ಎ.ಆರ್. ಕೃಷ್ಣಮೂರ್ತಿಯನ್ನು ಬೆಂಬಲಿಸುತ್ತಾರಾ ಕಾಂಗ್ರೆಸ್ಸಿಗರು?

Recommended Video

      Karnataka Elections 2018 : ಎ ಆರ್ ಕೃಷ್ಣಮೂರ್ತಿಯನ್ನ ಕಾಂಗ್ರೆಸ್ಸಿಗರು ಬೆಂಬಲಿಸುತ್ತಾರಾ? | Oneindia Kannada

      ಚಾಮರಾಜನಗರ, ಏಪ್ರಿಲ್ 16: ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ ಎ.ಆರ್. ಕೃಷ್ಣಮೂರ್ತಿಗೆ, ಕೊಳ್ಳೇಗಾಲದ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ಟಿಕೆಟ್ ಕೊಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

      ಹಾಲಿ ಶಾಸಕರಿಗೇ ಟಿಕೆಟ್ ಎಂಬ ನಿಯಮವನ್ನು ಮುರಿದಿರುವ ಕಾಂಗ್ರೆಸ್, ಕೊಳ್ಳೇಗಾಲ ಕ್ಷೇತ್ರದಲ್ಲಿ ವಲಸಿಗ ಎ.ಆರ್. ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಿದೆ.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಹೈಕಮಾಂಡ್ ನಡೆಯಿಂದ ಶಾಸಕ ಎಸ್. ಜಯಣ್ಣ, ಮಾಜಿ ಶಾಸಕ ಎಸ್. ಬಾಲರಾಜ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ಮುಖಂಡರಲ್ಲಿ ಬೇಸರ ಮೂಡಿಸಿದೆ. ಇದರ ಬೆನ್ನಲ್ಲೇ ಕ್ಷೇತ್ರದಲ್ಲಿ ಭಿನ್ನಮತ ಮತ್ತು ಬಂಡಾಯ ಸ್ಫೋಟದ ಸಾಧ್ಯತೆಯೂ ವ್ಯಕ್ತವಾಗಿದೆ.

      will other congress leaders support A.R. Krishnamurthy?

      ಎ.ಆರ್. ಕೃಷ್ಣಮೂರ್ತಿ ಅವರ ಪಕ್ಷ ಸೇರ್ಪಡೆಗೇ ಕಾಂಗ್ರೆಸ್‌ನಲ್ಲಿ ತೀವ್ರ ವಿರೋಧವಿತ್ತು. ಕೊಳ್ಳೇಗಾಲದ ಐವರು ಟಿಕೆಟ್ ಆಕಾಂಕ್ಷಿಗಳು ಎ.ಆರ್. ಕೃಷ್ಣಮೂರ್ತಿ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಒಗ್ಗಟ್ಟಾಗಿದ್ದರು. ತಮ್ಮಲ್ಲೇ ಒಬ್ಬರಿಗೆ ಟಿಕೆಟ್ ನೀಡಿದರೂ ತೊಂದರೆಯಿಲ್ಲ ಎಂದು ಹೇಳಿಕೆ ನೀಡಿದ್ದರು.

      ಶಾಸಕ ಎಸ್. ಜಯಣ್ಣ, ಮಾಜಿ ಶಾಸಕ ಎಸ್. ಬಾಲರಾಜ್, ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯ ರಾಚಯ್ಯ, ರಾಜ್ಯ ಪರಿಶಿಷ್ಟ ಜಾತಿ ಘಟಕದ ಸಂಚಾಲಕ ನಟರಾಜ್ ಮತ್ತು ಪುಟ್ಟಬುದ್ದಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ಇತ್ತು. ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪುಟ್ಟಬುದ್ದಿ ಇತ್ತೀಚೆಗೆ ನಿಧನರಾಗಿದ್ದರು.

      ಜೆಡಿಯುನಿಂದ ಶಾಸಕರಾಗಿದ್ದ ಎ.ಆರ್. ಕೃಷ್ಣಮೂರ್ತಿ 2004ರ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಅವರ ಎದುರು ಕೇವಲ ಒಂದು ಮತದಿಂದ ಸೋತಿದ್ದರು. ಅದಾದ ಬಳಿಕ ಲೋಕಸಭೆ ಚುನಾವಣೆಗಳಲ್ಲಿ ಕಣಕ್ಕಿಳಿದರೂ ಎಆರ್‌ಕೆ ಅವರಿಗೆ ಗೆಲುವು ಒಲಿದಿಲ್ಲ.

      ಅಲ್ಲದೆ ಎಆರ್‌ಕೆ ಅವರ ಪ್ರಭಾವಳಿ ಇರುವುದು ಸಂತೇಮರಹಳ್ಳಿ ಹೋಬಳಿಯಲ್ಲಿ. ನಿರಂತರವಾಗಿ ಸೋಲು ಕಂಡಿರುವ ಎಆರ್‌ಕೆಗೆ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದ್ದರು. ಹೊರಗಿನಿಂದ ಬಂದವರಿಗೆ ಮಣೆ ಹಾಕುವುದಿಲ್ಲ ಎಂಬ ನಂಬಿಕೆ ಅವರಲ್ಲಿ ದಟ್ಟವಾಗಿತ್ತು. ಆದರೆ, ಅವರ ಲೆಕ್ಕಾಚಾರ ತಲೆಕೆಳಗಾಗಿದೆ.

      will other congress leaders support A.R. Krishnamurthy?

