Get Updates
Get notified of breaking news, exclusive insights, and must-see stories!

ಮೊದಲ ಬಾರಿಗೆ ಯುವ ವಿಧಾನಸಭೆ: ಪಂಜಾಬ್‌ನಲ್ಲಿ 50 ವರ್ಷದೊಳಗಿನ 61 ಶಾಸಕರು

ಚಂಡೀಗ ಮಾರ್ಚ್ 19: ಪಂಜಾಬ್ ಹೊಸ ಸರ್ಕಾರವನ್ನು ರಚಿಸಿದೆ. ಇಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 92 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇದು ಆಮ್ ಆದ್ಮಿ ಪಕ್ಷದ ಬಹು ದೊಡ್ಡ ಗೆಲುವು. ಈಗ ಅವರ ಸರ್ಕಾರ ರಚಿಸುವ ಸಲುವಾಗಿ ಮುಖ್ಯಮಂತ್ರಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ಮಾಡಲಾಗಿದೆ. ಅದೇ ಹೊತ್ತಿಗೆ ಪಂಜಾಬ್ ಅಸೆಂಬ್ಲಿಯಲ್ಲಿ ಕಂಡ ಹೊಸ ಮುಖಗಳೂ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ 61 ಶಾಸಕರು 50 ವರ್ಷದೊಳಗಿನ ವಯಸ್ಸಿನವರಾಗಿದ್ದಾರೆ. ಇವರಲ್ಲಿ ಹರ್ಜೋತ್ 31 ವರ್ಷ ವಯಸ್ಸಿನ ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಾರ್ಚ್ 10ರಂದು ನಡೆದಿದ್ದು ಕಾಂಗ್ರೆಸ್‌ ಕೈಯಲ್ಲಿ ಇದ್ದ ಗದ್ದುಗೆಯನ್ನು ಎಎಪಿ ಪಡೆದುಕೊಂಡಿದೆ.

31 ನೇ ವಯಸ್ಸಿನಲ್ಲಿ ಹರ್ಜೋತ್ ಬೇನ್ಸ್ ಕಿರಿಯ ಸಚಿವ

ಪಂಜಾಬ್ ಸಂಪುಟದ 10 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ 31 ವರ್ಷದ ಹರ್ಜೋತ್ ಬೇನ್ಸ್ ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಇದೇ ವೇಳೆ ಜಾತಿ-ಧರ್ಮದ ಬಗ್ಗೆ ಮಾತನಾಡಿದರೆ ಸಿಎಂ ಮಾನ್ ಸೇರಿ 4 ಜನ ಜಾಟ್ ಸಿಖ್ ಕ್ಯಾಬಿನೆಟ್ ನಲ್ಲಿದ್ದಾರೆ. 3 ಹಿಂದೂ ಮತ್ತು 4 ದಲಿತ ಸಚಿವರಿದ್ದಾರೆ. ಇದಲ್ಲದೇ ನೂತನ ಸಚಿವರಲ್ಲಿ 2 ವೈದ್ಯರು, ಒಬ್ಬರು ನಿವೃತ್ತ ಅಧಿಕಾರಿ ಇದ್ದಾರೆ.

ಯುವ ಶಾಸಕರು

ಮೊದಲ ಬಾರಿಗೆ ವಿಧಾನಸಭೆಗೆ 'ಯುವ' ಶಾಸಕರು ಆಯ್ಕೆ ಆಗಿದ್ದಾರೆ. ಒಟ್ಟು 117 ಸದಸ್ಯರ ಪೈಕಿ 61 ಶಾಸಕರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅಂದರೆ, ಮೊದಲ ಬಾರಿಗೆ 61 ಶಾಸಕರು ಆಯ್ಕೆ ಆಗಿದ್ದು ಅವರ ವಯಸ್ಸು 50 ವರ್ಷಕ್ಕಿಂತ ಕಡಿಮೆ ಇದೆ.

