• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಾಲಾ ವಾಹನಕ್ಕೆ ಬೆಂಕಿ: ನಾಲ್ವರು ಮಕ್ಕಳು ಸಜೀವ ದಹನ

|
Google Oneindia Kannada News

ಚಂಡೀಘಡ, ಫೆಬ್ರವರಿ 15: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ನಾಲ್ವರು ಮಕ್ಕಳು ಸಜೀವ ದಹನವಾಗಿರುವ ಘಟನೆ ಪಂಜಾಬ್‌ ನ ಸಂಗ್ರೂರ್ ಜಿಲ್ಲೆಯ ಲೋಗ್ವಾಲ್ ಎಂಬಲ್ಲಿ ನಡೆದಿದೆ.

ಮಾರುತಿ ವ್ಯಾನೊಂದು ಹನ್ನೆರಡು ಮಂದಿ ಶಾಲಾ ಮಕ್ಕಳನ್ನು ಶಾಲೆಯಿಂದ ವಾಪಸ್ ಮನೆಗೆ ಕರೆದು ತರುತ್ತಿತ್ತು. ಮಾರ್ಗಮಧ್ಯೆ ಏಕಾ-ಏಕಿ ಮಾರುತಿ ವ್ಯಾನಿಗೆ ಬೆಂಕಿ ಹೊತ್ತಿಕೊಂಡಿದೆ.

ಹನ್ನೆರಡು ಮಕ್ಕಳಲ್ಲಿ ಎಂಟು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಡ್ರೈವರ್ ಅನ್ನು ಸಹ ರಕ್ಷಿಸಲಾಗಿದೆ. ನಾಲ್ವರು ವಿದ್ಯಾರ್ಥಿಗಳು ಬೆಂಕಿಗೆ ಆಹುತಿಯಾಗಿದ್ದಾರೆ. ವ್ಯಾನ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು 10-12 ವರ್ಷ ವಯಸ್ಸಿನವರಾಗಿದ್ದರು.

ವ್ಯಾನಿಗೆ ಬೆಂಕಿ ಬೀಳುತ್ತಿದ್ದಂತೆ ಡ್ರೈವರ್ ಬಾಗಿಲುಗಳನ್ನು ತೆರೆಯಲು ಯತ್ನಿಸಿದ ಆದರೆ ಸಾಧ್ಯವಾಗಲಿಲ್ಲ. ಕೊನೆಗೆ ಸ್ಥಳೀಯರು ಸೇರಿ ವಾಹನದ ಕಿಟಕಿಯ ಮೂಲಕ ಎಂಟು ಮಕ್ಕಳನ್ನು ರಕ್ಷಿಸಿದರು ಆದರೆ ನಾಲ್ಕು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪಂಜಾಬ್‌ ನ ಸಿಎಂ ಕ್ಯಾಪ್ಟನ್ ಅಮರೇಂದರ್ ಸಿಂಗ್, ಘಟನೆ ಕುರಿತು ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್ ಹಂತದ ಸಮಿತಿ ರಚಿಸುವುದಾಗಿ ಹೇಳಿದ್ದಾರೆ. ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ.

English summary
School van caught fire in Punjab's Sagrur District. Four Children burnt alive in incident. CM Amrindar Singh orders magistrate level investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X