ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮೋತ್ಸವವನ್ನು ಒಂಟಿಕೊಪ್ಪಲ್ ಪಂಚಾಂಗದಲ್ಲಿ ಸೇರಿಸೋದ್ ಬಾಕಿ!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ 11: "ನಾವು ಇಷ್ಟು ದಿನ ಆ ರಥೋತ್ಸವ ಈ ರಥೋತ್ಸವ ಕೇಳಿದ್ದೆವು. ಈಗ ಸಿದ್ದರಾಮೋತ್ಸವ ಬಂದಿದೆ" ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಲೇವಡಿ ಮಾಡಿದರು.

ಚಾಮರಾಜನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಳಿಗಿರಿ ರಥೋತ್ಸವ, ಶ್ರೀರಾಮೋತ್ಸವ ಇತ್ತು ಈಗ ಒಂಟಿಕೊಪ್ಪಲ್ ಪಂಚಾಗದಲ್ಲಿ ಸಿದ್ದರಾಮೋತ್ಸವ ಸೇರಿಸೋದು ಒಂದು ಬಾಕಿ, ಅದನ್ನು ಸೇರಿಸಿಬಿಟ್ಟರೆ ಸರಿಯಾಗುತ್ತದೆ. ಪ್ರಚಾರಕ್ಕೆ ಏನೆಲ್ಲಾ ನಾಟಕ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ, ಮಾಡಲಿ ಬಿಡಿ" ಎಂದು ವ್ಯಂಗ್ಯ ಮಾಡಿದ್ದಾರೆ.

ನಾನು ಟಿಕೆಟ್ ಕೊಡದಿದ್ರೆ ಸುಧಾಕರ್ ಈಗ ಮಂತ್ರಿ ಆಗ್ತಿದ್ರಾ: ಸಿದ್ದರಾಮಯ್ಯನಾನು ಟಿಕೆಟ್ ಕೊಡದಿದ್ರೆ ಸುಧಾಕರ್ ಈಗ ಮಂತ್ರಿ ಆಗ್ತಿದ್ರಾ: ಸಿದ್ದರಾಮಯ್ಯ

"ಆರಂಭದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಅವರ ಜಾತಿಯವರು ದಾವಣಗೆರೆಯಲ್ಲಿ 5 ಲಕ್ಷ ಜನರನ್ನು ಸೇರಿಸಿ ಸಿದ್ದರಾಮೋತ್ಸವ ಮಾಡುವ ಮೂಲಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಆದರೆ, ಪಕ್ಷದಲ್ಲೇ ಭಿನ್ನಾಭಿಪ್ರಾಯ ಬಂದಿದ್ದರಿಂದ ದೊಡ್ಡ ಸಮಿತಿಯೊಂದನ್ನು ಮಾಡಿಕೊಂಡು ಪಕ್ಷದ ವತಿಯಿಂದಲೇ ಮಾಡುತ್ತಿದ್ದಾರೆ" ಎಂದು ಕಾರ್ಯಕ್ರಮದ ವಿರುದ್ಧ ಟೀಕಿಸಿದರು.

MP Srinivas Prasad Reaction Over Congresss Siddaramothsava Program

ಪ್ರಧಾನಿ ಮೋದಿ ತೊಲಗಿದರೇ ದೇಶ ಉದ್ಧಾರ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, "ಮೋದಿಯವರು ದೇಶದ ಜನರಿಂದ ಆಯ್ಕೆಯಾಗಿ ಬಂದಿದ್ದಾರೆ. 5 ವರ್ಷಕ್ಕೆ ಅಧಿಕಾರ ನಡೆಸಲು ಬಂದಿದ್ದಾರೆ ಹೊರೆತು ಸಿದ್ದರಾಮಯ್ಯನನ್ನು ಕೇಳಿಬಂದಿಲ್ಲ. ಈಗಾಗಲೇ ಸಿದ್ದರಾಮಯ್ಯಗೆ ಬ್ಯಾಲೆಟ್ ಪೇಪರ್‌ ಮೂಲಕ ಜನರು ಪಾಠ ಕಲಿಸಿದ್ದಾರೆ. ಮೋದಿ, ನಾವೆಲ್ಲಾ ನಾಮಿನೇಟ್‌ ಆಗಿ ಬಂದವರಲ್ಲ, ಜನರಿಂದ ಆರಿಸಿ ಬಂದವರು. ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಯೋಚನೆ ಮಾಡಿ ಮಾತನಾಡಬೇಕು. ಜನರ ಕೈಯಲ್ಲಿಎಲ್ಲಾ ಇದೆ. ಚುನಾವಣೆ ಬರುತ್ತೆ ಅವರೇ ಆದೇಶ ಕೊಡುತ್ತಾರೆ. ಸುಮ್ಮನೆ ಕಿರುಚಿ ಮೈ ಪರಚಿಕೊಳ್ಳುತ್ತಿದ್ದಾರೆ" ಎಂದು ತಿರುಗೇಟು ಕೊಟ್ಟರು.