61 MLAs under 50 in Punjab, Harjot is the youngest minister at 31 years old

ಈ ಬಾರಿ ವಿಧಾನಸಭೆಯಲ್ಲಿ ಎಷ್ಟು ಮಹಿಳೆಯರು ಇರುತ್ತಾರೆ. ಪಂಜಾಬ್ ವಿಧಾನಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದ ನಂತರ ಮಹಿಳಾ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಆ ನಂತರ ಉಳಿದವರಿಗೆ ಹಂಗಾಮಿ ಸ್ಪೀಕರ್ ಡಾ. ಇಂದರ್ಬೀರ್ ಸಿಂಗ್ ನಿಜ್ಜಾರ್ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನದ ನಂತರ ಶಾಸಕರು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಗಳನ್ನು ಕೂಗಿದರು. ಇದೀಗ ಸೋಮವಾರ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ.

61 MLAs under 50 in Punjab, Harjot is the youngest minister at 31 years old

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, 17 ಶಾಸಕರು ಎರಡನೇ ಬಾರಿ, 6 ಮೂರನೇ ಬಾರಿ, 3 ನಾಲ್ಕನೇ ಬಾರಿಗೆ ಗೆಲ್ಲುವ ಮೂಲಕ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಸಚಿವರಾದ 10 ಶಾಸಕರ ಪೈಕಿ ಹರ್ಪಾಲ್ ಸಿಂಗ್ ಚೀಮಾ ಮತ್ತು ಗುರ್ಮೀತ್ ಸಿಂಗ್ ಮೀಟ್ ಹೇರ್ ಸೇರಿದ್ದಾರೆ. ಉಳಿದ 8 ಶಾಸಕರು ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

61 MLAs under 50 in Punjab, Harjot is the youngest minister at 31 years old

ಪಂಜಾಬ್‌ನ ನೂತನ ಸಚಿವ ಸಂಪುಟ

ಭಗವಂತ್‌ ಮಾನ್‌: ಪಂಜಾಬ್‌ ನೂತನ ಮುಖ್ಯಮಂತ್ರಿ, ಗೃಹ ಖಾತೆ

ಕುಲ್ತಾರ್‌ ಸಿಂಗ್‌ ಸಂದ್ವಾ: ಉಪಮುಖ್ಯಮಂತ್ರಿ

ಅಮಾನ್‌ ಅರೋರಾ: ಹಣಕಾಸು ಸಚಿವ

ಬುಧ್‌ ರಾಮ್‌: ಶಿಕ್ಷಣ ಸಚಿವ

ಜಗದೀಪ್‌ ಸಿಂಗ್‌ ಕಾಕ ಬ್ರಾರ್‌: ಕೃಷಿ ಸಚಿವ

ಗುರ್ಮಿತ್‌ ಸಿಂಗ್‌ ಮೀತ್‌ ಹಯೇರ್‌: ಲೋಕಪಯೋಗಿ ಸಚಿವ

ಡಾ. ಬಲ್ವೀರ್‌ ಸಿಂಗ್‌: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ಜೈ ಕಿಶಾನ್‌ ರೌದಿ: ಆಹಾರ ಮತ್ತು ಪಡಿತರ ಖಾತೆ

ಫ್ರೋ. ಬಲ್ಜೀಂದರ್‌ ಕೌರ್‌: ಸ್ಥಳೀಯ ಸಂಸದೀಯ ವ್ಯವಹಾರ ಖಾತೆ

ಕುನ್ವಾರ್‌ ವಿಜಯ್‌ ಪ್ರತಾಪ್‌: ವಾಣಿಜ್ಯ ಸಚಿವ

ಕುಲ್ವಾಂತ್‌ ಸಿಂಗ್‌ ಪಂಡೋರಿ: ತಾಂತ್ರಿಕ ಶಿಕ್ಷಣ ಸಚಿವ

ಸವರ್‌ಜೀತ್‌ ಕೌರ್‌ ಮನೋಕೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ

ಗುರ್ಮಿತ್‌ ಸಿಂಗ್‌ ಕುಡಿಯಾಣ: ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ ಖಾತೆ

ಲಾಭ್‌ ಸಿಂಗ್‌ ಉಗೋಕೆ: ವಸತಿ ಮತ್ತು ನಗರಾಭಿವೃದ್ಧಿ ಪಂಚಾಯತ್‌ ಸಚಿವ

ಜೀವನ್‌ಜೋತ್‌ ಕೌರ್‌: ಕಂದಾಯ ಸಚಿವ

ನರೀಂದರ್‌ ಕೌರ್‌ ಭಾರಜ್‌: ಜಲ ಖಾತೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+