• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೈಯಲ್ಲಿ ಮಗು ಹಿಡಿದು ಟ್ರಾಫಿಕ್ ನಿಯಂತ್ರಿಸಿದ ಮಹಿಳಾ ಪೊಲೀಸ್: ವೈರಲ್ ವಿಡಿಯೋ

|

ಚಂಡೀಗಡ, ಮಾರ್ಚ್ 6: ಚಂಡೀಗಡದ ಮಹಿಳಾ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ತಮ್ಮ ಹಸುಗೂಸನ್ನು ಕೈಯಲ್ಲಿ ಇರಿಸಿಕೊಂಡು ಬಿರು ಬಿಸಿಲಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಚಂಡೀಗಡದ ಸೆಕ್ಟರ್ 23-24ರಲ್ಲಿನ ರಸ್ತೆಯಲ್ಲಿ ಪುಟ್ಟ ಕಂದಮ್ಮನನ್ನು ಹೆಗಲಿಗೆ ಆನಿಸಿಕೊಂಡು ಟ್ರಾಫಿಕ್ ನಿರ್ವಹಣೆ ಮಾಡುವ ದೃಶ್ಯಕ್ಕೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಪ್ರಿಯಾಂಕಾ, ಒಂದು ಕೈಯಲ್ಲಿ ಮಗು ಹಿಡಿದುಕೊಂಡು ಕಾರ್ಯನಿರ್ವಹಿಸಲು ಪರದಾಡಿದ್ದಾರೆ. ಅಲ್ಲಿ ಸಾಗುತ್ತಿದ್ದ ಪಾದಚಾರಿಯೊಬ್ಬರು ಈ ವಿಡಿಯೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ವಿಡಿಯೋ: ಒಂದು ಸಾವಿರ ರೂ. ಗೆ ಐದು ಲೀಟರ್ ಪೆಟ್ರೋಲ್, ಭಾರಿ ಮೋಸ!ವಿಡಿಯೋ: ಒಂದು ಸಾವಿರ ರೂ. ಗೆ ಐದು ಲೀಟರ್ ಪೆಟ್ರೋಲ್, ಭಾರಿ ಮೋಸ!

ಮಗುವಿನೊಂದಿಗೆ ಸಂಚಾರ ಕಚೇರಿಗೆ ಬಂದಿದ್ದ ಕಾನ್‌ಸ್ಟೆಬಲ್‌ಗೆ ರಜೆ ಬೇಕಿದ್ದರೆ ತೆಗೆದುಕೊಂಡು ಮನೆಗೆ ಹೋಗುವಂತೆ ಸಿಬ್ಬಂದಿ ಹೇಳಿದ್ದರು. ಆದರೆ ಮಗುವಿನೊಂದಿಗೇ ಕರ್ತವ್ಯ ನಿರ್ವಹಣೆ ಮಾಡಲು ಅವರು ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಾಗ್ವಾದ ನಡೆಸಿದ್ದರು...

ವಾಗ್ವಾದ ನಡೆಸಿದ್ದರು...

ಪ್ರಿಯಾಂಕಾ ಅವರಿಗೆ ಬೆಳಿಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಬಂದಿರಲಿಲ್ಲ. ಅವರಿಗೆ ಕರೆ ಮಾಡಿ ಕರ್ತವ್ಯಕ್ಕೆ ಬರುವಂತೆ ಒತ್ತಾಯಿಸಲಾಗಿತ್ತು. ಇದರಿಂದ ಅವರು ತಮ್ಮ ಹಿರಿಯ ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿದ್ದರು. ಬಳಿಕ ಮಗುವನ್ನು ಹಿಡಿದುಕೊಂಡೇ ಕೆಲಸಕ್ಕೆ ಹಾಜರಾಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸ್ಫೂರ್ತಿದಾಯಕ ನಡೆ

ಆದರೆ ಈ ವಿಡಿಯೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಸ್ಫೂರ್ತಿದಾಯಕ ನಡೆ. ಆಕೆ ಬಿಸಿಲಲ್ಲಿ ಮಗುವನ್ನು ಹಿಡಿದುಕೊಂಡು ಕರ್ತವ್ಯ ನಿರ್ವಹಣೆ ಮಾಡುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.

ಚಿಂದಿ ಆಯುವ ಸಹೋದರರ ಗಾಯನಕ್ಕೆ ಮನಸೋತ ಆನಂದ್ ಮಹೀಂದ್ರಾ: ವೈರಲ್ ವಿಡಿಯೋಚಿಂದಿ ಆಯುವ ಸಹೋದರರ ಗಾಯನಕ್ಕೆ ಮನಸೋತ ಆನಂದ್ ಮಹೀಂದ್ರಾ: ವೈರಲ್ ವಿಡಿಯೋ

ವಿಭಕ್ತ ಕುಟುಂಬಗಳ ಪರಿಣಾಮ

ವಿಭಕ್ತ ಕುಟುಂಬಗಳ ಪರಿಣಾಮ

ಇನ್ನು ಅನೇಕರು ಪ್ರಿಯಾಂಕಾ ಅವರ ನಡೆಯನ್ನು ಟೀಕಿಸಿದ್ದಾರೆ. ಸಣ್ಣ ಮಗು ಈ ರೀತಿಯ ಬಿಸಿಲು ಹಾಗೂ ದೂಳನ್ನು ಸೇವಿಸಿದರೆ ಅದರ ಆರೋಗ್ಯಕ್ಕೆ ಮಾರಕ. ಮಕ್ಕಳನ್ನು ಸುರಕ್ಷಿತವಾಗಿರಿಸುವುದು ನಮ್ಮ ಮೊದಲ ಕರ್ತವ್ಯ. ಅದಕ್ಕಿಂತ ಯಾವ ಕರ್ತವ್ಯವೂ ದೊಡ್ಡದಲ್ಲ ಎಂದು ಹೇಳಿದ್ದಾರೆ. ವಿಭಕ್ತ ಕುಟುಂಬಗಳತ್ತ ಜನರು ಒಲವು ತೋರಿಸುತ್ತಿರುವುದರ ಫಲಿತಾಂಶ ಇದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅನುಕಂಪ, ಪ್ರಚಾರದ ತಂತ್ರ

ಅನುಕಂಪ, ಪ್ರಚಾರದ ತಂತ್ರ

ಕೆಲವರಿಗೆ ಈ ರೀತಿ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಮೂಲಕ ಅನುಕಂಪ ಮತ್ತು ಪ್ರಚಾರ ಗಿಟ್ಟಿಸಿಕೊಳ್ಳುವುದು ಚಾಳಿಯಾಗಿದೆ. ಈ ಮೂಲಕ ನಮ್ಮ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗುವಂತೆ ಮಾಡುತ್ತಾರೆ. ಮಕ್ಕಳನ್ನು ನಿಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟುಬಿಡಿ ಎಂದು ಆಗ್ರಹಿಸಿದ್ದಾರೆ.

English summary
A video goes viral of a Chandigarh woman traffic constable performs duty while holding her baby in arms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X