ಯುವ ಜನತೆಗೆ ಕೇಂದ್ರ ಸರ್ಕಾರದ ದ್ರೋಹ ಮಾಡಿದೆ; ಸಿದ್ದರಾಮಯ್ಯ ಗುಡುಗುಯುವ ಜನತೆಗೆ ಕೇಂದ್ರ ಸರ್ಕಾರದ ದ್ರೋಹ ಮಾಡಿದೆ; ಸಿದ್ದರಾಮಯ್ಯ ಗುಡುಗು

"ಸರ್ವೇ ಪ್ರಕಾರ ಕಾಂಗ್ರೆಸ್ ಗೆ ಅಧಿಕಾರ ಎಂಬ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಎಲ್ಲವೂ ಜನರಿಗೆ ಗೊತ್ತಿದೆ, ಚುನಾವಣೆ ಬಂದಾಗ ತೋರಿಸುತ್ತಾರೆ, ಆಮೇಲೆ ಸರ್ವೇ ರಿಪೋರ್ಟ್ ಏನಾಗುತ್ತದೆ ನೋಡೋಣ" ಎಂದರು. ಇದೇ ವೇಳೆ, ರಾಷ್ಟ್ರಪತಿ ಚುನಾವಣೆ ಸಂಬಂಧ ತಾವು ಬೆಂಗಳೂರಿನಲ್ಲಿ ಮತ ಚಲಾಯಿಸುತ್ತಿರುವುದಾಗಿ ತಿಳಿಸಿದರು.

ಮಾದಪ್ಪನ ದರ್ಶನ ಪಡೆದ ಮಾಜಿ ಸಿಎಂ ಎಸ್. ಎಂ. ಕೃಷ್ಣ; ಜಿಟಿ ಜಿಟಿ ಮಳೆ ನಡುವೆ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರಕ್ಕೆ ಹಿರಿಯ ರಾಜಕಾರಣಿ, ಮಾಜಿ ಸಿಎಂ ಎಸ್. ಎಂ. ಕೃಷ್ಣ ಭೇಟಿ ನೀಡಿದರು.

ಮಲೆ ಮಹದೇಶ್ವರ ಎಸ್. ಎಂ. ಕೃಷ್ಣ ಅವರ ಮನೆ ದೇವರಾಗಿದ್ದು, ಅಳಿಯ ಮೃತಪಟ್ಟ ಬಳಿಕ ಒಮ್ಮೆ ಮಾತ್ರ ಪತ್ನಿಯೊಟ್ಟಿಗೆ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು‌. ಇದೀಗ ಎರಡು ವರ್ಷದ ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ಎಸ್ಎಂಕೆ ಭೇಟಿ ನೀಡಿ ಮಧ್ಯಾಹ್ನದ ಮಹಾ ಮಂಗಳಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮನೆಯವರು, ಕುಟುಂಬದ ಹೆಸರಿನಲ್ಲಿ ಸಂಕಲ್ಪ ಪೂಜೆ ನೆರವೇರಸಿದರು. ಎಸ್‌ಎಂ ಕೃಷ್ಣ ಅವರೊಟ್ಟಿಗೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಲೆಮಹದೇಶ್ವರ ಬೆಟ್ಟದ ಆಗಮಿಕರಾದ ಕರವೀರಸ್ವಾಮಿ ದರ್ಶನ ಪಡೆದುಕೊಂಡರು.

English summary
Chamarajanagar MP and BJP leader Srinivasa Prasad criticized Congress Siddaramotsava program to be held in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X