ಶುಭಾಶಯಗಳ ಸುರಿಮಳೆ ಬಳಿಕ ನನ್ನ ಹುಟ್ಟುಹಬ್ಬವಲ್ಲ ಎಂದ ಪಂಜಾಬ್‌ ಸಿಎಂ!

ಚಂಡೀಗಢ, ಮಾರ್ಚ್ 02: ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಮಾರ್ಚ್ 1 ರಂದು ಇಡೀ ದಿನ ಹುಟ್ಟುಹಬ್ಬದ ಶುಭಾಶಯಗಳು ಬಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್‌ನ ಕಾಂಗ್ರೆಸ್‌‌ ಮುಖ್ಯಮಂತ್ರಿ ಅಭ್ಯರ್ಥಿಯಾದ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಶುಭಾಶಯ ಕೋರಿದ್ದಾರೆ. ಆದರೆ ಈ ಬೆನ್ನಲ್ಲೇ ಇಂದು ತನ್ನ ಹುಟ್ಟುಹಬ್ಬವಲ್ಲ ಎಂದು ಹೇಳುವ ಮೂಲಕ ಶುಭಾಶಯ ಕೋರಿದವರಿಗೆ ಪಂಜಾಬ್‌ ಸಿಎಂ ಚನ್ನಿ ಶಾಕ್‌ ನೀಡಿದ್ದಾರೆ.

ಈ ಬಗ್ಗೆ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ ಮೂಲಕ ಸ್ಪಷ್ಟನೆಯನ್ನು ಪಂಜಾಬ್‌ನ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ನೀಡಿದ್ದಾರೆ. "ಶುಭಾಶಯಗಳಿಗೆ ನಾನು ಕೃತಜ್ಞನಾಗಿದ್ದೇನೆ ಆದರೆ ಇಂದು ನನ್ನ ಜನ್ಮದಿನವಲ್ಲ," ಎಂದು ತಿಳಿಸಿದ್ದಾರೆ.

"ಇಂದು ನನಗೆ ಶುಭಕೋರಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಆದರೆ ಇದು ನನ್ನ ಜನ್ಮದಿನವಲ್ಲ. ನಿಮ್ಮ ಆಶೀರ್ವಾದವು ನನ್ನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ ಮತ್ತು ಹೆಚ್ಚು ಕಾರ್ಯನಿರ್ವಹಣೆ ಮಾಡಲು ನನಗೆ ಪ್ರೇರಣೆ ನೀಡುತ್ತದೆ. ನನ್ನ ಮೇಲೆ ಧಾರೆಯೆರೆದ ಪ್ರೀತಿಗಾಗಿ ನಾನು ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳು," ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಟ್ವೀಟ್‌ ಮಾಡಿದ್ದಾರೆ.

Not my birthday says Punjab CM Channi after greetings pour in all day

ಗೂಗಲ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಹುಟ್ಟುಹಬ್ಬವು ಮಾರ್ಚ್ 1 ಎಂದೇ ತೋರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಹಲವಾರು ಮಾಧ್ಯಮಗಳು ಚರಣ್‌ಜೀತ್‌ ಸಿಂಗ್‌ ಚನ್ನಿಗೆ ವಿವಿಧ ನಾಯಕರು ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ವರದಿಗಳನ್ನು ಪ್ರಸಾರ ಮಾಡಿದ್ದಾರೆ. ಆದರೆ ರಾತ್ರಿ ಹೊತ್ತಿಗೆ ಚರಣ್‌ಜೀತ್‌ ಸಿಂಗ್‌ ಚನ್ನಿ ಇಂದು ನನ್ನ ಹುಟ್ಟುಹಬ್ಬವಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿ ಸೇರಿ ಹಲವರಿಂದ ಶುಭಾಶಯ

ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಟ್ವೀಟ್‌ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಬಿಹಾರ, ಪಂಜಾಬ್ ಮತ್ತು ತಮಿಳುನಾಡು ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್, ಚರಣ್‌ಜೀತ್‌ ಸಿಂಗ್ ಚನ್ನಿ ಹಾಗೂ ಎಂ ಕೆ ಸ್ಟಾಲಿನ್ ಅವರ ಜನ್ಮದಿನದಂದು ಟ್ವಿಟರ್‌ನಲ್ಲಿ ಶುಭಾಶಯಗಳನ್ನು ಕೋರಿದ್ದರು. "ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್‌ ಮೂಲಕ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಶುಭಹಾರೈಸಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆಯ ಮೂಲಕವೂ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಶುಭಾಶಯ ತಿಳಿಸಲಾಗಿದ್ದು, ಸದ್ಯ ನೆಟ್ಟಿಗರ ಕಣ್ಣಿಗೆ ಹಾಸ್ಯವಾಗಿ ಮಾರ್ಪಟ್ಟಿದೆ. ಎಐಸಿಸಿ ಪಂಜಾಬ್ ಉಸ್ತುವಾರಿ ಹರೀಶ್ ಚೌಧರಿ ಕೂಡಾ ಶುಭಕೋರಿದ್ದಾರೆ. ಆದರೆ ಪಂಜಾಬ್‌ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಧು ಮಾತ್ರ ಚರಣ್‌ಜೀತ್‌ ಸಿಂಗ್‌ ಚನ್ನಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿಲ್ಲ ಎಂಬುವುದೇ ಚರ್ಚೆಯ ವಿಚಾರ ಆಗಿತ್ತು. ಆದರೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಇಂದು ತನ್ನ ಹುಟ್ಟುಹಬ್ಬವೇ ಅಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದಾರೆ. ಆದರೆ ಪಕ್ಷದವರಿಗೆಯೇ ಚನ್ನಿ ಹುಟ್ಟುಹಬ್ಬದ ಬಗ್ಗೆ ಮಾಹಿತಿ ಇಲ್ಲವೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆ

ಇನ್ನು ಕೆಲವು ನೆಟ್ಟಿಗರು ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಹುಟ್ಟುಹಬ್ಬಕ್ಕೂ ವಿಧಾನಸಭೆ ಚುನಾವಣೆಗೂ ಕೊಂಚ ಲಿಂಕ್‌ ಮಾಡಿಕೊಂಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಹುಟ್ಟುಹಬ್ಬ ಇಂದು ಅಲ್ಲವಾದರೆ ಮತ್ತೆ ಚುನಾವಣೆಗೆ ಸಲ್ಲಿಸಿದ ನಾಮಪತ್ರದಲ್ಲಿ ಯಾವ ದಿನಾಂಕವಿದೆ ಎಂದು ನೆಟ್ಟಿಗರು ಕುತೂಹಲ ವ್ಯಕ್ತಪಡಿಸಿದ್ದಾರೆ. ಹಾಗಾದರೆ ನಿಜವಾಗಿ ಪಂಜಾಬ್‌ ಸಿಎಂ ಹುಟ್ಟುಹಬ್ಬ ಯಾವಾಗ ಎಂದು ಕೂಡಾ ಕೇಳಲಾಗಿದೆ. ಇನ್ನೂ ಕೆಲವರು ಲೇವಡಿ ಮಾಡುವ ಮೂಲಕ ಪದೇ ಪದೇ ಹುಟ್ಟು ಹಬ್ಬದ ಶುಭಾಶಯ ಎಂದಿದ್ದಾರೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆದಿದೆ. ಮಾರ್ಚ್ 10 ರಂದು ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+