರಾಜ್ಯದಲ್ಲಿ ಶೇ 97ರಷ್ಟು ಜನರು ಮೊದಲ ಡೋಸ್ ಮತ್ತು ಶೇ 77ರಷ್ಟು ಜನರು 2ನೇ ಡೋಸ್ ಲಸಿಕೆ ಪಡೆದಿದ್ದಾರೆ.
ಬೂಸ್ಟರ್ ಡೋಸ್ ಲಸಿಕೆ ನೀಡಲು ವಿಶೇಷ ಅಭಿಯಾನವನ್ನು ತಮಿಳುನಾಡು ಸರ್ಕಾರ ಕೈಗೊಂಡಿದೆ. ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಈ ಅಭಿಯಾನದ ಉಸ್ತುವಾರಿಯನ್ನು ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ.
ಭಾನುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಭಾರತದಲ್ಲಿ 2,593 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 15,873.












Click it and Unblock the Notifications