Get Updates
Get notified of breaking news, exclusive insights, and must-see stories!

Trekking: ನಾಗಮಲೆ ಚಾರಣಕ್ಕೆ ಇನ್ಮುಂದೆ ಆನ್ ಲೈನ್ ಬುಕ್ಕಿಂಗ್: ಇಲ್ಲಿದೆ ವಿವರ

ಚಾಮರಾಜನಗರ, ಅಕ್ಟೋಬರ್‌ 17: ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯಲ್ಲಿನ ಮಹದೇಶ್ವರ ಬೆಟ್ಟದ ಸಮೀಪ ಇರುವ ನಾಗಮಲೆಗೆ ಚಾರಣ ಮಾಡುವ ಪ್ರವಾಸಿಗರು ಮತ್ತು ಭಕ್ತರು ಇನ್ನು ಮುಂದೆ ಆನ್ ಲೈನ್ ಮೂಲಕ ದಿನಾಂಕ ನಿಗದಿಪಡಿಸಿಕೊಂಡು ಶುಲ್ಕ ಪಾವತಿಸಿ ತೆರಳಬೇಕಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ಮಹದೇಶ್ವರಬೆಟ್ಟ ಸಮೀಪದ ದಟ್ಟಕಾನನದ ನಡುವೆ ಇರುವ ನಾಗಮಲೆ ಕ್ಷೇತ್ರಕ್ಕೆ ಚಾರಣಕ್ಕೆ ತೆರಳುವ ಮಾದಪ್ಪನ ಭಕ್ತರಿಗೆ ಆನ್ ಲೈನ್ ಬುಕ್ಕಿಂಗ್ ನಂತರವಷ್ಟೆ ತೆರಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Now Online Booking For Male Mahadeshwara Hills Nagamale Trekking

ಮಲೆಮಹದೇಶ್ವರ ವನ್ಯಜೀವಿ ವಿಭಾಗ ಮತ್ತು ಕಾವೇರಿ ವನ್ಯಜೀವಿ ವಿಭಾಗದ ಆರಣ್ಯದ ತಪ್ಪಲಿನಲ್ಲಿರುವ ನಾಗಮಲೆ ಕ್ಷೇತ್ರದಲ್ಲಿ ಕಲ್ಲಿನ ಲಿಂಗದ ರೂಪದಲ್ಲಿ ಶ್ರೀಮಹದೇಶ್ವರ ಸ್ವಾಮಿ ನೆಲೆಸಿದ್ದು, ಈ ಪವಿತ್ರ ಸ್ಥಳಕ್ಕೆ ತೆರಳಲು ಮಹದೇಶ್ವರ ಬೆಟ್ಟದಿಂದ ಸುಮಾರು 14 ಕಿ.ಮೀ ಅಂತರವಿದೆ. ದಟ್ಟ ಅರಣ್ಯದ ಮಧ್ಯದಲ್ಲಿರುವ ಈ ಪವಿತ್ರ ಸ್ಥಳಕ್ಕೆ ರಾಜ್ಯದ ನಾನಾ ಕಡೆಯಿಂದ ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಭೇಟಿ ನೀಡುತ್ತಿದ್ದಾರೆ.

ಈ ಮಾರ್ಗವು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಹುಲಿ, ಆನೆ, ಚಿರತೆ, ಕರಡಿ ಮುಂತಾದ ವೆನ್ನ ಪ್ರಾಣಿಗಳ ಚಲನವಲನ ಕಂಡುಬರುತ್ತಿರುವುರಿಂದ ಅರಣ್ಯ ಇಲಾಖೆಯು ಭಕ್ತಾದಿಗಳಿಗೆ ಅನುಕೂಲವಾಗುವಂತೆ ಪಾಲಾರ್‌ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ತುಳಸಿಕೆರೆ ಪರಿಸರ ಅಭಿವೃದ್ಧಿ ಸಮಿತಿಯವತಿಯಿಂದ 2018-19 ರಲ್ಲಿ ಸ್ಥಳೀಯ ವಾಹನಗಳಲ್ಲಿ ಭಕ್ತಾದಿಗಳನ್ನು ಇಂಡಿಗನತ್ತ ಗ್ರಾಮಕ್ಕೆ ಹೋಗುವವರೆಗೂ ಪ್ರವೇಶ ಶುಲ್ಕ ಸಂಗ್ರಹಿಸಿ ಬಿಡಲಾಗುತಿತ್ತು.

