ಸಮೀಕ್ಷೆ: ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷಕ್ಕಿಲ್ಲ ಸ್ಪಷ್ಟ ಬಹುಮತ

ಚಂಡೀಗಢ, ಜನವರಿ 04: ಮುಂಬರಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಟೈಮ್ಸ್‌ ನೌ ನವಭಾರತದ ವಿಟೊ ಸಮೀಕ್ಷೆ ಹೇಳಿದೆ.

117 ಸದಸ್ಯರ ವಿಧಾನಸಭೆ ಪೈಕಿ 53-57 ಸೀಟುಗಳನ್ನು ಆಮ್ ಆದ್ಮಿ ಪಕ್ಷ ಪಡೆಯಲಿದೆ. ಕಾಂಗ್ರೆಸ್ 41-45 ಸೀಟುಗಳನ್ನು ಗೆಲ್ಲಲಿದೆ. ಅಕಾಲಿ 14-17 ಸೀಟುಗಳಲ್ಲಿ ಜಯ ಸಾಧಿಸಲಿದೆ.

ಬಿಜೆಪಿ ಹಾಗೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಕ್ಷವು ಮೈತ್ರಿ ಮಾಡಿಕೊಂಡಿದ್ದು, ಈ ಬಾರಿ ಬಿಜೆಪಿಯು ಹೆಚ್ಚಿನ ಮತಗಳನ್ನು ಗಳಿಸುವ ನಿರೀಕ್ಷೆ ಮಾಡಲಾಗಿದೆ.

Survey: AAP May Fall Just Short Of Majority In Punjab

ವಿಧಾನಸಭಾ ಚುನಾವಣೆ ಹೊಸ್ತಿನಿನಲ್ಲಿರುವ ಪಂಜಾಬ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಈ ಬಾರಿ ಅಧಿಕಾರಕ್ಕೇರಲು ಆಮ್ ಆದ್ಮಿ ಪಕ್ಷ ಶತ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಕೆಲ ಸಮೀಕ್ಷೆಗಳೂ ಆಮ್ ಆದ್ಮಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ.

ಒಂದೆಡೆ ಪ್ರಮುಖ ವಿಪಕ್ಷವಾಗಿರುವ ಶಿರೋಮಣಿ ಅಕಾಲಿದಳ ಕೃಷಿ ಕಾಯ್ದೆಯ ವಿಚಾರದಲ್ಲಿ ಮುನಿಸಿಕೊಂಡು ಬಿಜೆಪಿಒಯೊಂದಿಗಿನ ಮೈತ್ರಿ ಕಳೆದುಕೊಂಡಿದೆ. ದಲಿತ ಮತಗಳ ಮೇಲೆ ಕಣ್ಣಿಟ್ಟು ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರುವ ತವಕದಲ್ಲಿದೆ.

ಬಿಜೆಪಿಯೂ ಹೊಸ ರಾಜಕೀಯ ರಣತಂತ್ರಗಳನ್ನು ಹೆಣೆಯಲು ಸಿದ್ಧವಾಗಿದ್ದು, ಕಾಂಗ್ರೆಸ್ ಪಕ್ಷದ ಭಿನ್ನಮತಗಳ ಲಾಭ ಪಡೆಯಲು ಮುಂದಾಗಿದೆ. ಕ್ಯಾಪ್ಟನ್ ಅಮೆರಿಂದರ್ ಸಿಂಗ್ ರಾಜೀನಾಮೆ, ನವಜೋತ್ ಸಿಂಗ್ ಸಿಧು ಅವರ ಬಂಡಾಯ, ಹಲವು ಶಾಸಕರುಗಳ ಅಸಮಾಧಾನ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.

ಪಂಜಾಬ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದ ಆಮ್ ಆದ್ಮಿ ಪಕ್ಷ 2017ರ ವಿಧಾನಸಭೆ ಚುನಾವಣೆಯಲ್ಲಿ ಶೇ.23ರಷ್ಟು ಮತಗಳನ್ನು ಗಳಿಸಿತ್ತು. 115 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಆಪ್ 20 ಸ್ಥಾನಗಳನ್ನು ಗೆದ್ದಿತ್ತು. ಮಿತ್ರ ಪಕ್ಷ ಲೋಕ್ ಇನ್ಸಾಫ್ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧಿಸಿ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿರೋಮಣಿ ಅಕಾಲಿದಳ 15 ಹಾಗೂ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಮಾತ್ರ ಗೆಲುವು ಪಡೆದುಕೊಂಡಿತ್ತು.

ಈಗಾಗಲೇ ಪಂಜಾಬ್‌ಗೆ ಆಗಮಿಸಿ ಪಕ್ಷ ಸಂಘಟನೆಯಲ್ಲಿ ನಿರತರಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಎಲ್ಲರೂ ಹೆಮ್ಮೆ ಪಡುವಂತವರಾಗಿರುತ್ತಾರೆ ಎಂದು ಹೇಳಿ ಕುತೂಹಲ ಮೂಡಿಸಿದ್ದರು.
ಪಂಜಾಬ್(117)
ಪಕ್ಷ 2017 2022ರ ನಿರೀಕ್ಷೆ
ಎಎಪಿ 20 53-57
ಕಾಂಗ್ರೆಸ್‌ 77 41-45
ಎಸ್‌ಎಡಿ 15 14-17
ಬಿಜೆಪಿ 03 1-3
ಇತರೆ 02 1-3

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+