ಅಸ್ತಿತ್ವಕ್ಕೆ ಬಂತು ಸಾಫ್ಟ್ ವೇರ್ ಇಂಜಿನಿಯರ್ ಗಳ ಸಂಘ

Posted By:
Subscribe to Oneindia Kannada

ಚೆನ್ನೈ, ಮೇ 17: ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಚೆನ್ನೈನ ಸಾಫ್ಟ್ ವೇರ್ ಉದ್ಯೋಗಿಗಳು ನೂತನ ಸಂಘವೊಂದನ್ನು ಕಟ್ಟಿದ್ದಾರೆ. ದೇಶದಲ್ಲಿ ಸಾಫ್ಟ್ ವೇರ್ ಉದ್ಯೋಗಿಗಳೇ ಸೇರಿ ಸ್ಥಾಪಿಸಿರುವ ಮೊದಲ ಸಂಘ ಇದಾಗಿದೆ.

ವಿಪ್ರೋ, ಇನ್ಫೋಸಿಸ್ ಸೇರಿದಂತೆ ಭಾರತೀಯ ಐಟಿ ವಲಯದ ದೊಡ್ಡ ಕಂಪನಿಗಳೇ ತಮ್ಮಲ್ಲಿನ ಸಾವಿರಾರು ಟೆಕಿಗಳಿಗೆ ಕೊಕ್ ನೀಡಲು ಮುಂದಾಗಿವೆ.

100 software professionals in TN form India's 1st union for techies

ಈ ಹಿನ್ನೆಲೆಯಲ್ಲಿ, ತಮಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಸುಮಾರು 100 ಟೆಕಿಗಳು ಸಂಘವೊಂದನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಈ ಮೂಲಕ, ಟೆಕಿಗಳ ಕ್ಷೇಮ ಹಾಗೂ ಉದ್ಯೋಗ ಭದ್ರತೆಗಾಗಿ ಹೋರಾಡುವ ಇರಾದೆ ಅವರದ್ದು.

ಸದ್ಯಕ್ಕೆ ನೂರು ಜನರ ಸದಸ್ಯತ್ವ ಇರುವ ಈ ಸಂಸ್ಥೆಗೆ ಇನ್ನು ಕೆಲವೇ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟೆಕಿಗಳು ಸೇರ್ಪಡೆಗೊಂಡರೆ ಅಚ್ಚರಿಪಡಬೇಕಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In Tamil Nadu, as many as 100 software professionals have signed up as primary members of a union that has been formed to safeguard interests of employees in India's information technology sector.
Please Wait while comments are loading...