ನಂತರ ಅಲ್ಲಿಂದ ಭಕ್ತಾಧಿಗಳು ಕಾಲ್ನಡಿಗೆಯಲ್ಲಿ ಹೋಗಿ ಸ್ವಾಮಿಯ ದರ್ಶನ ಪಡೆದು ವಾಪಸ್ ಆಗುತ್ತಿದ್ದರು. ಆದರೆ, ಅರಣ್ಯ ಹಾಗೂ ವನ್ಯಜೀವಿಗಳ ಹಿತದೃಷ್ಟಿಯಿಂದ ಕಳೆದ ವರ್ಷ ಸರ್ಕಾರ ಚಾರಣಕ್ಕೆ ತೆರಳದಂತೆ ತಾತ್ಕಾಲಿಕ ತಡೆವೊಡ್ಡಿತ್ತು. ಪ್ರಸ್ತುತ ಆನ್‌ಲೈನ್‌ ಬುಕ್ಕಿಂಗ್‌ ನಂತರವಷ್ಟೇ ನಾಗಮಲೆ ಕ್ಷೇತ್ರಕ್ಕೆ ತೆರಳಲು ಭಕ್ತರಿಗೆ ಅವಕಾಶ ಕಲ್ಪಿಸಿದೆ.

Now Online Booking For Male Mahadeshwara Hills Nagamale Trekking

ಹಳೆಯೂರು ಗೇಟ್‌ನಿಂದ ಚಾರಣ ಪ್ರಾರಂಭ

ಭಕ್ತಾದಿಗಳು 24 ಗಂಟೆಗಳಲ್ಲಿ ಸಹ ಸ್ವಾಮಿಯ ದರ್ಶನ ಪಡೆದು ರಾತ್ರಿ, ವೇಳೆಯಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸಿರುವ ಘಟನೆಗಳು ಹಿಂದೆ ನಡೆದಿರುವುದರಿಂದ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಅರಣ್ಯ ಇಲಾಖೆಗೆ ಕಷ್ಟಕರವಾಗಿ ಪರಿಣಮಿಸಿರುತ್ತದೆ. ಈ ಮಾರ್ಗದಲ್ಲಿ ಭಕ್ತಾದಿಗಳನ್ನು ಕರೆದೊಯ್ಯುವವಾಹನಗಳ ವಿಮೆ, ಫಿಟ್‌ನೆಸ್ ಇಲ್ಲದೇ ವಾಹನಗಳು ಸಂಚರಿಸುತ್ತಿದ್ದರಿಂದ ನಿಯಮ ಮೀರಿ ಭಕ್ತಾದಿಗಳನ್ನು ವಾಹನಗಳಲ್ಲಿ ಹೆಚ್ಚಾಗಿ ಕರದೊಯುತ್ತಿದ್ದರಿಂದದಿ.

5.2.2024 ರಂದು ಸದರಿ ವಾಹನಗಳ ಸಂಚಾರ ನಿಲ್ಲಿಸಿ ಅರಣ್ಯ ಸಚಿವರ ಆದೇಶದ ಮೇರೆಗೆ ಆನ್‌ಲೈನ್ ಮುಖಾಂತರ ನಾಗಮಲೆಗೆ ಭಕ್ತಾದಿಗಳು ತೆರಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಸೂಚಿಸಿದ ಮೇರೆಗೆ ಭಕ್ತಾದಿಗಳು ನಾಗಮಲೆಗೆ ತೆರಳಲು ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು.

ಪ್ರಸ್ತುತ ಸರ್ಕಾರದ ಆದೇಶದ ಅನ್ವಯ ಎಲ್ಲಾ ಚಾರಣ ಸ್ಥಳಗಳಿಗೆ ವ್ಯವಸ್ಥಿತ ಮತ್ತು ಚಾರಣಿಕರಿಗೆ ಮತ್ತು ಪರಿಸರ ಸಂರಕ್ಷಣೆಯ ಹಿತ ದೃಷ್ಟಿಯಿಂದ ಅರಣ್ಯ ಇಲಾಖೆ ವೆಬ್ ಸೈಟ್‌ನಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಗಮಲೆ ಪುಣ್ಯ ಹನೂರು ತಾಲೂಕಿನ ಮಹದೇಶ್ವರಬೆಟ್ಟ ಸಮೀಪದ ದಟ್ಟಕಾನನದ ನಡುವೆ ಇರುವ ನಾಗಮಲೆ ಕ್ಷೇತ್ರ. ಕ್ಷೇತ್ರಕ್ಕೆ ಆನ್‌ಲೈನ್ ಮೂಲಕ ಕಾಯ್ದಿರಿಸಿ ಕಾಲುನಡಿಗೆಯ ಮುಖಾಂತರ ಹೋಗಬಹುದಾಗಿದೆ.

