ನಟ ಸೋನು ಸೂದ್‌ ಎಸ್‌ಯುವಿ ಪೊಲೀಸ್‌ ವಶಕ್ಕೆ: ಕಾರಣವೇನು?

ಚಂಡೀಗಢ, ಫೆಬ್ರವರಿ 20: ಭಾನುವಾರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ನಡುವೆ ಪೊಲೀಸರು ನಟ ಸೋನು ಸೂದ್‌ ಎಸ್‌ಯುವಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಗಾ ಮತಗಟ್ಟೆಯಲ್ಲಿ ನಟ ಸೋನು ಸೂದ್ ಅವರ ಎಸ್‌ಯುವಿಯನ್ನು ಪೊಲೀಸರು ವಶಪಡಿಸಿಕೊಂಡರು.

ಭಾನುವಾರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದಾಗ ಮೋಗಾ ಜಿಲ್ಲೆಯ ಲಂಧೇಕೆ ಗ್ರಾಮದಲ್ಲಿ "ಸಂಶಯಾಸ್ಪದ ಚಟುವಟಿಕೆ" ನಡೆಸಲಾಗುತ್ತಿದೆ ಎಂಬ ವರದಿಗಳ ನಂತರ ಬಾಲಿವುಡ್ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಕುಳಿತಿದ್ದ ಎಸ್‌ಯುವಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರು ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಚುನಾವಣಾ ವೀಕ್ಷಕರ ನಿರ್ದೇಶನದ ಮೇರೆಗೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಲ್ಲದೇ ಅಧಿಕಾರಿ ಸತ್ವಂತ್ ಸಿಂಗ್ ಅವರು ಸೋನು ಸೂದ್ ಅವರ ಮನೆಯ ವೀಡಿಯೊ ಕಣ್ಗಾವಲು ಇರಿಸಲು ಸೂಚನೆ ಕೂಡಾ ನೀಡಿದ್ದಾರೆ.

Punjab Poll: Police Impound Actor Sonu Sood’s SUV at Moga Polling Booth

ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ದೇವಿಂದರ್ ಸಿಂಗ್, "ಅನುಮಾನಾಸ್ಪದ ಚಟುವಟಿಕೆಯ ಆಧಾರದ ಮೇಲೆ ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಂಧೇಕೆ ಗ್ರಾಮದ ಮತಗಟ್ಟೆ ಬಳಿ ಎಸ್‌ಯುವಿ ಸುತ್ತಾಡುತ್ತಿರುವ ಬಗ್ಗೆ ನಮಗೆ ದೂರು ಬಂದಿದೆ. ನಾವು ಅದನ್ನು ವಶಪಡಿಸಿಕೊಂಡಿದ್ದೇವೆ. ಮುಂದಿನ ಕ್ರಮ ನಡೆಯುತ್ತಿದೆ," ಎಂದು ತಿಳಿಸಿದ್ದಾರೆ. "ಈ ವಾಹನ ಸೋನು ಸೂದ್ ಅವರ ಪರಿಚಯಸ್ಥರಿಗೆ ಸೇರಿದ್ದು, ಅವರು ಮೊಗಾದಲ್ಲಿ ಚುನಾವಣಾ ಪ್ರಚಾರದ ವೇಳೆ ಬಳಕೆ ಮಾಡುತ್ತಿದ್ದರು," ಎಂದು ಮೂಲಗಳು ಹೇಳಿದೆ.

"ಸೋನು ಸೂದ್‌ಗೆ ಮೋಗಾ ಕ್ಷೇತ್ರದಲ್ಲಿ ಮತ ಇಲ್ಲದ ಕಾರಣ ಆ ಪ್ರದೇಶದಲ್ಲಿ ಓಡಾಡಲು ಅವಕಾಶವಿಲ್ಲ. ಈ ಹಿನ್ನೆಲೆ ಮನೆಯಲ್ಲೇ ಇರುವಂತೆ ಸೂಚಿಸಿದ್ದೇನೆ. ಆದರೆ, ಅವರು ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ, ನಾನು ಅವರ ಮನೆಯಲ್ಲಿ ವಿಡಿಯೋ ಕಣ್ಗಾವಲು ಇರಿಸಲು ನಿರ್ದೇಶನ ನೀಡಿದ್ದೇನೆ," ಎಂದು ಅಧಿಕಾರಿ ಸತ್ವಂತ್ ಸಿಂಗ್ ತಿಳಿಸಿದ್ದಾರೆ.

