ಚುನಾವಣಾ ಅಖಾಡದಲ್ಲಿ ಕುಸ್ತಿಪಟು ಯೋಗೇಶ್ವರ್ ದತ್‌ಗೆ ಸೋಲು
ಬರೋಡಾ, ಅಕ್ಟೋಬರ್ 24: ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದು ತಂದಿದ್ದ ಕುಸ್ತಿಪಟು ಯೋಗೇಶ್ವರ್ ದತ್, ಚುನಾವಣಾ ಅಖಾಡದ ತಮ್ಮ ಮೊದಲ ಸ್ಪರ್ಧೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.
ಹರಿಯಾಣ ವಿಧಾನಸಭೆ ಚುನಾವಣೆ ಘೋಷಣೆಯಾದ ವೇಳೆಯಲ್ಲಿಯೇ ಬಿಜೆಪಿ ಸೇರ್ಪಡೆಯಾಗಿದ್ದ ಯೋಗೇಶ್ವರ್ ದತ್, ಬರೋಡಾ ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ನವೆಂಬರ್ 2ರಂದು ತಮ್ಮ ಜನ್ಮದಿನಕ್ಕೂ ಮುನ್ನ ಗೆಲುವಿನ ಸಂಭ್ರಮ ಆಚರಿಸುವ ಉತ್ಸಾಹದಲ್ಲಿದ್ದ ದತ್ ಅವರಿಗೆ ನಿರಾಶೆಯಾಗಿದೆ.
ಕಾಂಗ್ರೆಸ್‌ನ ಕೃಷನ್ ಹೂಡಾ ಎದುರು ದತ್ ಸೋಲು ಅನುಭವಿಸಿದ್ದಾರೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ದತ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ನಂತರದ ಸುತ್ತಗಳಲ್ಲಿ ಕೃಷನ್ ಹೂಡಾ ಮುನ್ನಡೆ ಸಾಧಿಸಿದರು.
Recommended Video

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಖ್ಯಾತ ಕುಸ್ತಿಪಟುಗಳು ಕಣದಲ್ಲಿದ್ದಾರೆ. ಮಹಿಳಾ ಕುಸ್ತಿಪಟು ಬಬಿತಾ ಪೋಗಟ್ ಕೂಡ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿ ದಾದ್ರಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಯೋಗೇಶ್ವರ್ ದತ್ ಸೋಲು ಅನುಭವಿಸಿದ್ದು, ಬಬಿತಾ ಪೋಗಟ್ ಕೂಡ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ ಬಳಿಕ ಹಿನ್ನಡೆ ಅನುಭವಿಸಿದ್ದಾರೆ.












Click it and Unblock the Notifications