ಸೋನಾಲಿ ಫೋಗಟ್ ಸಾವಿನ ಪ್ರಕರಣ: ಮನೆಯಲ್ಲಿ 3 ಡೈರಿ ಪತ್ತೆ, ಅವುಗಳಲ್ಲೇನಿದೆ?

ಚಂಡಿಗಢ ಸೆಪ್ಟೆಂಬರ್ 3: ಹರಿಯಾಣದ ಹಿಸಾರ್‌ನಲ್ಲಿರುವ ದಿವಂಗತ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರ ನಿವಾಸಕ್ಕೆ ಗೋವಾ ಪೊಲೀಸರು ಶುಕ್ರವಾರ ಭೇಟಿ ನೀಡಿದ್ದು, ಸ್ಥಳದಿಂದ ಮೂರು ಡೈರಿಗಳನ್ನು ವಶಪಡಿಸಿಕೊಂಡಿದ್ದಾರೆ. ಸೋನಾಲಿಯ ಬೆಡ್‌ರೂಮ್, ವಾರ್ಡ್‌ರೋಬ್ ಮತ್ತು ಪಾಸ್‌ವರ್ಡ್-ರಕ್ಷಿತ ಲಾಕರ್ ಅನ್ನು ಪೊಲೀಸ್ ಶೋಧ ತಂಡವು ಪರಿಶೀಲಿಸಿತು. ಬಳಿಕ ಪೊಲೀಸರು ಸೋನಾಲಿ ಫೋಗಟ್ ಅವರ ನಿವಾಸದಲ್ಲಿ ಲಾಕರ್ ಅನ್ನು ಸೀಲ್ ಮಾಡಿದ್ದಾರೆ.

ಮೂಲಗಳ ಪ್ರಕಾರ, ವಶಪಡಿಸಿಕೊಂಡ ಡೈರಿಗಳಲ್ಲಿ ಸೋನಾಲಿ ಫೋಗಟ್ ಅವರ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮೂಲಕ ನೀಡಿದ ಹಣದ ದಾಖಲೆ ಇದೆ. ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಕೆ ಹೂಡಿದ ಹಣದ ಉಲ್ಲೇಖವೂ ಇದೆ. ಫೋಗಟ್ ಅವರ ಆದಾಯ ಮತ್ತು ವೆಚ್ಚವನ್ನು ಸಹ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಕೆಲವು ರಾಜಕಾರಣಿಗಳ ಹೆಸರು ಮತ್ತು ಸಂಖ್ಯೆಗಳಿವೆ. ಮಾತ್ರವಲ್ಲದೆ ಫೋಗಟ್‌ಗಾಗಿ ಕೆಲಸ ಮಾಡುವ ಕೆಲವು ಅಧಿಕಾರಿಗಳು ಸಹ ಡೈರಿಯಲ್ಲಿ ದಾಖಲಾಗಿದ್ದಾರೆ.

ಕೆಲವು ದಿನಗಳ ಹಿಂದೆ ಹಿಸಾರ್‌ಗೆ ತೆರಳಿದ್ದ ಗೋವಾ ಪೊಲೀಸ್ ಇನ್ಸ್‌ಪೆಕ್ಟರ್ ಥೆರಾನ್ ಡಿ'ಕೋಸ್ಟಾ ಅವರು "ನಾವು ಇನ್ನೂ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಪರಿಶೀಲನೆ ನಡೆಸುತ್ತಿದ್ದೇವೆ. ನಾವು ತನಿಖೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ತೀರ್ಮಾನವನ್ನು ತೆಗೆದುಕೊಳ್ಳಬಹುದು" ಎಂದಿದ್ದಾರೆ.

ಎಲೆಕ್ಟ್ರಾನಿಕ್ ಲಾಕರ್‌ಗೆ ಸೀಲ್

ಎಲೆಕ್ಟ್ರಾನಿಕ್ ಲಾಕರ್‌ಗೆ ಸೀಲ್

ಫೋಗಟ್ ಅವರ ಸಹೋದರ ವತನ್ ಢಾಕಾ ಅವರು, "ನಮ್ಮ ಸಂತ ನಗರ ಅಪಾರ್ಟ್‌ಮೆಂಟ್‌ನಲ್ಲಿ ಇಂದು (ಶುಕ್ರವಾರ) ಸುಮಾರು ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸುತ್ತಿರುವುದಾಗಿ ಗೋವಾ ಪೊಲೀಸರಿಂದ ಬೆಳಿಗ್ಗೆ ನನಗೆ ಕರೆ ಬಂದಿತ್ತು. ಜೊತೆಗೆ ಅವರು ತಮ್ಮೊಂದಿಗೆ ಮೂರು ಡೈರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ವೇಳೆ ಮೃತ ಬಿಜೆಪಿ ನಾಯಕಿಯ ಸೋದರ ಮಾವ ಅಮನ್ ಪುನಿಯಾ ಹಾಗೂ ಪೊಲೀಸರು ಎಲೆಕ್ಟ್ರಾನಿಕ್ ಲಾಕರ್ ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದನ್ನು ಸೀಲ್ ಮಾಡಲಾಗಿದೆ'' ಎಂದು ಹೇಳಿದ್ದಾರೆ.

