ಚಾಮರಾಜನಗರದಲ್ಲಿ ವದಂತಿ ಕೇಳಿ ಮಕ್ಕಳ ಮನೆಗೆ ಕರೆದೊಯ್ದ ಪೋಷಕರು
ಚಾಮರಾಜನಗರ, ಫೆಬ್ರವರಿ 7: ಮಂಗಳವಾರ ಚಾಮರಾಜನಗರದ ಕೆಲವು ಶಾಲೆಗಳಲ್ಲಿ ರುಬೆಲ್ಲಾ, ದಡಾರ ಲಸಿಕೆ ಕಾರ್ಯಕ್ರಮ ದಿಢೀರ್ ಅಂತ ಅರ್ಧಕ್ಕೆ ನಿಂತುಹೋಯಿತು. ಲಸಿಕೆ ಹಾಕಿಸಿದರೆ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಯಾರು ವದಂತಿ ಹಬ್ಬಿಸಿದರೋ ಗೊತ್ತಿಲ್ಲ, ಈ ಸುದ್ದಿಯಂತೂ ಕಾಳ್ಗಿಚ್ಚಿನಂತೆ ಹಬ್ಬಿತು.

ಈ ಸುದ್ದಿ ಒಬ್ಬರಿಂದ ಒಬ್ಬರ ಬಾಯಿಗೆ ಹರಡಿ, ಪೋಷಕರು ಎದ್ದೇವೋ ಬಿದ್ದೇವೋ ಎಂದು ಗಾಬರಿಯಲ್ಲಿ ಶಾಲೆಗೆ ತೆರಳಿ, ಮಕ್ಕಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋದರು. ಇನನ್ನೇನು ಮಕ್ಕಳೇ ಮನೆಗೆ ಹೋದ ಲಸಿಕೆ ಯಾರಿಗೆ ಹಾಕಬೇಕು ಹೇಳಿ. ಇಡೀ ಅಭಿಯಾನವೇ ಅರ್ಧಕ್ಕೆ ನಿಂತು ಹೋಯಿತು.

ನಿಮ್ಮ ಮಗುವಿಗೆ ಏನೂ ಆಗುವುದಿಲ್ಲ. ಅವರ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸುತ್ತಿದ್ದೇವೆ. ಯಾರೂ ಗಾಬರಿ ಅಗಬೇಡಿ. ಸಲ್ಲದ ವದಂತಿಗಳಿಗೆ ಕಿವಿಗೊಡಬೇಡಿ. ನಮ್ಮ ಸದುದ್ದೇಶಕ್ಕೆ ಮಕ್ಕಳ ಪೋಷಕರು ಸಹಕರಿಸಬೇಕು ಎಂದು ಆರೋಗ್ಯ ಅಧಿಕಾರಿಗಳೇನೋ ಮನವಿ ಮಾಡಿದ್ದಾರೆ. ಆದರೆ ಮಕ್ಕಳನ್ನು ಕರೆದುಕೊಂಡು ಲಸಿಕೆ ಹಾಕಿಸ್ತಾರಾ ಎಂದು ಕಾದು ನೋಡಬೇಕಷ್ಟೇ.












Click it and Unblock the Notifications