ಹರಿಯಾಣ: ನುಹ್‌ನ ಮದರಸಾದಲ್ಲಿ 11 ವರ್ಷದ ಬಾಲಕನ ಶವ ಪತ್ತೆ- ಕೊಲೆ ಆರೋಪ
ಹರಿಯಾಣ, ಸೆಪ್ಟೆಂಬರ್ 06: ಹರಿಯಾಣದ ನುಹ್‌ನ ಮದರಸಾದಲ್ಲಿ ಓದುತ್ತಿದ್ದ 11 ವರ್ಷದ ವಿದ್ಯಾರ್ಥಿಯೊಬ್ಬ ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ. ವಿವರಗಳ ಪ್ರಕಾರ, ಪುನ್ಹಾನಾ ಉಪ-ವಿಭಾಗದ ಹಳ್ಳಿಯಾದ ಶಾ ಚೋಖಾದಲ್ಲಿನ ಪಿರ್ ದಾದಾ ಶಾ ಚೌಖಾದ ಮಜರ್ ಬಳಿ ಇರುವ ಮದರಸಾದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಘಟನೆಯನ್ನು ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ವಿಭಾಗದ (ಎಫ್‌ಎಸ್‌ಎಲ್) ತಂಡವು ತನಿಖೆ ನಡೆಸುತ್ತಿದೆ. ಮೃತನ ಕುಟುಂಬದವರು ಕೊಲೆಯ ಆರೋಪ ಮಾಡಿದ್ದು ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
"ಮದರಸಾದಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ದೊರೆತ ನಂತರ ನಾವು ಇಲ್ಲಿಗೆ ತಲುಪಿದ್ದೇವೆ. ನಾವು ಎಫ್‌ಎಸ್‌ಎಲ್ ತಂಡವನ್ನು ಇಲ್ಲಿಗೆ ಕರೆಸಿ ತನಿಖೆ ನಡೆಸುತ್ತಿದ್ದೇವೆ. ಮೃತರ ಕುಟುಂಬದವರ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡಿಖೇಡಾದ ಅಲ್-ಆಫಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ'' ಎಂದು ಎಎಸ್ಪಿ ಉಷಾ ಕುಂದು ತಿಳಿಸಿದ್ದಾರೆ. ಮೃತ ಬಾಲಕ ಸುಮಾರು ಒಂದು ವರ್ಷದಿಂದ ಮದರಸಾದಲ್ಲಿ ಓದುತ್ತಿದ್ದ ಎನ್ನಲಾಗಿದೆ.
"ಅವನು 11 ವರ್ಷ ವಯಸ್ಸಿನವನಾಗಿದ್ದನು ಮತ್ತು ಈ ಮದರಸಾದಲ್ಲಿ ಒಂದು ವರ್ಷದಿಂದ ಓದುತ್ತಿದ್ದನು. ನನ್ನ ಸೋದರಳಿಯನು ಮದ್ರಸಾವನ್ನು ತೊರೆದಿದ್ದಾನೆ ಎಂದು ನನಗೆ ತಿಳಿಸಲಾಯಿತು. ಆದರೆ ಮನೆಗೆ ಬಂದಿಲ್ಲ. ನಾವು ಅವನನ್ನು ಹುಡುಕಿದೆವು. ಆದರೆ ಎಲ್ಲಿಯೂ ಅವನು ಸಿಗಲಿಲ್ಲ. ಇದು ಕೊಲೆ, ನಾವು ಬೇಡಿಕೊಳ್ಳುತ್ತೇವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.

ಇಸ್ಲಾಮಿಕ್ ಮದ್ರಸಾ ದರ್ಗಾದ ನಿರ್ದೇಶಕ ಮೌಲಾನಾ ಝಾಕಿರ್ ಅವರ ಪ್ರಕಾರ, ಸಂಜೆ ಪ್ರಾರ್ಥನೆಯಲ್ಲಿ ಹುಡುಗ ಹಾಜರಿದ್ದನು. ಆದರೆ ಹಾಜರಾತಿ ಸಮಯದಲ್ಲಿ ನಾಪತ್ತೆಯಾಗಿದ್ದನು. ಮಸೀದಿಯ ಕೊಠಡಿಯೊಂದರಲ್ಲಿ ಇದ್ದ ಕ್ರಷರ್ ಅಡಿಯಲ್ಲಿ ಬಾಲಕನನ್ನು ಸಮಾಧಿ ಮಾಡಲಾಗಿದೆ ಎಂದು ಅವರು ಹೇಳಿದರು.
ಇಸ್ಲಾಮಿಕ್ ಮದ್ರಸಾ ದರ್ಗಾದ ನಿರ್ದೇಶಕಿ ಮೊಲಾನಾ ಝಾಕಿರ್ ಷಾ ಚೌಖಾ ಮಾತನಾಡಿ, "11 ವರ್ಷದ ಬಾಲಕ ಸುಮಾರು ಒಂದು ವರ್ಷದಿಂದ ಇಲ್ಲಿ ಓದುತ್ತಿದ್ದನು, ಅವನು ಇಲ್ಲಿ ಉರ್ದು ಮತ್ತು ಅರೇಬಿಕ್ ಕಲಿತನು. ಶನಿವಾರ ಸಂಜೆ, ಅವನು ಪ್ರಾರ್ಥನೆಯ ಸಮಯದಲ್ಲಿ ಹಾಜರಿದ್ದನು. ಆದರೆ ಹಾಜರಾತಿ ಕೂಗಿದಾಗ ಇರಲಿಲ್ಲ. ಆತ ಕಾಣೆಯಾಗಿದ್ದನು. ಸಂಜೆ 7 ಗಂಟೆಗೆ ನಾವೆಲ್ಲರೂ ಅವನನ್ನು ಹುಡುಕಿದೆವು, ನಾವು ಅವನನ್ನು ಕಾಣದಿದ್ದಾಗ ಕುಟುಂಬ ಸದಸ್ಯರಿಗೆ ತಿಳಿಸಿದ್ದೇವೆ, ಹತ್ತಿರದ ಹಳ್ಳಿಗಳು ಮತ್ತು ಮಸೀದಿಗಳಲ್ಲಿ ಹುಡುಕಲಾಯಿತಾದರೂ ಬಾಲಕ ಪತ್ತೆಯಾಗಲಿಲ್ಲ'' ಎಂದಿದ್ದಾರೆ.
''ಮದರಸಾದ ಜಾಮಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಮಾತ್ರ ನಡೆಯುತ್ತಿದ್ದು, ಅಲ್ಲಿಯೂ ಶೋಧ ನಡೆಸಲಾಗಿದೆ. ಶನಿವಾರ ಮಸೀದಿಯ ಕೊಠಡಿಯೊಂದರಲ್ಲಿ ಕ್ರಷರ್‌ನಡಿಯಲ್ಲಿ ಬಾಲಕನ ಮೃತ ದೇಹವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ. ಈ ಬಗ್ಗೆ ಮನೆಯವರಿಗೆ ತಿಳಿಸಿದ್ದೇವೆ" ಎಂದು ಅವರು ಹೇಳಿದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು ಬಾಲಕನ ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ.












Click it and Unblock the Notifications