ಪಂಜಾಬ್: ಮಾದಕ ಸೇವನೆ-ಹಿಡಿತ ಕಳೆದುಕೊಂಡ ಹುಡುಗಿ- ಬಿಜೆಪಿಯಿಂದ ವಿಡಿಯೋ ಟ್ವೀಟ್
ಅಮೃತಸರ ಸೆಪ್ಟೆಂಬರ್ 12: ಪಂಜಾಬ್ ನಲ್ಲಿ ಡ್ರಗ್ಸ್ ಸಮಸ್ಯೆ ಮತ್ತೊಮ್ಮೆ ತಲೆ ಎತ್ತುತ್ತಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಅಮೃತಸರದಲ್ಲಿ ಯುವತಿಯೊಬ್ಬಳು ಅಕ್ರಮ ಮಾದಕ ವಸ್ತುಗಳ ಸೇವನೆಯಿಂದ ತನ್ನ ಹಿಡಿತ ಕಳೆದುಕೊಂಡಿರುವುದು ವಿಡಿಯೋದಲ್ಲಿದೆ. ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದ ಎಎಪಿ ಪಂಜಾಬ್‌ನಲ್ಲಿ ಡ್ರಗ್ಸ್ ಸಮಸ್ಯೆ ಇದೆ ಎಂದು ಹೇಳಿರುವುದು ಕುತೂಹಲಕಾರಿಯಾಗಿದೆ. ಪಂಜಾಬ್‌ಗೆ ಗುಜರಾತ್‌ನಿಂದ ಹೆಚ್ಚಿನ ಡ್ರಗ್ಸ್ ಬರುತ್ತಿದೆ. ಈ ಬಗ್ಗೆ ತನಿಖೆ ಅಗತ್ಯವಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಡ್ರಗ್ಸ್ ಸಮಸ್ಯೆ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ನಡುವೆ ಯುವತಿಯೊಬ್ಬರು ಮಾದಕ ವಸ್ತುಗಳ ಸೇವನೆಯಿಂದ ತನ್ನ ಹಿಡಿತ ಕಳೆದುಕೊಂಡ ವಿಡಿಯೋ ವೈರಲ್ ಆಗಿದೆ.
ಅಮೃತಸರ ಪೂರ್ವ ಕ್ಷೇತ್ರದ ಮಕ್ಬೂಲ್‌ಪುರ ಪ್ರದೇಶದಲ್ಲಿ ಯುವತಿಯೊಬ್ಬಳು ಮಾದಕ ವ್ಯಸನಿಯಾಗಿರುವ ವಿಡಿಯೋ ವೈರಲ್ ಆಗಿದೆ ಎಂದು ವರದಿಯಾಗಿದೆ. ವಿಡಿಯೋದಲ್ಲಿ ಸೆರೆಯಾದ ಯುವತಿ ಅಮಲು ಮತ್ತು ನಿಯಂತ್ರಣ ತಪ್ಪಿದಂತೆ ಕಾಣಿಸುತ್ತಾಳೆ. ಬಾಲಕಿ ರಸ್ತೆಗೆ ಒರಗಿ ನಿಂತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಈ ಯುವತಿ ಚಲಿಸಲು ಹೆಣಗಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಡ್ರಗ್ಸ್ ಸಮಸ್ಯೆಯ ಬಗ್ಗೆ ಆತಂಕಗಳು ಹೆಚ್ಚಾಗತೊಡಗಿವೆ. ಹುಡುಗಿ ಇರುವ ವಿಡಿಯೊದಲ್ಲಿರುವ ಪ್ರದೇಶವು ಮಾದಕ ದ್ರವ್ಯ ಸೇವನೆ ಮತ್ತು ಮಾದಕ ವ್ಯಸನದ ಸಮಸ್ಯೆಗೆ ಕುಖ್ಯಾತವಾಗಿದೆ ಎಂದು ಹೇಳಲಾಗಿದೆ.
|
ಮಕ್ಬೂಲ್ಪುರದಲ್ಲಿ ಹೆಚ್ಚು ಘಟನೆಗಳು ವರದಿ
ಸಿಖ್ಖರ ಪವಿತ್ರ ನಗರವಾದ ಮಕ್ಬೂಲ್ಪುರದಲ್ಲಿ ಮಾದಕ ದ್ರವ್ಯ ಸೇವನೆಯ ಘಟನೆಗಳು ಹೆಚ್ಚಾಗಿ ವರದಿಯಾಗುತ್ತವೆ. ಮಾದಕ ದ್ರವ್ಯ-ಸಂಬಂಧಿತ ಘಟನೆಗಳಿಂದ ಸುದ್ದಿಯಲ್ಲಿರುವ ಈ ಪ್ರದೇಶದಲ್ಲಿ, ಪಂಜಾಬ್ ಪೊಲೀಸರು ಹಲವಾರು ಡಿ-ಅಡಿಕ್ಷನ್ ಡ್ರೈವ್‌ಗಳನ್ನು ಪ್ರಾರಂಭಿಸಿದ್ದಾರೆ, ಆದರೆ ಅಭಿಯಾನಗಳು ಉತ್ತಮ ಫಲಿತಾಂಶಗಳನ್ನು ನೀಡಲು ವಿಫಲವಾಗಿವೆ.

