Get Updates
Get notified of breaking news, exclusive insights, and must-see stories!

ಹನೂರು: ಹೃದಯಾಘಾತದಿಂದ ಪಂಜಾಬ್ ಗಡಿಯಲ್ಲಿ ಮೃತಪಟ್ಟಿದ್ದ ಗಡಿಜಿಲ್ಲೆ ಯೋಧನ ಅಂತ್ಯಕ್ರಿಯೆ

ಚಾಮರಾಜನಗರ, ಆಗಸ್ಟ್, 25: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಯೋಧರ ಗ್ರಾಮ ಎಂದೇ ಪ್ರಸಿದ್ಧ ಆಗಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಯೋಧ ಹೃದಯಘಾತದಿಂದ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿರುವ ಘಟನೆ ಆಗಸ್ಟ್‌ 22ರಂದು ನಡೆದಿದ್ದು, ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು (ಆಗಸ್ಟ್‌ 25) ನೆರವೇರಿಸಲಾಯಿತು.

ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಯೋಧ ಜ್ಞಾನ ಪ್ರಕಾಶ್ ರವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

Soldier s Funeral in Sulvadi village of Hanur taluk

ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಯೋಧ ಜ್ಞಾನಪ್ರಕಾಶ್ ಕಳೆದ 13 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಆಯ್ಕೆಯಾಗಿ ಪಂಜಾಬ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಅವರು ಕಳೆದ ಎರಡು ದಿನಗಳ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು.

ಇನ್ನು ಇವರ ಸಾವಿನ ಮಾಹಿತಿಯನ್ನು ಕುಟುಂಬಸ್ಥರಿಗೆ ತಿಳಿಸಿ, ಕುಟುಂಬಸ್ಥರು ಪಂಜಾಬ್‌ಗೆ ತೆರಳಿ ಅಲ್ಲಿಂದ ಮೃತ ದೇಹವನ್ನು ವಿಮಾನದ ಮೂಲಕ ಬೆಂಗಳೂರಿಗೆ ತಂದು ಅಲ್ಲಿಂದ ಆಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ತರಲಾಯಿತು.

ನಂತರ ಕ್ರಿಶ್ಚಿಯನ್ ಸಮಾಜದ ಸಂಪ್ರದಾಯದಂತೆ ಪಾರ್ಥಿವ ಶರೀರವನ್ನು ಸುಳ್ವಾಡಿ ಗ್ರಾಮದ ಚರ್ಚ್‌ನಲ್ಲಿಟ್ಟು ಫಾ ಟೆನ್ನಿ ಕುರಿಯನ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಸುತ್ತಮುತ್ತಲಿನ ಗ್ರಾಮಗಳ ನಿವೃತ್ತ ಸೈನಿಕರಗಳು, ಸಾರ್ವಜನಿಕರು ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು. ಅದಾದ ಬಳಿಕ ಕ್ರೈಸ್ಥ ಮತದನುಸರವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪತ್ನಿ ನಿಧನದ ಸುದ್ದಿ ಕೇಳಿ ಪತಿಗೆ ಹೃದಯಾಘಾತ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹ ಪ್ರಕರಣಗಳಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿದೆ ಎನ್ನಬಹುದು. ಇದೀಗ ಪತ್ನಿ ನಿಧನದ ಸುದ್ದಿ ಕೇಳಿ ಪತಿಯೂ ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.

ಮಂಗಲ ಗ್ರಾಮದ ಶೇಖರ್ (70) ಹಾಗೂ ಸುಮಿತ್ರಮ್ಮ (65) ಎಂದು ಮೃತ ದಂಪತಿಗಳು‌. ಈ ದಂಪತಿಗಳು ಕೃಷಿಕರಾಗಿದ್ದು, ಮಂಗಲ ಸಮೀಪದ ರಾಮನಗುಡ್ಡ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶೇಖರ್ ರವರ ಪತ್ನಿ ಸುಮಿತ್ರಮ್ಮಗೆ ಶುಕ್ರವಾರ (ಆಗಸ್ಟ್‌ 23) ಮುಂಜಾನೆ ಎದೆ ನೋವು ಕಾಣಿಸಿಕೊಂಡಿದೆ. ಆಗ ಕೂಡಲೇ ಅವರನ್ನು ಕಾಮಗೆರೆ ಬಳಿ ಇರುವ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಮಿತ್ರಮ್ಮ ಚಿಕಿತ್ಸೆ ಫಲಿಸದೆ, ಶುಕ್ರವಾರ (ಆಗಸ್ಟ್‌ 23) ರಾತ್ರಿ ಮೃತಪಟ್ಟಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಪತಿ ಶೇಖರ್ ಕೂಡ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಜೀವನ ಜಂಜಾಟದಲ್ಲಿ ಒಂದಾಗಿದ್ದ ದಂಪತಿಗಳು ಸಾವಿನಲ್ಲೂ ಒಂದಾಗಿರುವುದು ಇವರ ಆದರ್ಶ ಜೀವನಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+