Breaking News: ಪಂಜಾಬ್‌ನಲ್ಲಿ 65 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ
ಚಂಡೀಗಢ, ಜನವರಿ 24: ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ಪಂಜಾಬ್‌ನಲ್ಲಿ ನಡೆಯಲಿದ್ದು, ಅಮರಿಂದರ್ ಸಿಂಗ್‌ರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಎಸ್‌ಎಡಿ-ಸಂಯುಕ್ತ ಜೊತೆ ಬಿಜೆಪಿ ಸೋಮವಾರ ಸೀಟು ಹಂಚಿಕೆಯನ್ನು ಘೋಷಿಸಿದೆ.
ಬಿಜೆಪಿ 65 ಸ್ಥಾನಗಳಲ್ಲಿ, ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮತ್ತು ಎಸ್‌ಎಡಿ-ಸಂಯುಕ್ತ್ 15 ಸ್ಥಾನಗಳಲ್ಲಿ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಪಂಜಾಬ್ ಚುನಾವಣೆ: ಕ್ಯಾಪ್ಟನ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
"ಪಂಜಾಬ್‌ಗೆ ವಿಶೇಷ ಗಮನ ನೀಡಬೇಕು," ಎಂದು ಹೇಳಿದ ಬಿಜೆಪಿ ಮುಖ್ಯಸ್ಥರು, "ಪಂಜಾಬ್‌ನಲ್ಲಿ ಭದ್ರತೆ ಬಹಳ ಅಪಾಯಕಾರಿ ಸಮಸ್ಯೆಯಾಗಿದೆ. ಈ ಚುನಾವಣೆಯು ಸ್ಥಿರತೆ ಮತ್ತು ಸುರಕ್ಷತೆಗಾಗಿ ನಡೆಯಬೇಕಾಗಿದೆ. ಪಂಜಾಬ್ ಅನ್ನು ಮರಳಿ ಸರಿಯಾದ ದಾರಿಗೆ ತರುವುದೇ ನಮ್ಮ ಧ್ಯೇಯವಾಗಿದೆ," ಎಂದು ಕೂಡಾ ತಿಳಿಸಿದರು.
ಮಾಫಿಯಾ ಆಡಳಿತದ ನಿಮೂರ್ಲನೆ
"1984ರ ಗಲಭೆಗಳ ತನಿಖೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಸ್‌ಐಟಿ ರಚಿಸಿದ್ದಾರೆ ಮತ್ತು ಇಂದು ಆರೋಪಿಗಳು ಜೈಲಿನಲ್ಲಿದ್ದಾರೆ. ನಾವು ಪಂಜಾಬ್‌ನಲ್ಲಿ 'ಮಾಫಿಯಾ ಆಡಳಿತದ' ಅನ್ನು ನಿರ್ಮೂಲನೆ ಮಾಡುತ್ತೇವೆ," ಎಂದು ಹೇಳಿದರು.
ಕ್ಯಾಪ್ಟನ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ
ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಪಂಜಾಬ್ ಲೋಕ ಕಾಂಗ್ರೆಸ್‌ನ 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದಾರೆ. "ನಾವು ಮೊದಲ ಪಟ್ಟಿಯಲ್ಲಿ 22 ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದೇವೆ," ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. "ಮಜಾದಿಂದ 2 ಅಭ್ಯರ್ಥಿಗಳು, ದೋಬಾದಿಂದ 3 ಮತ್ತು ಮಾಲ್ವಾ ಪ್ರದೇಶದಿಂದ 17 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಎರಡನೇ ಪಟ್ಟಿಯನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ," ಎಂದು ತಿಳಿಸಿದ್ದರು.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)