ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆಲುವು ನಮ್ಮದೇ : ನಿರಂಜನ್ ಕುಮಾರ್ ಮನದ ಮಾತು

ಗುಂಡ್ಲುಪೇಟೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ 'ಒನ್ ಇಂಡಿಯಾ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಉಪಚುನಾವಣೆಯಲ್ಲಿ ಜಯ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

By ಯಶಸ್ವಿನಿ ಎಂ.ಕೆ.
|
Google Oneindia Kannada News

ಚಾಮರಾಜನಗರ, ಏಪ್ರಿಲ್ 7 : ಕ್ಷೇತ್ರದಲ್ಲಿ ಮತದಾರರು ಸ್ಪಂದಿಸುತ್ತಿರುವ ರೀತಿ ನನ್ನ ಉತ್ಸಾಹವನ್ನು ಹೆಚ್ಚಿಸಿದೆ. ನಮ್ಮ ಕುಟುಂಬ ನಾಲ್ಕು ಬಾರಿ ಸೋತಿರುವುದು ಮತದಾರರಲ್ಲಿ ನನ್ನ ಬಗ್ಗೆ ಅನುಕಂಪ ಮೂಡಿಸಿದೆ. ಮಿಗಿಲಾಗಿ ನಾನು ಸೋತರೂ ಜನರ ನಡುವೆ ಇರುವುದು ನನ್ನ ಬಗ್ಗೆ ತಾಲ್ಲೂಕಿನ ಜನರಲ್ಲಿ ವಿಶ್ವಾಸ ಮೂಡಿಸಿದೆ. ಹೀಗಾಗಿ ಈ ಚುನಾವಣೆಯಲ್ಲಿ ನನ್ನದೇ ಜಯ ಎಂದು ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್ ವಿಶ್ವಾಸದಿಂದ ನುಡಿದರು.

ಏಪ್ರಿಲ್ 9 ರಂದು ನಡೆಯಲಿರುವ ಗುಂಡ್ಲುಪೇಟೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ 'ಒನ್ ಇಂಡಿಯಾ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಉಪಚುನಾವಣೆಯಲ್ಲಿ ಜಯ ಸಾಧಿಸುವ ನಂಬಿಕೆ ಇರುವುದಾಗಿ ಹೇಳಿದರು. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.[ಈ ಬಾರಿ ಗೆಲುವು ನನ್ನದೇ ಬರೆದಿಟ್ಟುಕೊಳ್ಳಿ : ಕಳಲೆ ವಿಶ್ವಾಸ]

No one can stop my victory in by election: C.S.Niranjan Kumar

ನೀವು ಸ್ಪರ್ಧಿಸಿದ ಕಳೆದ ಎರಡು ಚುನಾವಣೆಗಳಿಗಿಂತ ಈ ಚುನಾವಣೆ ಭಿನ್ನವಾಗಿದೆಯಾ?
ನಿಜ ಇದು ಕಳೆದ ಎರಡು ಚುನಾವಣೆಗಳಿಗಿಂತ ಭಿನ್ನವಾಗಿದೆ. ನಾನು ಮೊದಲು ಎದುರಿಸಿದ ಎರಡು ಚುನಾವಣೆಗಳೂ ಸಾರ್ವತ್ರಿಕ ಚುನಾವಣೆ. ಅದರ ರೀತಿ, ನೀತಿಗಳೇ ಬೇರೆ. ಪ್ರಚಾರದ ವೈಖರಿಯೇ ಬೇರೆಯಾಗಿತ್ತು. ಈಗ ನಡೆಯುತ್ತಿರುವುದು ಉಪ ಚುನಾವಣೆ. ಮುಖ್ಯ ಮಂತ್ರಿಯಾದಿಯಾಗಿ ಎಲ್ಲ ಸಚಿವರು, ನಾಯಕರು ಪ್ರಚಾರಕ್ಕೆ ಬಂದಿದ್ದಾರೆ. ಸಹಜವಾಗಿ ಇದು ರಾಜ್ಯದ ಗಮನ ಸೆಳೆದಿದೆ.[ಉಪಚುನಾವಣೆ ದಿಕ್ಸೂಚಿ ಚುನಾವಣೆಯಲ್ಲ - ಸಿದ್ದರಾಮಯ್ಯ]

ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಅನುಕಂಪದ ವಾತಾವರಣ ಇದೆ ಎನ್ನುತ್ತಾರೆ, ಇದು ನಿಜವೇ?
ಕಾಂಗೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರ ಮೇಲೆ ಅನುಕಂಪ ಇದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಜನರು ಅವರಿಗೆ ಹೇಗೆ ಸ್ಪಂದಿಸುತ್ತಿದ್ದಾರೆ ಅನ್ನೋದು ನನಗೆ ತಿಳಿಯದು. ಆದರೆ ಜನರ ಅನುಕಂಪ ನನ್ನ ಮೇಲಿದೆ ಎಂಬುದು ನನಗೆ ಗೊತ್ತು. ನಮ್ಮ ತಂದೆ ಹಾಗೂ ನಾನು 2 ಬಾರಿ ಸೋತಿದ್ದೇವೆ. 4 ಬಾರಿ ಸೋಲು ಅನುಭವಿಸಿರುವ ಕುಟುಂಬ ನಮ್ಮದು. ಆದ್ದರಿಂದ ಪ್ರತಿ ಗಾಮದಲ್ಲೂ ನನ್ನ ಬಗ್ಗೆ ಅನುಕಂಪ ಇದೆ; ಜನರ ಪ್ರೀತಿ ವಿಶ್ವಾಸವೂ ವ್ಯಕ್ತವಾಗುತ್ತಿದೆ.[ಯಡ್ಡಿಯೂರಪ್ಪನವರದ್ದು ಉತ್ತರ ಕುಮಾರನ ಪೌರುಷ: ಉಗ್ರಪ್ಪ]

ನೀವು ಗೆದ್ದಲ್ಲಿ ಕ್ಷೇತ್ರದ ಪ್ರಗತಿಗೆ ಸಂಬಂಧಿಸಿದಂತೆ ನಿಮ್ಮ ಗುರಿ ಏನು?
ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಅದರಲ್ಲೂ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಶೇ. 75 ಭಾಗದ ಹಳ್ಳಿಗಳಲ್ಲಿ ನಮಗೆ ನೀರು ಕೊಡುವುದಕ್ಕೆ ನಿಮಗೆ ಸಾಧ್ಯವಾಗಿಲ್ಲ, ಇನ್ನು ಮತ ಕೇಳೋಕೆ ಹೇಗೆ ಬರ್ತೀರಾ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಪರಿಹಾರ ರೂಪಿಸಬೇಕು. ಕೆರೆಗಳಿಗೆ ನೀರು ತುಂಬಿಸುವ ಹಾಗೂ ಅಲ್ಲಿಂದ ನೀರೆತ್ತುವ ಕಾರ್ಯಕ್ರಮವನ್ನು ಮುಂದುವರಿಸಬೇಕು. ಅದರತ್ತ ನನ್ನ ಮೊದಲ ಗಮನ.[ಪೌಡರ್ ಹಾಕೊಳ್ಳಿ, ತಲೆ ಬಾಚ್ಕೊಳ್ಳಿ, ಕಡ್ಡಾಯವಾಗಿ ಮತಹಾಕಿ!]

ಮತ ಕೇಳುವುದಕ್ಕೆ ನೀವು ಬಳಸುತ್ತಿರುವ ಮಾನದಂಡ ಯಾವುದು?
ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ. ಇದು ಜನರ ಮನಸ್ಸಿನಲ್ಲಿದೆ. ಇದಕ್ಕಾಗಿ ಬಿಜೆಪಿ ಸರ್ಕಾರದಲ್ಲಿ 212 ಕೋಟಿ ರೂ. ಬಿಡುಗಡೆಯಾಗಿತ್ತು. ಅದರಿಂದ ತಾಲ್ಲೂಕಿನ 8 ಕೆರೆ ಸೇರಿ ಒಟ್ಟು 20 ಕೆರೆಗಳಿಗೆ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ ಸುಮಾರು ಕೆರೆಗಳಿಗೆ ನೀರು ತುಂಬಿಸಿದ್ದು ನಮ್ಮ ಸರ್ಕಾರದ ಅವಧಿಯಲ್ಲೇ. ಇದರಿಂದ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಅಂತರ್ಜಲ ವೃದ್ಧಿಯಾಗಿದೆ.

ಬಿಜೆಪಿ ಸರ್ಕಾರ ರೂಪಿಸಿದ ಭಾಗ್ಯಲಕ್ಷ್ಮಿ ಬಾಂಡ್, ಸುವರ್ಣ ಗ್ರಾಮ, ಸುವರ್ಣ ಭೂಮಿ, ರೈತರ ಸಾಲ ಮನ್ನಾ, ಕೃಷಿಗೆ ಪ್ರತ್ಯೇಕ ಬಜೆಟ್, ಕೇಂದ್ರದ ಮೋದಿ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದೆ ಇಟ್ಟು ಮತ ಕೇಳುತ್ತಿದ್ದೇವೆ.

ಪ್ರತಾಪ ಸಿಂಹ ಹೇಳಿಕೆ, ಬಿಎಸ್ ವೈ ಬಗ್ಗೆ ನಿಮ್ಮ ಪ್ರತಿಸ್ಪರ್ಧಿ ಗೀತಾ ಮಹದೇವಪ್ರಸಾದ್ ಆರೋಪ ನಿಮಗೆ ಪ್ರತಿಕೂಲ ಆಗಲಿದೆಯಾ?
ಸಂಸದ ಪ್ರತಾಪ ಸಿಂಹ ಅವರು ದುರುದ್ದೇಶದಿಂದ ಹೇಳಿಕೆ ನೀಡಿರಲಿಲ್ಲ. ಆದರೂ ತಮ್ಮ ಮಾತಿಗೆ ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ಆ ವಿಷಯ ಮುಗಿಯಿತು. ನಮ್ಮ ನಾಯಕರಾದ ಬಿ.ಎಸ್.ಯಡ್ಡಿಯೂರಪ್ಪ ಅವರ ಬಗ್ಗೆ ಗೀತಾ ಅವರು ಮಾಡಿರುವ ಆರೋಪ ಅವರಿಗೇ ತಿರುಗು ಬಾಣವಾಗಿದೆ. ಯಾವುದೇ ನಾಯಕರು ಸಾವಿನ ಮನೆಯಲ್ಲಿ ರಾಜಕೀಯ ಮಾತನಾಡುವುದಿಲ್ಲ. ಗೀತಾ ಅವರಿಗೆ ರಾಜಕೀಯ ಅನುಭವದ ಕೊರತೆ ಇದೆ. ಸುತ್ತೂರು ಸ್ವಾಮೀಜಿ ಅವರ ಹೆಸರನ್ನು ರಾಜಕೀಯಕ್ಕೆ ಬಳಸಿರುವ ಬಗ್ಗೆ ಜನರಲ್ಲಿ ಅಸಮಾಧಾನವಿದೆ.[ಜೆಡಿಎಸ್ ನಂತೆ ಕಾಂಗ್ರೆಸ್ ಕೂಡ ಅಪ್ಪ-ಮಕ್ಕಳ ಪಕ್ಷ: ವಿಶ್ವನಾಥ್]

ಸುತ್ತೂರು ಶ್ರೀಗಳ ಸೂಚನೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಹೇಳುವ ಮೂಲಕ ಸ್ವಾಮೀಜಿ ಅವರ ಗೌರವಕ್ಕೆ ಕುಂದುತಂದಿದ್ದಾರೆ. ಈ ಎಲ್ಲ ಸನ್ನಿವೇಶಗಳೂ ನನಗೆ ಅನುಕೂಲಕರವಾಗಿಯೇ ಇದ್ದು, ಏಪ್ರಿಲ್ 13 ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸಲಿದೆ ಎಂದು ಮತ್ತೊಮ್ಮೆ ವಿಶ್ವಾಸದಿಂದ ಹೇಳಲು ನಿರಂಜನ್ ಕುಮಾರ್ ಮರೆಯಲಿಲ್ಲ!

English summary
No one can stop my victory in by election BJP candidate for Gundlupet by election, C.S..Niranjan Kumar said in confidence. The by election, scheduled to be held on April 9th Sunday. And results will be declared on 13th April, Thursday. The BJP candidate was speaking in an interview, taken by Oneindia reporter today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X