94 ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿ ಮನೆಗಳ್ಳರ ನಿದ್ದೆಗೆಡಿಸಿದ್ದ ಬಾಹು ನಿಧನ-ಈ ಶ್ವಾನದ ರೋಚಕ ಸ್ಟೋರಿ ಇಲ್ಲಿದೆ
ಚಾಮರಾಜನಗರ, ಜುಲೈ, 29: ಮನೆಗಳ್ಳರು, ದರೋಡೆ, ಸುಲಿಗೆಕೋರರ ನಿದ್ರೆಗೆಡಿಸಿದ್ದ , ಹೆಸರಿಗೆ ತಕ್ಕಂತೆ ತನ್ನ ಬಾಹುಬಲ ಪರಾಕ್ರಮ ಮೆರೆದಿದ್ದ ಪೊಲೀಸ್ ಇಲಾಖೆಯ ಶ್ವಾನ ಅನಾರೋಗ್ಯದಿಂದ ಅಸುನೀಗಿದೆ. ಹಾಗಾದರೆ ಇದರ ಇದುವರೆಗಿನ ಪರಾಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಚಾಮರಾಜನಗರ ಪೊಲೀಸ್ ಇಲಾಖೆಯ ಅಪರಾಧ ಪತ್ತೆದಳದಲ್ಲಿದ್ದ ಶ್ವಾನ ಬಾಹು(7.4 ವರ್ಷ) ಅಸೌಖ್ಯದಿಂದ ನಿಧಾನವಾಗಿದ್ದು, ಪೊಲೀಸ್ ಇಲಾಖೆ ವತಿಯಿಂದ ಸಕಲ ಸರ್ಕಾರಿ ಗೌರವದಿಂದ ಬಾಹುವಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಕ್ರೈಂ ಸ್ಕ್ವಾಡ್‌ನಲ್ಲಿದ್ದ ಈ ಶ್ವಾನವು ಮನೆಗಳವು, ದರೋಡೆ, ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ನಿಸ್ಸೀಮನಾಗಿತ್ತು. 94 ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಶ್ವಾನಕ್ಕೆ ಸಿದ್ದಯ್ಯ, ಸೆಲ್ವರಾಜ್ ಎಂಬವರು ಹ್ಯಾಂಡ್ಲರ್‌ಗಳಾಗಿದ್ದರು. ಕಳೆದ ಜನವರಿಯಲ್ಲಿ ನಡೆದ ಪೊಲೀಸ್ ವಲಯ ಕರ್ತವ್ಯ ಕೂಟದ ಸ್ಪರ್ಧೆಯಲ್ಲಿ ಭಾಗಿಯಾಗಿ ಬೆಳ್ಳಿ ಪದಕವನ್ನು ಪಡೆದಿತ್ತು. ಈ ಮೂಲಕ ಪೊಲೀಸರ ಅಚ್ಚುಮೆಚ್ಚಿನ ಶ್ವಾನವಾಗಿತ್ತು. ಇನ್ನು ಚಾಮರಾಜನಗರ ಎಸ್ಪಿ ಡಾ.ಕವಿತಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದಕ್ಕೆ ಅಂತಿಮ ಗೌರವ ಸಮರ್ಪಿಸಿದರು.
ನೀಳ ದೇಹ, ಸದೃಢ ಮೈಕಟ್ಟು, ಬೇಟೆಗಾರನ ಗುಣ ಹೊಂದಿದ್ದ ಡಾಬರ್ ಮೆನ್ ತಳಿಯ ಈ ಶ್ವಾನಕ್ಕೆ ಬಾಹು ಎಂದು ಹೆಸರಿಡಲಾಗಿತ್ತು.
