ನೆಟ್ಟಿಗರ ಗಮನ ಸೆಳೆದ 200 ವರ್ಷ ಹಳೆಯದಾದ ಹಲಸಿನ ಮರ; ವಿಡಿಯೋ ನೋಡಿ
ಚೆನ್ನೈ, ಸೆ. 26; ಭಾರತವು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ. ವೈವಿದ್ಯತೆಗೆ ಹೆಸರಾದ ದೇಶದಲ್ಲಿ ವಿವಿಧ ಋತುಗಳಲ್ಲಿ ವಿವಿಧ ರೀತಿಯ ಹಣ್ಣುಗಳು ಮತ್ತು ತರಕಾರಿಗಳು ದೊರೆಯುತ್ತವೆ. ಕೆಲವೊಮ್ಮೆ ಒಂದೊಂದು ಹಣ್ಣು, ಮರ, ತರಕಾರಿ ನಮ್ಮನ್ನು ವಿಸ್ಮಯಕ್ಕೂ ದೂಡುತ್ತದೆ.
ಹೌದು, ಹೀಗೆ ನೆಟ್ಟಿಗರನ್ನು ವಿಸ್ಮಯಕ್ಕೆ ದೂಡಿರುವುದು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪುರಾತನವಾದ ಹಲಸಿನ ಮರ. ಮರದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ.
ಮೂರು ದಿನಗಳ ಹಿಂದೆ ಅಪರ್ಣಾ ಕಾರ್ತಿಕೇಯನ್ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ "ಆಯಿರಂಕಾಚಿ ಸುತ್ತಮುತ್ತ: ಈ ಹಲಸಿನ ಮರವು 200 ವರ್ಷಗಳಷ್ಟು ಹಳೆಯದು ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಯ ವಿಐಪಿಯಾಗಿದೆ. ಮರದ ಮುಂದೆ ನಿಲ್ಲುವುದು ಒಂದು ಗೌರವ" ಎಂದು ಬರೆದುಕೊಂಡಿದ್ದರು.

ಈ 200 ವರ್ಷಗಳಷ್ಟು ಹಳೆಯ ಮರದಿಂದ ಹಲವಾರು ಹಲಸುಗಳು ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮರ ತುಂಬಾ ವಿಶಾಲವಾದ ಕಾಂಡವನ್ನು ಹೊಂದಿದ್ದು, ಹಲವಾರು ದೊಡ್ಡ ದೊಡ್ಡ ಕೊಂಬೆಗಳನ್ನು ಹೊಂದಿದೆ.
All around Aayiramkachi:
— Aparna Karthikeyan (@AparnaKarthi) September 23, 2022
This jackfruit tree is 200 years old & is a VIP in Cuddalore district, Tamil Nadu.
To stand before the tree is an honour. To walk around it, a privilege.
The 7th piece in my series Let Them Eat Rice for PARI
CC:@azimpremjiunivhttps://t.co/1cB1yLSfCT pic.twitter.com/459mMnu90v
ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಪ್ರಕಾರ, ಆಯಿರಂಕಾಚಿ ವಿಶಾಲವಾದ, ಎತ್ತರದ ಮತ್ತು ಫಲಭರಿತವಾದ ಪಾಲಾ ಮರಮ್ (ಹಲಸು) ಮರವಾಗಿದೆ. ಇದು ಎಷ್ಟು ದೊಡ್ಡದಾಗಿದೆ ಎಂದರೆ ಅದರ ಸುತ್ತಲೂ ನಡೆಯಲು 25 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇದರ ಹಳೆಯ ಕಾಂಡವು ಸುಮಾರು ನೂರು ಹಸಿರು ಹಲಸಿನ ಹಣ್ಣುಗಳಿಂದ ಮುಚ್ಚಲ್ಪಟ್ಟಿದೆ.
ಈ ವಿಡಿಯೋವನ್ನು ಹಂಚಿಕೊಂಡಾಗಿನಿಂದ, 13,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಮಂದಿ ಇಷ್ಟಪಟ್ಟಿದ್ದಾರೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಹಲವಾರು ಬಳಕೆದಾರರು ಪ್ರಾಚೀನ ಮರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೆಲವರು ಮರದ ಹಣ್ಣಿನ ರುಚಿ ನೋಡುವುದು ಕೂಡ ಒಂದು ಆಶೀರ್ವಾದ ಎಂದು ಬರೆದಿದ್ದಾರೆ.
ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಹಣ್ಣುಗಳಿಗೆ ನೆಲೆಯಾಗಿದೆ. ಇದನ್ನು ಸಾಮಾನ್ಯವಾಗಿ "ಜಾಕ್" ಎಂದು ಕರೆಯಲಾಗುತ್ತದೆ. ಈ ಹೆಸರು ಜಾಕಾದ ಪೋರ್ಚುಗೀಸ್ ರೂಪಾಂತರವಾಗಿದೆ. ಇದು ಮಲಯಾಳಂ ಪದ "ಚಕ್ಕ" ದಿಂದ ಬಂದಿದೆ. ಆರ್ಟೊಕಾರ್ಪಸ್ ಹೆಟೆರೊಫಿಲ್ಲಸ್ ಇದರ ಸುದೀರ್ಘ ವೈಜ್ಞಾನಿಕ ಹೆಸರು ಎಂದು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (PARI) ಹೇಳಿದೆ.
-
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್












Click it and Unblock the Notifications