ಲಾಕ್‌ಡೌನ್‌ ಉಲ್ಲಂಘಿಸಿ ಕ್ರಿಕೆಟ್ ಆಡಿದ ಬಿಜೆಪಿ ಸಂಸದ ಮನೋಜ್ ತಿವಾರಿ

ಚಂಡೀಗಢ, ಮೇ 25: ದೆಹಲಿ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಮನೋಜ್ ತಿವಾರಿ ಲಾಕ್‌ಡೌನ್‌ ಉಲ್ಲಂಘನೆ ಮಾಡಿ ಕ್ರಿಕೆಟ್ ಆಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

ಹರ್ಯಾಣದ ಸೋನಿಪತ್‌ಗೆ ಭೇಟಿ ನೀಡಿದ ವೇಳೆ ಶೇಖ್‌ಪುರದ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಮನೋಜ್ ತಿವಾರಿ ಪಾಲ್ಗೊಂಡಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನೋಜ್ ತಿವಾರಿ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.

ಲಾಕ್‌ಡೌನ್‌ ಸಮಯದಲ್ಲಿ ಕ್ರಿಕೆಟ್ ಆಡಲು ಅನುಮತಿ ಇಲ್ಲ. ಆದರೂ ಕ್ರಿಕೆಟ್ ಆಡಿರುವ ಸಂಸದ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ, ಮಾಸ್ಕ್ ಸಹ ಧರಿಸಿಲ್ಲ. ಮಾಸ್ಕ್‌ ಧರಿಸಿದೆ ಕುಳಿತುಕೊಂಡಿರುವ ಫೋಟೋ ವೈರಲ್ ಆಗಿದೆ.

BJP MP Manoj Tiwari Played Cricket Without Mask

ವೃತ್ತಿಪರ ಆಟಗಾರನಂತೆ ಪ್ಯಾಡ್, ಕ್ರೀಡಾವಸ್ತ್ರ ಧರಿಸಿರುವ ಸಂಸದ ಮಾಸ್ಕ್ ಧರಿಸಿಲ್ಲ. ಪಂದ್ಯದ ವೇಳೆ ಇತರೆ ಆಟಗಾರರು ಹಾಗೂ ಅಂಪೈರ್‌ಗಳು ಮಾಸ್ಕ್ ಧರಿಸಿದ್ದಾರೆ. ಆದರೆ, ಮನೋಜ್ ತಿವಾರಿ ಮಾಸ್ಕ್ ಹಾಕಿಲ್ಲ. ಇದು ವಿರೋಧಕ್ಕೆ ಕಾರಣವಾಗಿದೆ.

ಇನ್ನುಳಿದಂತೆ ಹರ್ಯಾಣದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 1,184ಕ್ಕೆ ಏರಿಕೆಯಾಗಿದೆ. 765 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 403 ಕೇಸ್‌ಗಳು ಸಕ್ರಿಯವಾಗಿದೆ. ಇದುವರೆಗೂ 16 ಮಂದಿ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+