ಯಳಂದೂರು: 5 ವರ್ಷಗಳಿಗೊಮ್ಮೆ, 75 ದಿನಗಳ ಕಾಲ ನಡೆಯುವ ಈ ವಿಶೇಷ ಹಬ್ಬದ ಮಹತ್ವವವನ್ನು ನೀವು ತಿಳಿದುಕೊಳ್ಳಲೇಬೇಕು

ಚಾಮರಾಜನಗರ, ಫೆಬ್ರವರಿ, 13: ಹಬ್ಬ ಎಂದರೆ ಒಂದು ದಿನ ಇಲ್ಲವೇ ಎರಡು ದಿನ. ಆದರೆ, ‌ಈ ಊರಲ್ಲಿ ಬರೋಬ್ಬರಿ 75 ದಿನಗಳ ಕಾಲ ನಡೆಯುವ ವಿಶೇಷ ಹಬ್ಬ ಸೋಮವಾರದಿಂದ ಆರಂಭಗೊಂಡಿದೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕೆಸ್ತೂರು ಎಂಬ ಗ್ರಾಮದಲ್ಲಿ ಫೆಬ್ರವರಿ 12ರಿಂದ ಏಪ್ರಿಲ್ 26ರವರೆಗೆ ಮಾರಮ್ಮನ‌ ಹಬ್ಬ ಆಚರಣೆ ಮಾಡಲಿದ್ದು, ಸೋಮವಾರ ರಾತ್ರಿ ಹಾಲರವೆ ಉತ್ಸವದ ಮೂಲಕ ಹಬ್ಬ ಆರಂಭಗೊಂಡಿದೆ. ಕಳೆದ ನೂರಾರು ವರ್ಷಗಳಿಂದ ಈ ದೊಡ್ಡ ಹಬ್ಬ ಆಚರಿಸಿಕೊಂಡು ಬರಲಾಗುತ್ತಿತ್ತು. 5 ವರ್ಷಗಳಿಗೊಮ್ಮೆ ನಡೆಯುವ ಈ ಹಬ್ಬದಲ್ಲಿ ಗ್ರಾಮದ 12 ಸಮುದಾಯವು ಒಂದೊಂದು ಪೂಜೆ, ಆಚರಣೆಯಲ್ಲಿ ಪಾಲ್ಗೊಳ್ಳಲ್ಲಿವೆ.

Yelandur: This is special festival that lasts for 75 days, Know details

ಈ 75 ದಿನಗಳ ಅವಧಿಯಲ್ಲಿ ದೇವರಿಗೆ ವಿಶೇಷ, ವಿಭಿನ್ನ ಪೂಜೆಗಳನ್ನು ಮಾಡಲಿದ್ದು, ಶಿವರಾತ್ರಿ, ಯುಗಾದಿ ದಿನಗಳಂದು ವಿಶೇಷ ಕೈಂಕರ್ಯ ನಡೆಯಲಿದೆ. ಮಾರಿ ಕುಣಿತವೂ ಈ ಹಬ್ಬದ ಒಂದು ಭಾಗವಾಗಿದ್ದು, ಕೆಸ್ತೂರು ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಗಳು ಜನರು ಈ ಮಾರಮ್ಮನ ಹಬ್ಬದಲ್ಲಿ ಭಾಗಿಯಾಗಲಿದ್ದಾರೆ.

ಕೆಸ್ತೂರು ಗ್ರಾಮದ ಮಂಟೆಲಿಂಗಯ್ಯ ಈ ಕುರಿತು ಪ್ರತಿಕ್ರಿಯಿಸಿ, ನಮ್ಮ ಊರಿನಲ್ಲಿ ನಡೆಯುವ ವಿಶೇಷ ಆಚರಣೆ ಇದಾಗಿದ್ದು, ಇಷ್ಟು ಧೀರ್ಘವಾಗಿ ಬೇರೆಡೆ ಹಬ್ಬ-ಉತ್ಸವ ನಡೆಯುವುದಿಲ್ಲ. ಗ್ರಾಮದ 12 ಸಮುದಾಯದವೂ ಇದರಲ್ಲಿ ಪಾಲ್ಗೊಂಡು ಒಂದೊಂದು ಆಚರಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ದೀರ್ಘವಾಗಿ ನಡೆಯುವ ಈ ಕೆಸ್ತೂರು ಮಾರಮ್ಮನ ಹಬ್ಬ ಮತ್ತೇ ಬಂದಿದ್ದು, ಊರಲ್ಲಿ ಹಬ್ಬದ ಸಡಗರ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+