ಚಾಮರಾಜನಗರ ಪಿಡಿಒ, ಅಧಿಕಾರಿಗಳಿಗೆ ಭರ್ಜರಿ ಔತಣಕೂಟ ನೀಡಿದ ಸಚಿವ ವಿ.ಸೋಮಣ್ಣ
ಚಾಮರಾಜನಗರ, ಜನವರಿ 7: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಸತಿ ಸಚಿವರಾದ ವಿ.ಸೋಮಣ್ಣ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ಭರ್ಜರಿ ಮಧ್ಯಾಹ್ನ ಔತಣಕೂಟವನ್ನು ನೀಡಿದ್ದಾರೆ.
ಚಾಮರಾಜನಗರ ಹಾಗೂ ಹನೂರಿನ ಸಿಎಂ ಕಾರ್ಯಕ್ರಮ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಚಾಮರಾಜನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪಿಡಿಒಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ಸಸ್ಯಹಾರಿ ಹಾಗೂ ಮಾಂಸಹಾರಿ ಔತಣಕೂಟ ನೀಡಿದ್ದಾರೆ.
ಮಾಂಸಹಾರಿ ವಿಭಾಗದಲ್ಲಿ ಒಂದು ಸ್ವೀಟ್, ಪಾಯಸ, ಚಿಕನ್, ಮಟನ್, ರೋಟಿ, ಗೀ ರೈಸ್ ನೀಡಲಾಗಿದ್ದು, ಸಸ್ಯಹಾರಿ ವಿಭಾಗದಲ್ಲಿ ಅನ್ನ ಸೇರಿದಂತೆ ಹೋಳಿಗೆ ಊಟ ಉಣಬಡಿಸಲಾಗಿದೆ.

ಭೋಜನಕೂಟಕ್ಕೂ ಮುನ್ನ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿದ ವಿ.ಸೋಮಣ್ಣ "ಬರೀ ಕೃಷ್ಣನ ಲೆಕ್ಕವನ್ನೂ ಮಾಡದೇ ಶೇ.60 ಆದರೂ ರಾಮನ ಲೆಕ್ಕ ಕೊಡಿ, ಬಡವರಿಗೆ ಕಣ್ಣೀರು ಹಾಕಿಸಬೇಡಿ, 500-1000ಕ್ಕಾಗಿ ಬಡವರು ಕಚೇರಿ ಅಲೆಯುವಂತೆ ಮಾಡಬೇಡಿ ಎಂದು ಪಾಠ ಮಾಡಿದರು.
ನಾನು ಗುಮಾಸ್ತನಾಗಿ ಆಯ್ಕೆಯಾಗಿದ್ದೆ ನನ್ನಮ್ಮ ನೌಕರಿಗೆ ಹೋಗು ಎಂದಿದ್ದರು. ಆದರೆ ನನ್ನ ದೊಡ್ಡಕ್ಕ ಬೆಂಗಳೂರು ಬಿಟ್ಡು ಹೋಗಬೇಡ ಡಿಗ್ರಿ ಮಾಡು ಎಂದು ಬುದ್ದಿವಾದ ಹೇಳಿದ್ದಕ್ಕೆ ಮಂತ್ರಿಯಾದೆ, ಕಸ್ತೂರಿ ಮಾತ್ರೆಯನ್ನೂ ಮಾರಿದ್ದೇನೆ, 8 ರೂಪಾಯಿ ಬಾಡಿಗೆ ಮನೆಯಲ್ಲೂ ಇದ್ದೆ. ಮಂತ್ರಿ ಆಗಬಹುದು ಆದರೆ ನಿಮ್ಮ ರೀತಿ ಅಧಿಕಾರಿಗಳಾಗಲೂ ಎಲ್ಲರ ಕೈಯಲ್ಲೂ ಸಾಧ್ಯವಿಲ್ಲ, ದೇವರು ಕೊಟ್ಟ ವಿಶೇಷ ಅವಕಾಶವನ್ನು ಬಡವರಿಗಾಗಿ ಕೆಲಸ ಮಾಡಿ ಎಂದು ಬುದ್ಧಿಮಾತು ಹೇಳಿದರು.

ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ನಿರಂಜನ ಕುಮಾರ್, ನರೇಂದ್ರ ಹಾಗೂ ಪುಟ್ಟರಂಗಶೆಟ್ಟಿ ಉಪಸ್ಥಿತರಿದ್ದರು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications