ಬಸವೇಶ್ವರ ಪ್ರತಿಮೆಗೆ ಅಪಮಾನ, ಸಿಡಿದೆದ್ದ ಚಾಮರಾಜನಗರ

By: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
Subscribe to Oneindia Kannada

ಚಾಮರಾಜನಗರ, ಜನವರಿ 21: ಬಿಜಾಪುರ ಜಿಲ್ಲೆಗೆ ಸೇರಿದ ನಿಡೋಣಿಯಲ್ಲಿ ವಿಶ್ವಗುರು ಬಸವಣ್ಣ ರವರ ಪ್ರತಿಮೆಗೆ ಕಿಡಿಗೇಡಿಗಳು ಮಾಡಿದ ಅವಮಾನ ಖಂಡಿಸಿ ಇಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿ ಟೈರ್ ಸುಟ್ಟು ತಮ್ಮ ವ್ಯಕ್ತಪಡಿಸಿದರು. ನಂತರ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.

Protest against the insult to Basavanna statue in Chamarajanagar

ಪ್ರತಿಭಟನೆಯಲ್ಲಿ ವಿವಿದ ಮಠಾಧೀಶರು ಭಾಗವಹಿಸಿ, ವಿಶ್ವಗುರು ಬಸವಣ್ಣ ರವರು ನಮ್ಮ ಸಮಾಜಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಶಾಂತಿ ಸೌಹಾರ್ದತೆಗಾಗಿ ಹೋರಾಟ ಮಾಡಿದಂತಹ ಅಪ್ರತಿಮ ಕಾಯಕಯೋಗಿ, ಇಂತಹ ವಿಶ್ವಗುರುವಿಗೆ ಅಪಮಾನ ಮಾಡಿರುವುದು ಇಡೀ ವಿಶ್ವಕ್ಕೆ ಆದಂತೆಯೇ ತಕ್ಷಣ ಜಿಡಿಗೇಡಿಗಳನ್ನು ಬಂದಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

Protest against the insult to Basavanna statue in Chamarajanagar

ಪ್ರತಿಭಟನೆಯಲ್ಲಿ ವೀರಶೈವ ಯುವ ವೇದಿಕೆ, ತಾಲ್ಲೂಕು, ಜಿಲ್ಲಾ ಘಟಕ ಸದಸ್ಯರು, ವೀರಶೈವ ಮಹಿಳಾ ವೇದಿಕೆ ಹಾಗೂ ಶರಣ ಸಮುದಾಯ ಭಾಗವಹಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many of the Veerashaiva community protested against the insult to Basavanna statue in Nidoni of of Bijapur.
Please Wait while comments are loading...