ಪ್ರತ್ಯೇಕ ಎಫ್‌ಐಆರ್ ದಾಖಲು
12 ಶಂಕಿತರನ್ನು ಸಹ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಜತೆಗೆ 12 ಮಂದಿ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಇವರನ್ನೂ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಈ ಪ್ರದೇಶದಿಂದ ಕದ್ದ ಐದು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಿಜೆಪಿಯಿಂದ ವಿಡಿಯೋ ಟ್ವೀಟ್
ಕುಡುಕ ಹುಡುಗಿಯ ವಿಡಿಯೋ ವೈರಲ್ ಆದ ಬಳಿಕ ಮಕ್ಬೂಲ್‌ಪುರ ಪೊಲೀಸರು ಭಾನುವಾರ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅವರ ಬಳಿಯಿದ್ದ ಅಮಲು ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಮೃತಸರ ಪೂರ್ವ ಕ್ಷೇತ್ರದಿಂದ ಆಯ್ಕೆಯಾಗಿರುವ ಎಎಪಿ ಶಾಸಕಿ ಜೀವನಜೋತ್ ಕೌರ್ ಹೇಳಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದೆ.

ಕೇಂದ್ರದ ಮೇಲೆ ಕೇಜ್ರಿವಾಲ್ ಆರೋಪ
ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಗುಜರಾತಿಗೆ ಡ್ರಗ್ಸ್ ಬಂದರಿನ ಮೂಲಕ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದು, ಇದು ಪಂಜಾಬ್ ಮತ್ತು ದೇಶದ ಇತರ ಭಾಗಗಳಿಗೆ ಕಳ್ಳಸಾಗಣೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಡ್ರಗ್ಸ್ ಸಾಗಣೆಯನ್ನು ತಡೆಯುವಲ್ಲಿ ಗುಜರಾತ್ ಸರ್ಕಾರದ ಆಡಳಿತದ ವೈಫಲ್ಯವನ್ನು ಒತ್ತಿ ಹೇಳಿದ ಅವರು, ಅವರ ಮೇಲಿರುವ ಆಡಳಿತವು ಇದಕ್ಕೆ ಸಹಕಾರಿಯಾಗಿದೆ ಎಂದು ಜನರು ಶಂಕಿಸಿದ್ದಾರೆ. ಇತ್ತೀಚಿನ ಹಲವಾರು ಘಟನೆಗಳು ಗುಜರಾತ್ ಬಂದರಿನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಪ್ರವೇಶಿಸುತ್ತಿದೆ ಎಂದು ತೋರಿಸುತ್ತದೆ. ಇಲ್ಲಿಂದ, ಡ್ರಗ್ಸ್ ಪಂಜಾಬ್ ಮತ್ತು ದೇಶದ ಇತರ ಭಾಗಗಳಿಗೆ ಹೋಗುತ್ತದೆ. ಇದು ಏಕೆ ನಡೆಯುತ್ತಿದೆ? ಮೇಲ್ನೋಟಕ್ಕೆ, ಎಲ್ಲೋ ಆಡಳಿತವು ಉನ್ನತ ಮಟ್ಟದಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ತಿಳಿಸಿದರು.












Click it and Unblock the Notifications