ಚಾಮರಾಜನಗರ ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ
ಚಾಮರಾಜನಗರ, ಡಿಸೆಂಬರ್ 21: ಚಾಮರಾಜನಗರದ ಸುಳವಾಡಿ ಹನೂರಿನ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟಿರುವವರ ಸಂಖ್ಯೆ 16ಕ್ಕೆ ಏರಿದೆ.
ಮಾರ್ಟಳ್ಳಿ ನಿವಾಸಿ ನಾಗೇಶ್(45) ಚಿಕಿತ್ಸೆ ಫಲಿಸದೆ ಶುಕ್ರವಾರ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಎಂಟು ದಿನಗಳ ಹಿಂದೆ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ಮೈಸೂರು ಹಾಗೂ ಚಾಮರಾಜನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ 16 ಮಂದಿ ಮೃತಪಟ್ಟಿದ್ದು, ಇನ್ನೂ 10ಕ್ಕೂ ಹೆಚ್ಚುಮಂದಿ ಸ್ಥಿತಿ ಚಿಂತಾಜನಕವಾಗಿದೆ.
ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ಅವರನ್ನು ವಿಷಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿದೆ.ಅಂಬಿಕಾ, ಮಹದೇವಸ್ವಾಮಿ ಇಬ್ಬರದ್ದೂ ಒಂದೇ ಊರು. ಅಂಬಿಕಾ, ವರಸೆಯಲ್ಲಿ ಇಮ್ಮಡಿ ಮಹದೇವಸ್ವಾಮಿಗೆ ಅಕ್ಕನ ಮಗಳು. ಮೊದಲಿನಿಂದಲೂ ಮಹದೇವಸ್ವಾಮಿಗೆ ಅಂಬಿಕಾ ಮೇಲೆ ಒಲವು ಇತ್ತಂತೆ.

ಈ ಹಿನ್ನೆಲೆ ಅಂಬಿಕಾ ಪತಿ ಮಾದೇಶ್ ಗೆ ಈ ಕಳ್ಳ ಸ್ವಾಮಿಯೇ ಕರೆದು ದೇವಸ್ತಾನದ ಮ್ಯಾನೇಜರ್ ಕೆಲಸ ನೀಡಿದ್ದ. ಮನೆಯಲ್ಲಿ ಅಂಬಿಕಾ ಹೇಳಿದ ಹಾಗೆಯೇ ಮಾದೇಶ್ ನಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications