ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಗಡಿಜಿಲ್ಲೆ ಮಹಿಳೆಗೆ ಆಹ್ವಾನ-ಇವರ ಹಿನ್ನೆಲೆ ಏನು ಗೊತ್ತಾ?

ಚಾಮರಾಜನಗರ, ಜೂನ್‌, 09: ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಗೆಲುವು ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆ ಸಕಲ ಸಿದ್ದತೆಗೆ ಮುಂದಾಗಿದೆ. ಇನ್ನು ಇಂದು (ಜೂನ್‌ 09) ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಚಾಮರಾಜನಗರ ತಾಲೂಕಿನ ಉಮ್ಮತೂರು ಗ್ರಾಮದ ವರ್ಷ ಅವರಿಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ. ಹಾಗಾದರೆ ಇವರ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಚಾಮರಾಜನಗರ ತಾಲೂಕಿನ ಉಮ್ಮತುರು ಗ್ರಾಮದ ಪ್ರಗತಿಪರ ರೈತರಾದ ವರ್ಷ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಮಾತುಗಳಿಂದ ಪ್ರೇರಣೆಗೊಂಡು ಬಾಳೆದಿಂಡಿನಿಂದ ವಸ್ತುಗಳನ್ನು ತಯಾರಿಸಿ ಉದ್ಯಮಿಯಾಗಿ ಗಮನ ಸೆಳೆದಿದ್ದಾರೆ.

Narendra Modi swearing in ceremony Invitation to Chamarajanagar woman

ಆತ್ಮನಿರ್ಭರ ಯೋಜನೆಯ ಮೂಲಕ ಪ್ರೇರಪಣೆಗೊಂಡು ಬಾಳೆದಿಂಡಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮೌಲ್ಯವರ್ಧನೆ ಮಾಡಿ ಬದುಕು ಕಟ್ಟುಕೊಂಡಿರುವ ವರ್ಷಾ ಅವರಿಗೆ ಪ್ರಧಾನಿ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದು, ಸದ್ಯ ಇದೀಗ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವರ್ಷ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಆಹ್ವಾನಿಸಿರುವುದು ತುಂಬಾ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+