Get Updates
Get notified of breaking news, exclusive insights, and must-see stories!

ಪಂಜಾಬ್‌ ಚುನಾವಣೆಯಲ್ಲಿ ಎಸ್‌ಎಡಿ-ಬಿಎಸ್‌ಪಿ ಕ್ಲೀನ್‌ ಸ್ವೀಪ್‌ ಎಂದ ಬಾದಲ್‌

ಚಂಡೀಗಢ, ಫೆಬ್ರವರಿ 20: ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯು ಆರಂಭವಾಗಿದೆ. ಈಗಾಗಲೇ ಹಲವಾರು ಪ್ರಮುಖ ನಾಯಕರು ಮತಗಟ್ಟಗೆ ಬಂದು ಮತ ಚಲಾಯಿಸಿದ್ದಾರೆ. ಎಲ್ಲಾ ನಾಯಕರುಗಳು ತಮ್ಮ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಕಾಲಿ ದಳ ಹಾಗೂ ಬಿಎಸ್‌ಪಿ ಮೈತ್ರಿಕೂಟ ಕ್ಲೀನ್‌ ಸ್ವೀಪ್‌ ಮಾಡುವ ಭರವಸೆಯನ್ನು ಅಕಾಲಿ ದಳ ನಾಯಕ ಸುಖ್‌ಬೀರ್‌ ಸಿಂಗ್‌ ಬಾದಲ್‌ ವ್ಯಕ್ತಪಡಿಸಿದ್ದಾರೆ.

ಜಲಾಲಾಬಾದ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌, "ಶಿರೋಮಣಿ ಅಕಾಲಿದಳ-ಬಿಎಸ್‌ಪಿ ಕ್ಲೀನ್‌ಸ್ವೀಪ್‌ ಮಾಡಲಿದೆ ಎಂದು ನಾನು ಹೇಳಲು ಬಯಸುತ್ತೇನೆ. 80ಕ್ಕೂ ಅಧಿಕ ಸೀಟುಗಳನ್ನು ನಾವು ಪಡೆಯುತ್ತೇವೆ," ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌, ಪಕ್ಷದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಹಾಗೂ ಪಕ್ಷದ ನಾಯಕ ಪ್ರಕಾಶ್‌ ಸಿಂಗ್‌ ಬಾದಲ್‌ ಮತವನ್ನು ಚಲಾಯಿಸಲು ಜೊತೆಯಾಗಿ ಮತಗಟ್ಟೆ ಆಗಮಿಸಿದ್ದಾರೆ.

Punjab Poll: SAD-BSP to Clean Sweep Punjab Polls Says Sukhbir Singh Badal

"ಇಂದು ಜನರು ಸ್ಥಿರ, ಬಲಿಷ್ಠ ಸರ್ಕಾರವನ್ನು ಬಯಸುತ್ತಿದ್ದಾರೆ. ಪಂಜಾಬ್‌ಗೆ ಗಡಿ ರಾಜ್ಯವಾಗಿ ಹಲವು ಸವಾಲುಗಳಿವೆ. ಸ್ಥಳೀಯ ಜನರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಿಸಿದ, ಸ್ಥಳೀಯ, ಪ್ರಾದೇಶಿಕ ಪಕ್ಷವು ಕ್ಲೀನ್ ಸ್ವೀಪ್‌ ಮಾಡಲಿದೆ," ಎಂದು ಶಿರೋಮಣಿ ಅಕಾಲಿದಳದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.

ಅಮೃತಸರ ಪೂರ್ವದಿಂದ ಸ್ಪರ್ಧಿಸುತ್ತಿರುವ ಎಸ್‌ಎಡಿ ನಾಯಕ ಬಿಕ್ರಮ್ ಎಸ್ ಮಜಿಥಿಯಾ ಮಾತನಾಡಿ, "ಜನರು ಗೆಲ್ಲುತ್ತಾರೆ, ಅವರ ಬೇಡಿಕೆಗಳು ಗೆಲ್ಲುತ್ತದೆ. ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರ ದುರಹಂಕಾರ ಮತ್ತು ದ್ವೇಷದ ರಾಜಕಾರಣವನ್ನು ಸಾರ್ವಜನಿಕರು ತಿರಸ್ಕರಿಸುತ್ತಾರೆ. ಯಾವುದೇ ಕೈಗಾರಿಕೆಗಳ ಅಭಿವೃದ್ಧಿಯಾಗಿಲ್ಲ ಮತ್ತು ವ್ಯಾಪಾರ, ನಿರುದ್ಯೋಗಿಗಳು ಮತ್ತು ಬಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ," ಎಂದು ಆರೋಪ ಮಾಡಿದ್ದಾರೆ.