ಹಳೆಯೂರು ಗೇಟ್‌ನಿಂದ ಬುಕ್ಕಿಂಗ್ ವಿವರ

ಕಾಲ್ನಡಿಗೆಯಲ್ಲಿ ಚಾರಣ ಕೈಗೊಳ್ಳುವ ಭಕ್ತಾದಿಗಳು ಕರ್ನಾಟಕ ಅರಣ್ಯ ಇಲಾಖೆಯ ವೆಬ್‌ಸೈಟ್ www. aranyavihaara.karnataka.gov.in ನಲ್ಲಿ ದಿನಾಂಕ ನಮೂದಿಸಿ ಸ್ಟಾಟ್‌ನ್ನು ಆಯ್ಕೆ ಮಾಡಿಕೊಳ್ಳಬಹುದು. ಭಕ್ತಾದಿಗಳಿಗೆ/ ಚಾರಣಿಕರಿಗೆ ಬೆಳ್ಳಗೆ 6 ರಿಂದ 10 ಗಂಟೆಯ ಸ್ಟಾಟ್‌ನ್ನು ಬುಕ್ಕಿಂಗ್ ಅವಕಾಶ ನೀಡಿದ್ದು, ಚಾರಣ ಪಥವು ಒಟ್ಟು ದೂರ 14 ಕಿ.ಮೀ ಗಳಿದ್ದು ಹಳೆಯೂರು ಗೇಟ್ ಪ್ರಾರಂಭಿಸಿ ನಾಗಮಲೆ ತಲುಪಿ ಮತ್ತು ವಾಪಾಸ್ ಹಳೆಯೂರು ಗೇಟ್‌ನಲ್ಲಿ ಚಾರಣ ಮುಕ್ತಾಯಗೊಳ್ಳುತ್ತದೆ. ಚಾರಣಿಕರ ಜೊತೆಗೆ ಅರಣ್ಯ ಇಲಾಖೆಯ ಗೈಡ್ ಒಬ್ಬರು ಜೊತೆ ಇದ್ದು ಮಾಹಿತಿ ಒದಗಿಸಿರುತ್ತಾರೆ.

ಅರಣ್ಯ ಇಲಾಖೆಯು ಪ್ರಾಯೋಗಿಕವಾಗಿ ಒಂದು ದಿನಕ್ಕೆ 200 ಜನರಿಗೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಅವಕಾಶ ಮಾಡಿಕೊಡಲಾಗುವುದು ಹಾಗೂ ಚಾರಣಕ್ಕೆ ಬರುವ ಭಕ್ತಾದಿಗಳು ಅರಣ್ಯ ಸಚಿವರ ನಿರ್ದೇಶನದ ಮೇರೆಗೆ ಏಕ ಬಳಕೆಯ ಪ್ಲಾಸ್ಟಿಕ್‌ನ್ನು ವನ್ಯಧಾಮದಲ್ಲಿ ನಿಷೇಧಿಸಲಾಗಿದ್ದು ಭಕ್ತರು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಿದೆ.

ಭಕ್ತಾದಿಗಳಿಗೆ/ಚಾರಣಿಕರಿಗೆ ನೋಂದಾಯಿಸಿಕೊಳ್ಳಲು ಯಾವುದೇ ತೊಡಕು ಉಂಟಾದರೆ ವಲಯ ಅರಣ್ಯಾಧಿಕಾರಿ ಮಹದೇಶ್ವರಬೆಟ್ಟ ವನ್ಯಜೀವಿ ವಲಯ ಕಚೇರಿ, ಮಹದೇಶ್ವರಬೆಟ್ಟ 9481995510, ಉಪ ವಲಯ ಅರಣ್ಯಾಧಿಕಾರಿ ಮಹದೇಶ್ವರ ಬೆಟ್ಟ 9481995527, ವಲಯ ಅರಣ್ಯಾಧಿಕಾರಿ ಪಾಲಾರ್ 9481995512, ಉಪ ವಲಯ ಅರಣ್ಯಾಧಿಕಾರಿ ಪಾಲಾರ್ 9481995531, ಗಸ್ತು ಅರಣ್ಯ ಪಾಲಕರು, ಇಂಡಿಗನತ್ತ ಗಸ್ತು 9481995597 ಸಂಪರ್ಕಿಸುವಂತೆ ಕೋರಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+