ಪಂಜಾಬ್‌ನಲ್ಲಿ ಸಿಎಂ ಆಯ್ಕೆ ಮಾಡುವುದು ಕಾಂಗ್ರೆಸ್ ಹೈಕಮಾಂಡ್ ಅಲ್ಲ: ಸಿಧು

ಚಂಡೀಗಢ, ಜನವರಿ 12: ಪಂಜಾಬ್‌ನಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಆಯ್ಕೆ ಮಾಡುವುದಿಲ್ಲ ಎಂದು ಪಕ್ಷದ ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಪಂಜಾಬ್ ಜನ ಶಾಸಕರನ್ನು ಹಾಗೂ ತಮ್ಮ ಮುಖ್ಯಮಂತ್ರಿಯನ್ನು ಮಾಡುತ್ತಾರೆಯೇ ಹೊರತು ಕಾಂಗ್ರೆಸ್ "ಹೈಕಮಾಂಡ್" ಅಲ್ಲ ಎಂದಿದ್ದಾರೆ.

"ಕಾಂಗ್ರೆಸ್ ಹೈಕಮಾಂಡ್ ಸಿಎಂ ಅನ್ನು ಆಯ್ಕೆ ಮಾಡುತ್ತದೆ ಎಂದು ನಿಮಗೆ (ವರದಿಗಾರರಿಗೆ) ಹೇಳಿದರು ಯಾರು? ನನ್ನ ಮಾತು ಕೇಳಿ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿ ಯಾರು ಎಂದು ಜನ ನಿರ್ಧರಿಸುತ್ತಾರೆ ಎಂದರು.

People of Punjab Will Chose Their CM, Not The Congress High Command: Navjot Singh Sidhu

ನಿಮ್ಮ ಮನಸ್ಸಿನಲ್ಲಿ ತಪ್ಪು ಕಲ್ಪನೆ ಬೇಡ, ಪಂಜಾಬ್‌ನ ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಹಾಗೂ ಮುಖ್ಯಮಂತ್ರಿಯನ್ನೂ ಆಯ್ಕೆ ಮಾಡುತ್ತಾರೆ ಎಂದು ಸಿಧು ಪ್ರತಿಪಾದಿಸಿದರು.
ಪಂಜಾಬ್‌ನಲ್ಲಿ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಧು, ಫೆಬ್ರವರಿ 14ರ ನಂತರ ಮುಖ್ಯಮಂತ್ರಿ ಯಾರು ಅಂತ ಜನ ನಿರ್ಧರಿಸುತ್ತಾರೆ ಎಂದರು.

ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ಒಂದೇ ಹಂತದ ಮತದಾನ ನಡೆಯಲಿದೆ. ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿದೆ.

ಜನವರಿ 15ರವರೆಗೆ ಯಾವುದೇ ರೋಡ್ ಶೋ, ಸೈಕಲ್ ಜಾಥಾ ಸೇರಿದಂತೆ ಯಾವುದೇ ಮೆರವಣಿಗೆಯನ್ನು ಮಾಡುವಂತಿಲ್ಲ, ಹಾಗೆಯೇ ರಾತ್ರಿ 8ರಿಂದ ಬೆಳಗ್ಗೆ 8 ಗಂಟೆಯವರೆಗೆ ಯಾವುದೇ ಮೆರವಣಿಗೆ, ಸಭೆಗಳನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಜನವರಿ 21ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿರುತ್ತದೆ.

ಸುವಿಧಾ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆ ಮಾಡಬಹುದು. 5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ. ಚುನಾವಣಾ ಸಿಬ್ಬಂದಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

ಚುನಾವಣೆಗೆ 900 ವೀಕ್ಷಕರ ನೇಮಕ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯನ್ನು ತಿಳಿಸಬೇಕು. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ಬಗ್ಗೆ ಪಕ್ಷ ಕಾರಣ ನೀಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರವನ್ನು ಸಲ್ಲಿಸಬಹುದು.

ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮಾಹಿತಿ ಪ್ರಕಟಿಸಬೇಕು. ಆಯಾ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. KNOW YOUR CANDIDATE ಆ್ಯಪ್‌ನಲ್ಲಿ ಮಾಹಿತಿ ನೀಡಬೇಕು.

ಪಕ್ಷದ ವೆಬ್​ಸೈಟ್​ನ ಮುಖಪುಟದಲ್ಲಿ ಮಾಹಿತಿ ನೀಡಬೇಕು. ಗೋವಾ, ಮಣಿಪುರದಲ್ಲಿ ಚುನಾವಣಾ ವೆಚ್ಚ 28 ಲಕ್ಷ ರೂ. ಆಗಿರಲಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್​ನಲ್ಲಿ 40 ಲಕ್ಷ ಆಗಿರಲಿದೆ ಎಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಆಯೋಗ ಮಿತಿಗೊಳಿಸಿದೆ.

ಚುನಾವಣೆಯಲ್ಲಿ ಒಟ್ಟು 18.34 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. 24.9 ಲಕ್ಷ ಜನರು ಮೊದಲ ಬಾರಿ ಮತ ಚಲಾಯಿಸ್ತಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಸುತ್ತೇವೆ. ಮತಗಟ್ಟೆಗಳನ್ನು ಗ್ರೌಂಡ್ ಫ್ಲೋರ್‌ನಲ್ಲಿ ಸ್ಥಾಪಿಸಲಾಗುತ್ತದೆ. ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ.

Recommended Video

      IPL ನಿಂದ‌ ಚೀನಾ ಕಂಪನಿ ವಿವೋ ಗೆ ಗೇಟ್ ಪಾಸ್:ಇನ್ಮುಂದೆ Tata IPL | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+