Get Updates
Get notified of breaking news, exclusive insights, and must-see stories!

ಪಂಜಾಬ್‌ ಸಿಎಂ ವರಿಸಲಿರುವ ಗುರ್‌ಪ್ರಿತ್‌ ಕೌರ್‌ ಯಾರು ಗೊತ್ತಾ?

ಚಂಡಿಗಢ, ಜು.7: ಮೊದಲ ಪತ್ನಿಗೆ ವಿಚ್ಚೇದನ ನೀಡಿ ಈಗ ಎರಡನೇ ಬಾರಿ ವಿವಾಹಕ್ಕೆ ಅಣಿಯಾಗುತ್ತಿರುವ 48 ವರ್ಷದ ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್‌ ಸದ್ಯ ಹರಿಯಾಣ ಮೂಲದ ಫಿಜಿಷಿಯನ್‌(ಡಾಕ್ಟರ್‌) ಗುರುಪ್ರಿತ್‌ ಕೌರ್‌ ಅವರನ್ನು ವಿವಾಹವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ಗುರುಪ್ರಿತ್‌ ಕೌರ್‌ ಯಾರು ಎಂಬ ಮಾಹಿತಿ ಇಲ್ಲಿದೆ.

Recommended Video

      Bhagwant Mann Singhಗೆ ಮದುವೆಯಲ್ಲಿ Kejriwal ಮುಖ್ಯ ಅತಿಥಿ | *India | OneIndia Kannada

      2015ರಲ್ಲಿ ಭಗವಂತ ಮಾನ್ ತನ್ನ ಮೊದಲ ಹೆಂಡತಿಯಿಂದ ಬೇರ್ಪಟ್ಟರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಾನ್ ಅವರ 21 ವರ್ಷದ ಮಗಳು ಸೀರತ್ ಮತ್ತು 17 ವರ್ಷದ ಮಗ ದಿಲ್ಶನ್ ಇದ್ದಾರೆ. ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಇಬ್ಬರು ಮಕ್ಕಳು ಯುಎಸ್ ನಿಂದ ಬಂದಿದ್ದರು.

      ರಾಜ್ಯ ಸಚಿವರಾದ ಹರ್ಪಾಲ್ ಸಿಂಗ್ ಚೀಮಾ, ಹರ್ಜೋತ್ ಬೇನ್ಸ್ ಮತ್ತು ಅಮನ್ ಅರೋರಾ ಹಾಗೂ ಪಕ್ಷದ ಹಿರಿಯ ನಾಯಕ ರಾಘವ್ ಚಡ್ಡಾ ಅವರು ಟ್ವಿಟರ್‌ನಲ್ಲಿ ಮಾನ್ ಅವರನ್ನು ಅಭಿನಂದಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಕೂಡ ಮಾನ್ ಅವರನ್ನು ಅಭಿನಂದಿಸಿ, ಮಾನ್‌ ಅವರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿದ್ದಾರೆ ಅವರಿಗೆ ಶುಭವಾಗಲಿ ಎಂದಿದ್ದಾರೆ.

      32 ವರ್ಷ ವಯಸ್ಸಿನ ಗುರುಪ್ರೀತ್ ಕೌರ್ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪೆಹೋವಾ ಪ್ರದೇಶದ ಹಳ್ಳಿಯವರು. ಆಕೆಯ ತಂದೆ ಇಂದರ್‌ಜಿತ್ ಸಿಂಗ್ ನಟ್ ಒಬ್ಬ ಸಾಮಾನ್ಯ ರೈತ. ಮಾಧ್ಯಮ ವರದಿಗಳ ಪ್ರಕಾರ, ಅವರು ಈ ಹಿಂದೆ ಮದನಪುರ ಗ್ರಾಮದ ಸರಪಂಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಆಕೆಯ ತಾಯಿ ಗೃಹಿಣಿಯಾಗಿದ್ದಾರೆ.