ಬಿನ್ ಲಾಡೆನ್ ಸಂಹಾರಕ್ಕೆ ಬಳಸಿದ್ದ ಶ್ವಾನದ ತಳಿ ದಾವಣಗೆರೆಯಲ್ಲಿ: ಆಗಿನ ಕಾಲದಲ್ಲಿ ಭಯೋತ್ಪಾದನಾ ಚಟುವಟಿಕೆ ಮೂಲಕ ವಿಶ್ವವನ್ನೇ ನಡುಗಿಸಿದ್ದ ಉಗ್ರ ಒಸಾಮಾ ಬಿನ್ ಲಾಡೆನ್‌ನ ಪತ್ತೆಗೆ ಅಮೆರಿಕಾ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆದರೆ ಕೊನೆಗೆ ಈತನ ಪತ್ತೆಗೆ ಸಹಕಾರಿಯಾಗಿದ್ದೇ ಈ ಚಾಣಕ್ಷ ಶ್ವಾನ. ಈ ಶ್ವಾನ ಇದೀಗ ಬೆಣ್ಣೆನಗರಿ ದಾವಣಗೆರೆಯಲ್ಲಿದೆ. ಇದರ ಕಾರ್ಯಚಟುವಟಿಗೆ ಹೇಗಿತ್ತು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಅಮೆರಿಕಾ ದೇಶವು ಈತನ ಸಂಹಾರಕ್ಕೆ ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ. ಆಲ್ ಖೈದಾ ಎಂಬ ಉಗ್ರ ಸಂಘಟನೆಯ ಪ್ರಮುಖ ರೂವಾರಿಯಾದ ಲಾಡೆನ್ ಬಿಲ ಹುಡುಕಲು ಅಮೆರಿಕಾ ಸತತ ಪರಿಶ್ರಮ ಹಾಕಿತ್ತು. ಬಳಿಕ ಆತನನ್ನು ಹತ್ಯೆ ಮಾಡಲಾಗಿತ್ತು. ಈ ವಿಚಾರ ಈಗ ಯಾಕೆ ಅಂತೀರಾ. ವಿಶ್ವದ ಅಪಾಯಕಾರಿ ಉಗ್ರನ ಪತ್ತೆಗೆ ಚಾಣಾಕ್ಷ ಶ್ವಾನ ಬಳಕೆಯಾಗಿತ್ತು. ಆ ಶ್ವಾನ ಈಗ ದಾವಣಗೆರೆಯಲ್ಲಿ ಅಪರಾಧ ಚಟುವಟಿಕೆ ನಡೆಸುವವರ ಎದೆ ನಡುಗುವಂತೆ ಮಾಡಿದೆ.
ಒಸಾಮಾ ಬಿನ್ ಲಾಡೆನ್ ಹತ್ಯೆ ಮಾಡಲು ಅಮೆರಿಕಾ ನಡೆಸಿದ ತಂತ್ರಗಳು ಒಂದೆರಡಲ್ಲ. ಬಳಿಕ ಆತ ಅಡಗಿಕೊಂಡಿದ್ದ ಬಿಲ ಹುಡುಕಲು ಅಮೆರಿಕಾ ಈ ಶ್ವಾನ ಬಳಕೆ ಮಾಡಿತ್ತು. ಕೇವಲ ಅಮೆರಿಕಾ ಮಾತ್ರವಲ್ಲ, ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಜಗದ್ವಿಖ್ಯಾತಿ ಹೊಂದಿದೆ ಈ ಡಿಟೆಕ್ಟಿವ್ ಶ್ವಾನ. ದಾವಣಗೆರೆಗೆ ಬಂದಿರುವ ಈ ತಳಿಯ ಶ್ವಾನ ಶುರುವಿನಿಂದಲೇ ಕ್ರಿಮಿನಲ್‌ಗಳ ಹೆಡೆಮುರಿ ಕಟ್ಟಲು ಪೊಲೀಸರಿಗೆ ಸೇತುವೆಯಾಗಿ ನಿಂತಿದೆ.
2001ರ ಸೆಪ್ಟಂಬರ್ 11ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಾಗ ವಿಶ್ವವೇ ಬೆಚ್ಚಿಬಿದ್ದಿತ್ತು. ಆ ಬಳಿಕ ಅಮೆರಿಕಾ ಉಗ್ರನ ಸಂಹಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿತ್ತು. ಈ ಪ್ಲಾನ್‌ನಲ್ಲಿ ಶ್ವಾನವೊಂದು ಬಳಕೆಯಾಗಿತ್ತು. ಪಾಕಿಸ್ತಾನದ ಅಬೋಟಾಬಾದ್‌ನಲ್ಲಿನ ಕಾಂಪೌಂಡ್‌ನಲ್ಲಿ ಬಿನ್ ಲಾಡೆನ್ ಹತ್ಯೆಗೀಡಾಗಿದ್ದ. ಆದರೆ ಈತನ ಪತ್ತೆ ಕಾರ್ಯದಲ್ಲಿ ಈ ಶ್ವಾನದ ಪರಿಶ್ರಮ ತಳ್ಳಿ ಹಾಕುವಂತಿಲ್ಲ.












Click it and Unblock the Notifications