Daily Horascope July 23: ದ್ವಿಪುಷ್ಕರ ಯೋಗದಿಂದ ಈ ರಾಶಿಯವರಿಗೆ ಆರ್ಥಿಕ ಲಾಭ: ಹೊಸ ಅವಕಾಶಗಳು ಸೃಷ್ಟಿ
Daily Horoscope: ಇಂದು ಗುರುವಾರ (ಜುಲೈ 23) 12 ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಇಂದು ದ್ವಾದಶ ರಾಶಿಗಳಲ್ಲಿ ಯಾವ ರಾಶಿಯವರಿಗೆ ಶುಭ, ಲಾಭ ಆಗಲಿದೆ, ನಿಮ್ಮ ಫಲಾಫಲಗಳ ಹೇಗಿರಲಿವೆ ಎಂಬ ವಿವರ ಇಲ್ಲಿದೆ.
ಮೇಷ ರಾಶಿ (Aries):
ಈ ದಿನ ನಿಮಗೆ ಒಳ್ಳೆಯ ಸುದ್ದಿ ಸಿಗುವುದು. ಕುಟುಂಬದ ವಾತಾವರಣ ಸ್ಥಿರ ಮತ್ತು ಶಿಸ್ತುಬದ್ಧವಾಗಿರುತ್ತದೆ. ಪ್ರತಿಯೊಂದು ಅಂಶದಲ್ಲೂ ಸಕಾರಾತ್ಮಕವಾಗಿರಬೇಕು. ವ್ಯಾಪಾರಸ್ಥರಿಗೆ ಉತ್ತಮ ಅವಕಾಶಗಳು ಒಲಿದು ಬರುವುದು.ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿಯೇ ಇರುತ್ತದೆ.

ವೃಷಭ ರಾಶಿ (Taurus):
ವೃಷಭ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ಕೆಲಸದ ಯೋಜನೆಗಳು ಯಶಸ್ವಿಯಾಗುತ್ತವೆ. ಇಂದು ಆರಂಭಿಸುವ ಕೆಲಸದಲ್ಲಿ ಯಶಸ್ಸು ಸಿಗುವುದು. ಸಂಬಂಧಿಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.
ಮಿಥುನ ರಾಶಿ (Gemini):
ಮಗುವಿನ ಪ್ರಗತಿಯಿಂದ ಸಂತೋಷ ಸಿಗುವುದು. ಹಳೆಯ ಸ್ನೇಹಿರ ಭೇಟಿಯಿಂದ ಒಳ್ಳೆಯ ಸುದ್ದಿ ಸಿಗುವುದು. ವೈವಾಹಿಕ ಜೀವನದಲ್ಲಿ ಮನಸ್ತಾಪಗಳು ಉಂಟಾಗುವುದು. ತಾಳ್ಮೆಯಿಂದ ಇದ್ದರೆ ಸಮಸ್ಯೆಗಳು ಬಗೆಹರಿಯುವುದು. ವ್ಯವಹಾರದಲ್ಲಿ ಲಾಭವಾಗುವುದು.
ಕರ್ಕಾಟಕ ರಾಶಿ (cancer):
ವ್ಯವಹಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರುವಿರಿ. ವೈವಾಹಿಕ ಜೀವನವು ಸಾಮರಸ್ಯದಿಂದ ಇರುತ್ತದೆ. ಅವಿವಾಹಿತರ ಮದುವೆಯ ಮಾತುಕತೆ ನಡೆಯುವುದು. ಆರೋಗ್ಯ ಸಮಸ್ಯೆ ಕಾಡುವುದು.
ಸಿಂಹ ರಾಶಿ (Leo):
ಕುಟುಂಬದ ಮುಂದೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಕಷ್ಟು ಅವಕಾಶವಿರುತ್ತದೆ. ಜನರು ನಿಮ್ಮ ಕೆಲಸದ ಯೋಜನೆಯಿಂದ ಬಹಳ ಪ್ರಭಾವಿತರಾಗುತ್ತಾರೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಇಂದು ಮಾತಿನಲ್ಲಿ ಸಂಯಮವನ್ನು ಹೊಂದಿರಬೇಕು. ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯದಿಂದ ಸಂಪೂರ್ಣ ಪ್ರಯೋಜನ ಸಿಗುವುದು.