ಏಳು ದಿನಗಳ ನ್ಯಾಯಾಂಗ ಬಂಧನ

ಏಳು ದಿನಗಳ ನ್ಯಾಯಾಂಗ ಬಂಧನ

ಫೋಗಟ್ ಸಾವಿಗೆ ಸಂಬಂಧಿಸಿದಂತೆ ಬಂಧಿಸಲಾದ ಮೂವರನ್ನು ಗೋವಾದ ನ್ಯಾಯಾಲಯವು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಫೋಗಟ್ ಅವರ ಸಾವನ್ನು ಕೊಲೆ ಎಂದು ಪರಿಗಣಿಸಲಾಗುತ್ತಿದೆ. ಸೋನಾಲಿ ಫೋಗಟ್ ಅವರು ಆಗಸ್ಟ್ ಅಂತ್ಯದಲ್ಲಿ ಕರಾವಳಿ ರಾಜ್ಯ ಗೋವಾಕ್ಕೆ ಆಗಮಿಸಿದ ವೇಳೆ ಸಾವನ್ನಪ್ಪಿದ್ದರು.

ಆಕೆಯ ಸಾವಿನ ತನಿಖೆಯಿಂದ ಆಕೆಯ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್, ಮತ್ತೊಬ್ಬ ಸಹಾಯಕ ಸುಖ್ವಿಂದರ್ ಸಿಂಗ್, ರೆಸ್ಟೋರೆಂಟ್ ಎಡ್ವಿನ್ ನ್ಯೂನ್ಸ್, ಮಾದಕವಸ್ತು ವ್ಯಾಪಾರಿಗಳಾದ ದತ್ತಪ್ರಸಾದ್ ಗಾಂವ್ಕರ್ ಮತ್ತು ರಾಮದಾಸ್ ಮಾಂಡ್ರೇಕರ್ ಅವರನ್ನು ಬಂಧಿಸಾಗಿದೆ.

3 ಸಹಚರರೊಂದಿಗೆ ಕ್ಲಬ್‌ನಲ್ಲಿ ಸೋನಾಲಿ ಪಾರ್ಟಿ

3 ಸಹಚರರೊಂದಿಗೆ ಕ್ಲಬ್‌ನಲ್ಲಿ ಸೋನಾಲಿ ಪಾರ್ಟಿ

ಸೋನಾಲಿ ಫೋಗಟ್ (42) ಅವರು ಆಗಸ್ಟ್ 23 ರಂದು ಉತ್ತರ ಗೋವಾದ ಅಂಜುನಾದಲ್ಲಿರುವ ಸೇಂಟ್ ಆಂಥೋನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ದೇಹದ ಮೇಲೆ ಮೊಂಡಾದ ಬಲದ ಗಾಯವನ್ನು ಬಹಿರಂಗಪಡಿಸಿತ್ತು. ನಂತರ ಗೋವಾ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ತನ್ನ ಸಹಚರರೊಂದಿಗೆ ಕ್ಲಬ್‌ನಲ್ಲಿ ಸೋನಾಲಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲಿ ಇದು ಸೆರೆಯಾಗಿದೆ. ಹೀಗಾಗಿ ಪೊಲೀಸರು ಫೋಗಟ್‌ನ ಪಿಎ ಮತ್ತು ಅವನ ಸಹಚರನನ್ನು ಬಂಧಿಸಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋನ ಸ್ಪರ್ಧಿ

ಬಿಗ್ ಬಾಸ್ ರಿಯಾಲಿಟಿ ಶೋನ ಸ್ಪರ್ಧಿ

ತನ್ನ ಟಿಕ್‌ಟಾಕ್ ವಿಡಿಯೊಗಳೊಂದಿಗೆ ಖ್ಯಾತಿಗೆ ಏರಿದ ನಟಿ, 2019 ರ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಆದರೆ ಆಗಿನ ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೋಯ್ ವಿರುದ್ಧ ಸೋತರು (ಅವರು ನಂತರ ಬಿಜೆಪಿಗೆ ಸೇರಿದ್ದಾರೆ). ಅವರು 2020 ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+