• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಿಯಾಣ ಪೊಲೀಸ್‌ ಠಾಣೆ ಎದುರು ರೈತರ ಪ್ರತಿಭಟನೆಯಲ್ಲಿ ಹಸುಗಳು ಹಾಜರು!

|
Google Oneindia Kannada News

ಚಂಢೀಗಡ, ಜೂ.07: ಹರಿಯಾಣದ ಸದರ್ ಪೊಲೀಸ್ ಠಾಣೆ ಮುಂಭಾಗ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹಸುಗಳು ಕೂಡಾ ಹಾಜರಾಗಿರುವ ಘಟನೆ ನಡೆದಿದೆ. ಹಸುವನ್ನು ನೋಡಿ ಅಧಿಕಾರಿಗಳು ಹಾಗೂ ರೈತರ ನಡುವಿನ ವಾಕ್ಸಮರ ಇನ್ನಷ್ಟು ತೀವ್ರವಾಗಿದೆ.

ಬಂಧಿತ ರೈತರ ಬಿಡುಗಡೆ ವಿಚಾರದಲ್ಲಿ ಹರಿಯಾಣದ ಫತೇಹಾಬಾದ್ ಜಿಲ್ಲೆಯ ತೋಹಾನಾದಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ತೀವ್ರಗೊಂಡಿದ್ದು ನೂರಾರು ಪ್ರತಿಭಟನಾಕಾರರು ಪಟ್ಟಣದ ಸದರ್ ಪೊಲೀಸ್ ಠಾಣೆಗೆ ತೆರಳಿ ಠಾಣೆಯ ಆವರಣದಲ್ಲಿ ಟೆಂಟ್ ನಿರ್ಮಿಸಿ ಧರಣಿ ಕೂತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ರೈತರು ತನ್ನ ಹಸುವನ್ನು ಕೂಡಾ ಕರೆ ತಂದಿದ್ದಾರೆ. ಮನೆಯಲ್ಲಿ ಅವಳನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.

91ನೇ ದಿನಕ್ಕೆ ಕಾಲಿಟ್ಟ ದಿಲ್ಲಿ ರೈತ ಚಳವಳಿ91ನೇ ದಿನಕ್ಕೆ ಕಾಲಿಟ್ಟ ದಿಲ್ಲಿ ರೈತ ಚಳವಳಿ

ತೋಹಾನಾದ ಜೆಜೆಪಿ ಶಾಸಕ ದೇವೇಂದರ್ ಬಾಬ್ಲಿ ನಿವಾಸದಲ್ಲಿ ಜೂನ್ 1 ರಂದು ನಡೆದ ಪ್ರತಿಭಟನೆಯ ವೇಳೆ ಬಂಧಿತರಾದ ಇಬ್ಬರು ರೈತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಬ್ಬರೂ ರೈತರು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನು ಶನಿವಾರ ಎರಡು ಎಕರೆ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ 60 ಕ್ಕೂ ಹೆಚ್ಚು ಮಹಿಳೆಯರು ಕೂಡಾ ಭಾಗಿಯಾಗಿದ್ದರು. ರೈತ ಮುಖಂಡರಾದ ಗುರ್ನಮ್ ಸಿಂಗ್ ಚಾಡುನಿ, ರಾಕೇಶ್ ಟಿಕಾಯತ್‌ ಹಾಗೂ ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಕೂಡ ಶನಿವಾರ ರಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಭಾನುವಾರ, ಪಂಜಾಬ್ ರೈತ ಮುಖಂಡ ಜೋಗಿಂದರ್ ಸಿಂಗ್ ಉಗ್ರಾಹನ್ ರೈತರೊಂದಿಗೆ ಪ್ರತಿಭಟನೆಯಲ್ಲಿ ಜೊತೆಯಾಗಿದ್ದಾರೆ.

ಜೂನ್ 5: ಸಂಪೂರ್ಣ ಕ್ರಾಂತಿ ದಿವಸ; ಕಾರಣ?ಜೂನ್ 5: ಸಂಪೂರ್ಣ ಕ್ರಾಂತಿ ದಿವಸ; ಕಾರಣ?

ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹಲವಾರು ತಿಂಗಳುಗಳಿಂದ ದೇಶದೆಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜೂನ್ 1 ರಂದು, ತೋಹಾನಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಜೆಜೆಪಿ ಶಾಸಕ ದೇವೇಂದರ್ ಬಾಬ್ಲಿ ತೆರಳುತ್ತಿದ್ದಾಗ, ರೈತರು ಬಾಬ್ಲಿ ಕಾರನ್ನು ತಡೆದಿದ್ದಾರೆ ಆರೋಪಿಸಲಾಗಿದೆ. ಆ ಬಳಿಕ ನಡೆದ ಘರ್ಷಣೆಯಲ್ಲಿ, ಬಾಬ್ಲಿಯ ವೈಯಕ್ತಿಕ ಸಹಾಯಕರ ತಲೆಗೆ ಪೆಟ್ಟಾಗಿದೆ. ಶಾಸಕರ ಕಾರಿಗೆ ಹಾನಿ ಉಂಟಾಗಿದೆ. ಈ ಹಿನ್ನೆಲೆ ಪ್ರತಿಭಟನಾಕಾರರ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಲಾಗಿದೆ.

Protesting Haryana farmers towed cow to the police station

ಪ್ರತಿಭಟನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ಆಧಾರದಲ್ಲಿ 27 ರೈತರನ್ನು ಬಂಧಿಸಲಾಗಿದ್ದು 25 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಇಬ್ಬರು ರೈತರು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿನ್ನೆಲೆ ಇಬ್ಬರು ರೈತರ ಬಿಡುಗಡೆಗೆ ಒತ್ತಾಯಿಸಿ ಊರಿನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

"ನಮ್ಮ ರೈತ ಸಹೋದರರನ್ನು ಬಿಡುಗಡೆ ಮಾಡುವ ಬಗ್ಗೆ ಆಡಳಿತವು ಯಾವುದೇ ಭರವಸೆ ನೀಡದ ಕಾರಣ ನಾವು ಪ್ರತಿಭಟನೆ ಮುಂದುವರಿಸುತ್ತೇವೆ. ರೈತರನ್ನು ಬಿಡುಗಡೆ ಮಾಡುವವರೆಗೂ ನಾವು ತೋಹಾನಾ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ರೈತ ಮುಖಂಡ ಸುರೇಶ್ ಕೋತ್ ಹೇಳಿದ್ದಾರೆ.

ಆದರೆ ಶನಿವಾರದ ವೇಳೆಗೆ, ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದವರನ್ನು "ಕ್ಷಮಿಸಿದ್ದೇನೆ" ಎಂದು ಘೋಷಿಸಿದ್ದಾರೆ. ಘರ್ಷಣೆಯ ಸಂದರ್ಭ ಅವರು ಮಾಡಿದ "ನಿಂದನೆಗಳಿಗೆ" ಕ್ಷಮೆಯಾಚಿಸಿದರು. ಆದ್ದರಿಂದ
ರೈತರು ಈ ವಿಷಯವನ್ನು ಪರಿಹರಿಸಲಾಗಿದೆ ಹಾಗೂ ಎರಡು ಎಫ್ಐಆರ್‌ ಹಿಂಪಡೆಯಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಯೋಗೇಂದ್ರ ಯಾದವ್, ಈ ಪರಿಸ್ಥಿತಿಯನ್ನು ಸೃಷ್ಟಿಸಿದ ಸರ್ಕಾರದ ದುರಹಂಕಾರವಾಗಿದೆ. ಶಾಸಕರು ಈಗಾಗಲೇ ಕ್ಷಮೆಯಾಚಿಸಿದ್ದಾರೆ ಮತ್ತು ದೂರನ್ನು ಹಿಂಪಡೆಯಲು ಒಪ್ಪಿದ್ದಾರೆ. ಆದರೆ ಸರ್ಕಾರ ಪ್ರಕರಣ ಹಿಂತೆಗೆದುಕೊಳ್ಳಲು ಒಪ್ಪಿಲ್ಲ. ಸರ್ಕಾರ ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಏಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಕಾನೂನು ಸುವ್ಯವಸ್ಥೆ ಕಾಪಾಡಲು 500 ಕ್ಕೂ ಹೆಚ್ಚು ಪೊಲೀಸರನ್ನು ಪ್ರತಿಭಟನೆ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆ ಎಸ್‌ಎಚ್‌ಒ ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Protesting Haryana farmers towed cow to the police station
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X