ಕನ್ಯಾ ರಾಶಿ (Virgo) :
ಇಂದಿನ ದಿನ ಅನುಕೂಲಕರವಾಗಿರುತ್ತದೆ. ಎಲ್ಲಾ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ತಿಯಾಗುವುದು. ಇಂದು ನೀವು ಕೈಗೊಳ್ಳುವ ಎಲ್ಲಾ ವ್ಯವಹಾರವು ಯಶಸ್ವಿಯಾಗುತ್ತದೆ. ಹೊಸ ಅವಕಾಶಗಳು ಒಲಿದು ಬರುವುದು. ಉದ್ಯೋಗವನ್ನು ಹುಡುಕುತ್ತಿರುವವರು ಸಿಹಿ ಸುದ್ದಿ ಸಿಗುವುದು.
ತುಲಾ ರಾಶಿ (Libra):
ಜೀವನದಲ್ಲಿ ಹೊಸ ಭರವಸೆ ಮೂಡುವುದು. ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು, ಸಂಪೂರ್ಣ ಯೋಜನೆಯನ್ನು ರೂಪಿಸುವಿರಿ. ನಿಮ್ಮ ಮಾತಿನ ಸರಳತೆಯು ಗೌರವವನ್ನು ತಂದು ಕೊಡುವುದು. ಎಲ್ಲಾ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ.
ವೃಶ್ಚಿಕ ರಾಶಿ (Scorpio):
ವೃಶ್ಚಿಕ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ಬೇರೆಯವರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ. ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಇಂದು ಸರಿಯಾದ ದಿನ. ಮನೆಯಲ್ಲಿರುವ ಪ್ರತಿಯೊಬ್ಬರೂ ನಿಮ್ಮ ಕೆಲಸದಿಂದ ತುಂಬಾ ಸಂತೋಷಪಡುತ್ತಾರೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ.
ಧನು ರಾಶಿ (Sagitarius) :
ಇಂದು ಅದೃಷ್ಟ ನಿಮ್ಮ ಪರವಾಗಿ ಇರುವುದು. ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಎಚ್ಚರಿಕೆಯಿಂದ ಯೋಚಿಸಿ. ಪ್ರಮುಖ ಕೆಲಸಗಳು ಮತ್ತು ಸಂಬಂಧಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಿ. ರಾಜಕೀಯದಲ್ಲಿ ತೊಡಗಿರುವವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ.
ಮಕರ ರಾಶಿ (Capricorn):
ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅನುಕೂಲಕರ ಸಮಯ. ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೊದಲು ಹಿರಿಯರಿಂದ ಸಲಹೆ ಪಡೆಯುವುದು ಪ್ರಯೋಜನಕಾರಿಯಾಗಿರುವುದು. ಹೊಸ ಜವಾಬ್ದಾರಿ ಹೆಗಲೇರುವುದು. ದೈನಂದಿನ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ.
ಕುಂಭ ರಾಶಿ (Aquarius):
ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಇಂದು ಪ್ರಾರಂಭಿಸುವ ಕೆಲಸಕ್ಕೆ ಉತ್ತಮ ಯಶಸ್ಸು ಸಿಗುವುದು. ಹೊಸ ವೃತ್ತಿ ಅವಕಾಶಗಳು ಸಿಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವಲ್ಲಿ ಸಹೋದರರಿಂದ ಬೆಂಬಲ ಸಿಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮೀನ ರಾಶಿ (Pisces) :
ಮನಸ್ಸು ಹೊಸ ಉತ್ಸಾಹದಿಂದ ತುಂಬಿರುತ್ತದೆ. ವೃತ್ತಿಯಲ್ಲಿ ಸ್ಥಾನಮಾನ ಹೆಚ್ಚಾಗುತ್ತದೆ. ಆರ್ಥಿಕವಾಗಿಯೂ ದಿನ ಪ್ರಯೋಜಕಾರಿಯಾಗಿರುವುದು. ಹೊಸ ಆದಾಯದ ಮೂಲಗಳು ಹೊರಹೊಮ್ಮುತ್ತವೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ.


Click it and Unblock the Notifications