       ಹಿರಿಯ ಸಹೋದರಿಯರು ವಿದೇಶದಲ್ಲಿ ನೆಲೆ

      ಹಿರಿಯ ಸಹೋದರಿಯರು ವಿದೇಶದಲ್ಲಿ ನೆಲೆ

      ಗುರುಪ್ರೀತ್ ಕೌರ್ ಅವರ ಕುಟುಂಬದ ಮೂವರು ಸಹೋದರಿಯರಲ್ಲಿ ಕಿರಿಯವಳು. ಇಬ್ಬರು ಹಿರಿಯ ಸಹೋದರಿಯರು ವಿದೇಶದಲ್ಲಿ ನೆಲೆಸಿದ್ದಾರೆ ಎಂದು ಕುಟುಂಬದ ಆಪ್ತರು ಹೇಳಿಕೊಂಡಿದ್ದಾರೆ. ಡಾ. ಕೌರ್ ಸರಿಸುಮಾರು 4 ವರ್ಷಗಳ ಹಿಂದೆ ಮುಲ್ಲಾನದ ಮಹರ್ಷಿ ಮಾರ್ಕಂಡೇಶ್ವರ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್‌ ಮಾಡಿದರು. ಅವರು 2013ರಲ್ಲಿ ಎಂಬಿಬಿಎಸ್‌ಗೆ ದಾಖಲಾಗಿದ್ದರು ಮತ್ತು 2018ರಲ್ಲಿ ಪೂರ್ಣಗೊಳಿಸಿದರು ಎಂದು ಕುಟುಂಬದವರು ಪಿಟಿಐಗೆ ತಿಳಿಸಿದ್ದಾರೆ.

       ಪ್ರೀತಿಯಿಂದ 'ಗೋಪಿ' ಎನ್ನುತ್ತಾರೆ

      ಪ್ರೀತಿಯಿಂದ 'ಗೋಪಿ' ಎನ್ನುತ್ತಾರೆ

      ಗುರುಪ್ರೀತ್ ಕೌರ್ ಪ್ರಸ್ತುತ ಅವರು ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಗುರುಪ್ರೀತ್ ಕೌರ್ ಅವರನ್ನು ಪ್ರೀತಿಯಿಂದ 'ಗೋಪಿ' ಎಂದು ಕರೆಯುತ್ತಾರೆ ಮತ್ತು ಕರುಣಾಳು, ಕಾಳಜಿಯುಳ್ಳ, ಬುದ್ಧಿವಂತ ಯುವತಿ ಎಂದು ನೆರೆಹೊರೆಯವರು ಹೇಳುತ್ತಾರೆ. ನೆರೆಹೊರೆಯ ಅನೇಕ ಯುವತಿಯರು "ಗೋಪಿ ದೀದಿ" ಮದುವೆಯಾಗುತ್ತಿದ್ದಾರೆ. ಅದು ಮುಖ್ಯಮಂತ್ರಿಯವರಿಗೆ ತುಂಬಾ ಸಂತೋಷವಾಗಿದೆ ಎನ್ನುತ್ತಿದ್ದಾರೆ.