ಸೋನು ಸೂದ್‌ ಹೇಳುವುದು ಏನು?

ಈ ನಡುವೆ "ಪ್ರತಿ ಕ್ಷಗಳು ಮತಗಳನ್ನು ಖರೀದಿಸುತ್ತಿವೆ," ಎಂದು ಸೋನು ಸೂದ್ ಆರೋಪಿಸಿದ್ದಾರೆ. "ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಬರ್ಜಿಂದರ್ ಸಿಂಗ್, ಅಲಿಯಾಸ್ ಮಖನ್ ಬ್ರಾರ್, ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಇದು ಕೇವಲ ಪಾರ್ಕಿಂಗ್ ಸಮಸ್ಯೆಯಾಗಿತ್ತು. ವಾಹನವನ್ನು ಸರಿಯಾಗಿ ನಿಲ್ಲಿಸಿರಲಿಲ್ಲ. ಬೇರೆ ಏನೂ ಇರಲಿಲ್ಲ," ಎಂದು ಸೋನು ಸೂದ್‌ ಹೇಳಿದ್ದಾರೆ.

ನಂತರ ಸೋನು ಸೂದ್ ಅವರು ಮೋಗಾ ಕ್ಷೇತ್ರದಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳು ಮತಗಳನ್ನು ಖರೀದಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದರು. "ಚುನಾವಣಾ ಆಯೋಗವು ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು," ಎಂದು ಟ್ವೀಟ್ ಮಾಡಿದ್ದು, ಮೊಗಾ ಪೊಲೀಸರ ಜೊತೆಗೆ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಟ್ಯಾಗ್ ಮಾಡಿದ್ದಾರೆ.

"ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‌ಗಳಲ್ಲಿ ಬೆದರಿಕೆ ಕರೆಗಳನ್ನು ಮಾಡಿರುವುದು ನಮಗೆ ತಿಳಿದು ಬಂದಿದೆ. ಕೆಲವು ಬೂತ್‌ಗಳಲ್ಲಿ ಹಣ ಹಂಚಲಾಗುತ್ತಿದೆ. ಹಾಗಾಗಿ ನ್ಯಾಯಸಮ್ಮತ ಚುನಾವಣೆಯನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕೇ ಹೊರಗೆ ಹೋಗಿದ್ದೆವು. ಈಗ, ನಾವು ಮನೆಯಲ್ಲಿದ್ದೇವೆ. ನ್ಯಾಯಸಮ್ಮತ ಮತದಾನ ನಡೆಯಬೇಕು," ಎಂದು ಸೋನು ಸೂದ್‌ ಹೇಳಿದ್ದಾರೆ.

ಇವಿಎಂ ದೋಷದಿಂದ ನಾಲ್ಕು ಬೂತ್‌ಗಳಲ್ಲಿ ಮತದಾನ ವಿಳಂಬ

ಈ ನಡುವೆ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ದೋಷದಿಂದಾಗಿ ಮೊಗಾ ಜಿಲ್ಲೆಯ ನಾಲ್ಕು ಬೂತ್‌ಗಳಲ್ಲಿ ಮತದಾನ ವಿಳಂಬವಾಗಿದೆ. ಬಾಘಪುರಾಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 198, ನಿಹಾಲ್ ಸಿಂಗ್ ವಾಲಾ ಕ್ಷೇತ್ರದ 13 ಮತ್ತು ಮೊಗಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 160 ಮತ್ತು 161 ರಲ್ಲಿ ಮತದಾನ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+