• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತದಾರರ ಬದಲು ತಾನೇ ವೋಟ್ ಹಾಕುತ್ತಿದ್ದ ಏಜೆಂಟ್: ವೈರಲ್ ವಿಡಿಯೋ

|

ಫರೀದಾಬಾದ್, ಮೇ 13: ಭಾನುವಾರ ನಡೆದ ಆರನೇ ಹಂತದ ಚುನಾವಣೆಯಲ್ಲಿ ಹರಿಯಾಣದ ಫರೀದಾಬಾದ್‌ನ ಮತಗಟ್ಟೆಯೊಂದರಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ ಯತ್ನಿಸಿದ ಮತಗಟ್ಟೆ ಏಜೆಂಟ್‌ನನ್ನು ಬಂಧಿಸಲಾಗಿದೆ.

ಮತಗಟ್ಟೆಯೊಳಗೆ ಕುಳಿತಿದ್ದ ಏಜೆಂಟ್ ಮತ ಹಾಕಲು ಮತದಾರರು ಬಂದಾಗ ಪ್ರತಿ ಬಾರಿ ಎದ್ದು ಹೋಗಿ ಇವಿಎಂ ಬಳಿ ತೆರಳಿ ಅಲ್ಲಿ ಬಟನ್ ಒತ್ತುವ ದೃಶ್ಯಗಳನ್ನು ಕೆಲವರು ಸೆರೆಹಿಡಿದಿದ್ದರು.ಈ ವಿಡಿಯೋ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮತದಾನವು ರಹಸ್ಯವಾಗಿರಬೇಕು ಎಂದು ಅಳವಡಿಸಿದ್ದರೂ ಏಜೆಂಟ್ ಅಲ್ಲಿಗೆ ತೆರಳಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು ಮತ್ತು ಕೆಲವರ ಮತಗಳನ್ನು ತಾವೇ ಒತ್ತಿದ್ದರು ಎಂದು ಆರೋಪಿಸಲಾಗಿದೆ.

ವೋಟು ಮಾಡಿ ಪೆರುಗ್ವೆ ಧ್ವಜ ಹಾಕಿದ ವಾದ್ರಾಗೆ ಪಂಚೋ ಪಂಚು!

ಸಾವಿರಾರು ಮಂದಿ ಈ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದು ಮಾಧ್ಯಮಗಳಲ್ಲಿಯೂ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ಹರಿಯಾಣದ ಮುಖ್ಯ ಚುನಾವಣಾಧಿಕಾರಿ ಕೂಡಲೇ ಕ್ರಮ ತೆಗೆದುಕೊಳ್ಳುವುದಾಗಿ ವ್ಯಕ್ತಿಯೊಬ್ಬರ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದರು.

ಕನಿಷ್ಠ ಮೂವರು ಮಹಿಳಾ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಆರೋಪದಲ್ಲಿ ಏಜೆಂಟ್‌ನನ್ನು ಭಾನುವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮತ ಚಲಾಯಿಸದೆ ಮಂಗಳಾರತಿ ಮಾಡಿಸಿಕೊಂಡ ದಿಗ್ವಿಜಯ್ ಸಿಂಗ್ !

ವ್ಯವಸ್ಥೆಯು ಸೂಕ್ತ ಸಮಯದಲ್ಲಿ ಕ್ರಮ ತೆಗೆದುಕೊಂಡಿದೆ ಮತ್ತು ತಪ್ಪಿತಸ್ಥನನ್ನು ಕಂಬಿ ಹಿಂದೆ ಇರಿಸಲಾಗಿದೆ ಎಂದು ಅದು ಟ್ವೀಟ್ ಮಾಡಿದೆ.

ಅಲ್ಲದೆ, ಈ ಘಟನೆಗೆ ಸಂಬಂಧಿಸಿದಂತೆ ಭಾಗಿಯಾಗಿರುವ ಎಲ್ಲ ಬೂತ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಚುನಾವಣಾ ಆಯೋಗ ಆದೇಶಿಸಿದೆ. ಈ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಬೂತ್ ಅಧಿಕಾರಿ ಅಮಿತ್ ಅತ್ರಿ ಅವರನ್ನು ಕರ್ತವ್ಯಲೋಪ ಎಸಗಿದ್ದಕ್ಕಾಗಿ ಅಮಾನತು ಮಾಡಲಾಗಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗುತ್ತಿದೆ. ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಅಶೋಕ್ ಕುಮಾರ್ ಎಂಬುವವರನ್ನು ನೇಮಿಸಲಾಗಿದೆ.

ಈ ಬಗ್ಗೆ ವಿಚಾರಣೆ ನಡೆಸಿದಾಗ, ಗಿರಿರಾಜ್ ಸಿಂಗ್ ತನಗೆ, ಬಿಜೆಪಿಯ ಚಿಹ್ನೆಯಾದ ಕಮಲಕ್ಕೇ ಮತ ಹಾಕಬೇಕೆಂದು ಬಲವಂತ ಮಾಡಿದ್ದಾರೆ ಓರ್ವ ಮಹಿಳೆ ಹೇಳಿಕೆ ನೀಡಿದ್ದಾರೆ. ಆದರೆ, ಯಾರಿಗೆ ಮತ ಹಾಕಬೇಕೆನ್ನುವುದು ನನ್ನ ಆಯ್ಕೆ, ನಾನು ಯಾರಿಗೆ ಬೇಕಾದರೂ ಮತ ಹಾಕುತ್ತೇನೆ ಎಂದು ಹೇಳಿದ್ದಾಗಿ ಆ ಮಹಿಳೆ ತಿಳಿಸಿದ್ದಾರೆ.

ಆಸೋಟಿ ಗ್ರಾಮದ ಬೂತ್ ನಂಬರ್ 88ರಲ್ಲಿ ನಡೆದ ಈ ಘಟನೆಯ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ನೀಲಿ ಟಿಶರ್ಟ್ ಧರಿಸಿದ್ದ ಗಿರಿರಾಜ್ ಸಿಂಗ್ ಮೂವರು ಮಹಿಳೆಯರಿಗೆ ಕಮಲಕ್ಕೇ ಮತ ಹಾಕಬೇಕೆಂದು ಒತ್ತಾಯಿಸಿದ್ದಾನೆ. ಇದನ್ನೇ ಬಳಸಿಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿಯ ವಿರುದ್ಧ ಹರಿಹಾಯುತ್ತಿದೆ.

ಫರೀದಾಬಾದ್ ಲೋಕಸಭಾ ಕ್ಷೇತ್ರದಲ್ಲಿ 28 ಅಭ್ಯರ್ಥಿಗಳು ಸೆಣಸುತ್ತಿದ್ದಾರೆ. ಎರಡು ವೋಟಿಂಗ್ ಮಷೀನ್ ಗಳನ್ನು ಇಡಲಾಗಿತ್ತು. ಅಲ್ಲಿ ಮತ ಹಾಕಲು ಬರುತ್ತಿದ್ದ ಹಲವಾರು ಮಹಿಳೆಯರು ಅನಕ್ಷರಸ್ಥರು. ಅವರು ಗೊಂದಲಕ್ಕೀಡಾಗುತ್ತಾರೆ ಎಂದು ನಾನೇ ಅವರಿಗೆ ಸಹಾಯ ಮಾಡಿದೆ. ಆದರೆ, ವೋಟಿಂಗ್ ಮಷೀನ್ ಬಳಿ ಹೋಗುವುದು ಅಪರಾಧ ಎಂದು ತಿಳಿದಿರಲಿಲ್ಲ ಎಂದು ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದಾನೆ.

English summary
Lok Sabha Elections 2019: Election office of Haryana said, A polling agent in Faridabad was arrested on Sunday for trying to influence voters during the 6th phase of General Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more