      ಬಿಎಸ್‌ಪಿಗೆ ಬೆಂಬಲ?
      2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್. ಜಯಣ್ಣ ಅವರಿಗೆ ನಿಕಟ ಪೈಪೋಟಿ ನೀಡಿದ್ದು, ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್.

      ಐದು ವರ್ಷದ ಅವಧಿಯಲ್ಲಿ ಚುರುಕಿನ ಪ್ರಚಾರ ನಡೆಸಿರುವ ಎನ್. ಮಹೇಶ್, ಈ ಬಾರಿ ಜೆಡಿಎಸ್‌ನ ಬೆಂಬಲವನ್ನೂ ಪಡೆದುಕೊಂಡಿರುವುದರಿಂದ ಗೆಲ್ಲುವ ರೇಸ್‌ನಲ್ಲಿ ಪ್ರಬಲ ಅಭ್ಯರ್ಥಿಯಾಗಿದ್ದಾರೆ.

      ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಮುಖಂಡರು ಅಸಮಾಧಾನ ಹೊಂದಿರುವುದರಿಂದ ಅವರಲ್ಲಿ ಕೆಲವರು ಎನ್. ಮಹೇಶ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.

      ಭಾನುವಾರ ರಾತ್ರಿಯಿಡೀ ಈ ಸಂಬಂಧ ಮಾತುಕತೆಗಳು ನಡೆದಿದ್ದು, ಕಾಂಗ್ರೆಸ್‌ನ ಕೆಲವು ಮುಖಂಡರು ಎನ್. ಮಹೇಶ್ ಅವರನ್ನು ತೆರೆಮರೆಯಲ್ಲಿ ಬೆಂಬಲಿಸಲು ಮುಂದಾಗಿದ್ದಾರೆ.

      ಎಆರ್‌ಕೆ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎಸ್. ಜಯಣ್ಣ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ಜಯಣ್ಣ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

      ಆದರೆ, ಮುಖ್ಯಮಂತ್ರಿಗೆ ಪರಮಾಪ್ತರಾಗಿರುವ ಅವರು, ಸಿದ್ದರಾಮಯ್ಯ ಅವರ ಮಾತನ್ನು ನಿರಾಕರಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ, ಎಆರ್‌ಕೆ ಅವರನ್ನು ಬೆಂಬಲಿಸಲು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಾರೆ.

      ಬಿಜೆಪಿ ಸೇರ್ತಾರಾ ಎಸ್. ಬಾಲರಾಜ್?
      ಕಾಂಗ್ರೆಸ್‌ನಿಂದ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಬಾಲರಾಜ್, ತಮಗೆ ಹಾಗೂ ಇತರೆ ಮುಖಂಡರಿಗೆ ಟಿಕೆಟ್ ದೊರಕದಿದ್ದಕ್ಕೆ ತೀವ್ರ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.

      ಮೂಲಗಳ ಪ್ರಕಾರ, ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಂಸದ, ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಅವರನ್ನು ಎದುರಿಸಲು ಬಿಜೆಪಿಯಲ್ಲಿ ಸಮರ್ಥ ಮುಖಂಡರ ಕೊರತೆ ಇದೆ.

      ಆ ಕೊರತೆಯನ್ನು ನೀಗಿಸುವ ಶಕ್ತಿ ಬಾಲರಾಜ್ ಅವರಲ್ಲಿ ಇದೆ. ಹೀಗಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಲಾಭವಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಬಿಜೆಪಿ ಸೇರ್ಪಡೆಗೆ ಬಾಲರಾಜ್ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

      ಗುರುವಿಗೆ ಕಾಣಿಕೆ ನೀಡಿದರೆ ಸಿದ್ದರಾಮಯ್ಯ?
      ಮಾಜಿ ಸಚಿವ, ಮಾಜಿ ರಾಜ್ಯಪಾಲ ದಿವಂಗತ ಬಿ. ರಾಚಯ್ಯ ಅವರ ಪರಮ ಶಿಷ್ಯರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗುರುವಿನ ಋಣ ತೀರಿಸಿದರೇ?

      ಬಿ. ರಾಚಯ್ಯ ಅವರ ಮಗ ಎ.ಆರ್.ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಿರುವ ಸಿದ್ದರಾಮಯ್ಯ, ಬಿ. ರಾಚಯ್ಯ ಅವರಿಗೆ ಗುರು ಕಾಣಿಕೆ ಸಲ್ಲಿಸಲು ಮುಂದಾಗಿದ್ದಾರೆ.

      'ರಾಜಕೀಯದಲ್ಲಿ ಉಳಿಯಲು ಒಂದೋ ಕಾಂಗ್ರೆಸ್ ಸೇರು. ಇಲ್ಲವೇ ಸಿದ್ದರಾಮಯ್ಯ ಅವರ ಜತೆ ಹೋಗು' ಎಂದು ಮಗ ಎ.ಆರ್. ಕೃಷ್ಣಮೂರ್ತಿ ಅವರಿಗೆ ಬಿ. ರಾಚಯ್ಯ ಒಮ್ಮೆ ಹೇಳಿದ್ದರು. ಆದರೆ, ಕಾಂಗ್ರೆಸ್ ಸೇರದ ಎ.ಆರ್. ಕೃಷ್ಣಮೂರ್ತಿ, ಸಿದ್ದರಾಮಯ್ಯ ಅವರೊಂದಿಗೂ ಹೋಗಿರಲಿಲ್ಲ. ಕೊನೆಗೂ ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+