ಬಿಎಸ್‌ಪಿ-ಎಸ್‌ಎಡಿ ಮೈತ್ರಿಗೆ ಜನ ಯಾಕೆ ಮತ ಹಾಕಬೇಕು?

ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್‌ಬೀರ್‌ ಸಿಂಗ್‌ ಬಾದಲ್‌, ಬಿಎಸ್‌ಪಿ-ಎಸ್‌ಎಡಿ ಮೈತ್ರಿಗೆ ಜನ ಯಾಕೆ ಮತ ಹಾಕಬೇಕು ಎಂಬುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಮೊದಲನೆಯದಾಗಿ, ನಾವು ಅವರ ನಿಜವಾದ ಪ್ರತಿನಿಧಿಗಳು ಎಂದು ಪಂಜಾಬಿಗಳಿಗೆ ತಿಳಿದಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ವಿಭಿನ್ನ ಧ್ವನಿಯಲ್ಲಿ ಮಾತನಾಡುವ ಇತರರಿಗಿಂತ ಭಿನ್ನವಾಗಿ ನಾವು ಯಾವಾಗಲೂ ಪಂಜಾಬ್‌ನ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡಿದ್ದೇವೆ," ಎಂದಿದ್ದಾರೆ.

"ತನ್ನ ಮಾತನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ನಂಬಬಹುದಾದ ಏಕೈಕ ಪಕ್ಷ ಎಸ್‌ಎಡಿ ಎಂಬ ನಂಬಿಕೆಯೂ ಜನರಿಗೆ ಇದೆ. ಜನರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನು ಈಡೇರಿಸುವ ಮೂಲಕ ನಾವು ಇದನ್ನು ಮೊದಲೇ ಸಾಬೀತುಪಡಿಸಿದ್ದೇವೆ," ಎಂದು ಕೂಡಾ ತಿಳಿಸಿದ್ದಾರೆ.

"ವೃದ್ಧಾಪ್ಯ ವೇತನವನ್ನು ತಿಂಗಳಿಗೆ 3,100 ರೂ.ಗೆ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ದುರ್ಬಲ ವರ್ಗದ ವಧುಗಳಿಗೆ 'ಶಗುನ್' ಪ್ರಯೋಜನವನ್ನು 75,000 ರೂ.ಗೆ ಹೆಚ್ಚಿಸುತ್ತೇವೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ. ಹಾಗೂ ಎಲ್ಲಾ ಗ್ರಾಹಕರಿಗೆ ತಿಂಗಳಿಗೆ 400 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು," ಎಂದು ಕೂಡಾ ಭರವಸೆಯನ್ನು ನೀಡಿದ್ದಾರೆ.

ಅಧಿಕಾರಕ್ಕೆ ಬಂದರೆ, ಮೊದಲ 100 ದಿನಗಳ ನಿಮ್ಮ ಮೈತ್ರಿಯ ಅಜೆಂಡಾ ಏನು ಎಂದು ಕೂಡಾ ಮಾಧ್ಯಮಗಳು ಪ್ರಶ್ನೆ ಮಾಡಿದೆ. "ಜನರಿಗೆ ನೀಡಿದ ಭರವಸೆಯನ್ನು ಸಾಧ್ಯವಾದಷ್ಟು ಬೇಗ ಜಾರಿಗೊಳಿಸುವುದು ನಮ್ಮ ಪ್ರಯತ್ನವಾಗಿದೆ. ನಾವು ಈ ಪರಂಪರೆಯನ್ನು ಅನುಸರಿಸುತ್ತೇವೆ ಮತ್ತು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಎಲ್ಲಾ ಭರವಸೆಗಳ ತ್ವರಿತ ಅನುಷ್ಠಾನಕ್ಕಾಗಿ ಮಾರ್ಗಸೂಚಿಯನ್ನು ಘೋಷಿಸುತ್ತೇವೆ," ಎಂದು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+