       ಮದುವೆಗೆ ಭಾರತೀಯ, ಇಟಾಲಿಯನ್ ಪಾಕಪದ್ಧತಿ

      ಮದುವೆಗೆ ಭಾರತೀಯ, ಇಟಾಲಿಯನ್ ಪಾಕಪದ್ಧತಿ

      ಚಂಡೀಗಢದ ಸೆಕ್ಟರ್ 2ನಲ್ಲಿರುವ ಮುಖ್ಯಮಂತ್ರಿಯವರ ಮನೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ವಧು ಗುರುಪ್ರೀತ್‌ ಕೌರ್‌ ಟ್ವಿಟರ್‌ನಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು "ದಿನ್ ಶಗ್ನಾ ದ ಚಾದ್ಯ (ಮದುವೆಯ ದಿನ ಬಂದಿದೆ)" ಎಂದು ಬರೆದಿದ್ದಾರೆ. ಮದುವೆಯ ಊಟದ ಮೆನು ಭಾರತೀಯ ಮತ್ತು ಇಟಾಲಿಯನ್ ಪಾಕಪದ್ಧತಿಯನ್ನು ಒಳಗೊಂಡಿರುತ್ತದೆ. ಅವುಗಳೆಂದರೆ ಕಡಹಿ ಪನೀರ್, ತಂದೂರಿ ಕುಲ್ಚೆ, ದಾಲ್ ಮಖಾನಿ, ನವರತನ್ ಬಿರಿಯಾನಿ, ಮೌಸಮಿ ಸಬ್ಜಿಯಾನ್, ಏಪ್ರಿಕಾಟ್ ಸ್ಟಫ್ಡ್ ಕೋಫ್ತಾ, ಲಸಾಗ್ನಾ ಸಿಸಿಲಿಯಾನೋ ಮತ್ತು ಬುರಾನಿ ರೈತಾ. ತಾಜಾ ಹಣ್ಣಿನ ಟ್ರಿಫಲ್, ಮೂಂಗ್ ದಾಲ್ ಹಲ್ವಾ, ಶಾಹಿ ತುಕ್ಡಾ, ಅಂಗೂರಿ ರಸ್ಮಲೈ ಮತ್ತು ಡ್ರೈ ಫ್ರೂಟ್ ರಾಬ್ರಿ ಕೂಡ ಊಟದ ಭಾಗವಾಗಿದೆ.

       ಚಂಡೀಗಢಕ್ಕೆ ಇಳಿದ ಕೇಜ್ರಿವಾಲ್‌

      ಚಂಡೀಗಢಕ್ಕೆ ಇಳಿದ ಕೇಜ್ರಿವಾಲ್‌

      ಭಗವಂತ ಮಾನ್‌ ಮದುವೆಯ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಬೆಳಗ್ಗೆ ಖಾಸಗಿ ಸಮಾರಂಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಮಾನ್ ಹಾಗೂ ಡಾ ಗುರುಪ್ರೀತ್ ಕೌರ್ ಅವರ ವಿವಾಹಕ್ಕೆ ಮುನ್ನ ಇಲ್ಲಿನ ಭಗವಂತ್ ಮಾನ್ ಅವರ ನಿವಾಸದಲ್ಲಿ ಪಾಲ್ಗೊಳ್ಳಲು ಚಂಡೀಗಢಕ್ಕೆ ಆಗಮಿಸಿದ್ದರು.

       ಎಎಪಿ ಸಂಸದ ರಾಘವ್ ಚಡ್ಡಾ ಭಾಗಿ

      ಎಎಪಿ ಸಂಸದ ರಾಘವ್ ಚಡ್ಡಾ ಭಾಗಿ

      ಈ ವೇಳೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮಾನ್‌ ಅವರು ಇಂದು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ನಾನು ಅವರಿಗೆ ಸಂತೋಷದ ವೈವಾಹಿಕ ಜೀವನವನ್ನು ಬಯಸುತ್ತೇನೆ ಎಂದರು. ಎಎಪಿ ಸಂಸದ ರಾಘವ್ ಚಡ್ಡಾ ಅವರ ಮದುವೆಗೆ ಪಕ್ಷದ ನಾಯಕ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ನಾನು ನನ್ನ ತಾಯಿಯೊಂದಿಗೆ ಇಲ್ಲಿಗೆ ಬಂದಿದ್ದೇನೆ. ಈ ವಿಶೇಷ ಸಂದರ್ಭದಲ್ಲಿ ಮನ್ ಸಾಹೇಬ್ ಮತ್ತು ಅವರ ಕುಟುಂಬವನ್ನು ನಾನು ಪೂರ್ಣ ಹೃದಯದಿಂದ ಅಭಿನಂದಿಸುತ್ತೇನೆ ಎಂದು ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+