ಚಾಮರಾಜನಗರ: ಅಂಕಾಳ ಪರಮೇಶ್ವರಿ ಜಾತ್ರೆಯಲ್ಲಿ 250ಕ್ಕೂ ಕುರಿ, ಮೇಕೆಗಳ ಬಲಿ; 3,000 ಮಂದಿಗೆ ಭರ್ಜರಿ ಬಾಡೂಟ.!
ಚಾಮರಾಜನಗರ, ಮಾರ್ಚ್, 31: ಎತ್ತ ನೋಡಿದರತ್ತ ಜನಸಾಗರ, ಮಕ್ಕರಿಯಲ್ಲಿ ಮಾಂಸ ತುಂಬಿಕೊಂಡು ಬಗೆಬಗೆದು ವಿತರಿಸುತ್ತಿರುವ ಜನ, ಈ ಅದ್ದೂರಿ ಆಚರಣೆ, ಭರ್ಜರಿ ಬಾಡೂಟ ಕಂಡುಬಂದಿದ್ದು ಅಂಕಾಳ ಪರಮೇಶ್ವರಿ ಹಬ್ಬದಲ್ಲಿ. ಅಷ್ಟಕ್ಕೂ ಈ ಹಬ್ಬವನ್ನು ಯಾವ ಊರಿನಲ್ಲಿ ಆಚರಣೆ ಮಾಡಲಾಗುತ್ತದೆ ಹಾಗೂ ಇದೆ ವಿಶೇಷತೆ ಏನು ಎಂದು ಇಲ್ಲಿ ತಿಳಿಯಿರಿ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ 2 ವರ್ಷಕೊಮ್ಮೆ ನಡೆಯುವ ಅಂಕಾಳ ಪರಮೇಶ್ವರಿ ಹಬ್ಬವು ಭಾನುವಾರ (ಮಾರ್ಚ್ 31) ವಿಜೃಂಭಣೆಯಿಂದ ನಡೆದಿದ್ದು, ಸಾವಿರಾರು ಮಂದಿ ಸಹಪಂಕ್ತಿ ಭೋಜನ ಸೇವನೆ ಮಾಡಿದ್ದರು.

ಮಣ್ಣಿನಿಂದ ತಯಾರಿಸಿದ ದೇವರ ಮಂಟಪದಲ್ಲಿ ಅಂಕಾಳ ಪರಮೇಶ್ವರಿ ಮೂರ್ತಿ ತಯಾರಿಸಿ 48 ತಾಸು ಉಪವಾಸವಿದ್ದ ಅರ್ಚಕರಾದ ತಾಂಡವಶೆಟ್ಟಿ, ನಟರಾಜು, ಮಹಾದೇವಣ್ಣ ಎಂಬವರು ಪೂಜೆ ಸಲ್ಲಿಸಿದ ಬಳಿಕ 250ಕ್ಕೂ ಕುರಿ, ಮೇಕೆಗಳಚಾಮರಾಜನಗರ, ಮಾರ್ಚ್, 26: ನ್ನು ಬಲಿ ಕೊಟ್ಟು ಎಲ್ಲರೂ ಸೇರಿ ಅಡುಗೆ ತಯಾರಿಸಿ 3 ಸಾವಿರಕ್ಕೂ ಅಧಿಕ ಮಂದಿ ಮಾಂಸಹಾರ ಸೇವನೆ ಮಾಡಿದ್ದಾರೆ. ಒಟ್ಟಿನಲ್ಲಿ ಮಾರಿಹಬ್ಬ, ಜಾತ್ರೆಗಳ ಸುಗ್ಗಿ ಕಾಲ ಇದಾಗಿದ್ದು, ವಿಶೇಷ ಆಚರಣೆ, ಬಾಡೂಟಗಳ ಮೂಲಕ ಗಡಿಜಿಲ್ಲೆ ಜನರು ಗಮನ ಸೆಳೆಯುತ್ತಿದ್ದಾರೆ.
ದೇವರಿಗೆ ಕೆಂಡ ನೈವೇದ್ಯ: ಜಾನಪದ ನಾಡು ಚಾಮರಾಜನಗರವು ವೈವಿಧ್ಯಮಯ ಜಾತ್ರೆ, ಆಚರಣೆಯಿಂದ ಗಮನ ಸೆಳೆಯುವ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೆಯೇ ನಿಗಿನಿಗಿ ಕೆಂಡ ದೇವರಿಗೆ ನೈವೇದ್ಯವಾಗಿ ಅರ್ಪಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಣಹಳ್ಳಿ ಗ್ರಾಮದಲ್ಲಿ ಸತ್ಯವತಿ ದೇವರ ದೇಗುಲವಿದ್ದು, ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದೆ. ಸಾಮಾನ್ಯವಾಗಿ ಕೆಂಡವನ್ನು ಹಾಯುವುದು ಎಲ್ಲೆಡೆ ಸಾಮಾನ್ಯ. ಆದರೆ ಇಲ್ಲಿ, ಕೆಂಡವನ್ನು ಬರಿಗೈಯಲ್ಲಿ ಕೊಳಗಕ್ಕೆ ತುಂಬಿ ಬಳಿಕ ಬಿಳಿ ಬಟ್ಟೆಗೆ ಕೆಂಡ ಸುರಿದು ದೇವರಿಗೆ ನೈವೇದ್ಯ ಇಡುವುದು ಇಲ್ಲಿನ ವಿಶೇಷವಾಗಿದೆ.
ರೋಮಾಂಚಕಕಾರಿಯಾದ ಈ ದೃಶ್ಯವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡು ಅತೀಂದ್ರಿಯ ಶಕ್ತಿಗೆ ತಲೆ ಬಾಗಿದ್ದಾರೆ. ಬರಿಗೈಯಲ್ಲಿ ಕೆಂಡ ಸುರಿದರೂ ಅರ್ಚಕನ ಕೈ ಸುಡುವುದಿಲ್ಲವಂತೆ, ಬಟ್ಟೆಯ ಜೋಳಿಗೆಗೆ ಏನೂ ಆಗುವುದಿಲ್ಲ. ಈ ಜಾತ್ರೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಎಲ್ಲರನ್ನೂ ಅಚ್ಚರಿಗೆ ನೂಕುವ ಈ ಆಚರಣೆ ಸತ್ಯವತಿ ದೇವರ ಪವಾಡ ಎಂಬುದು ಜನರ ನಂಬಿಕೆಯಾಗಿದೆ.
ಭಕ್ತಿ ಶ್ರದ್ಧೆಯಿಂದ ನೆರವೇರಿದ ಕೊಂಡೊತ್ಸವ: ಈ ದೇವಾಲಯಕ್ಕೆ ಮಹಿಳೆಯರು ತೆರಳಿದರೇ ಕಲ್ಲಾಗುತ್ತಾರೆ ಎಂಬ ನಂಬಿಕೆ ಇರುವುದರಿಂದ ಹಾಗೂ ಮಹಿಳೆಯರಿಂದ ಅಂತರ ಕಾಯ್ದುಕೊಂಡು ದೇವರು ತಪಸ್ಸಿಗೆ ಕುಳಿತಿರುವ ಐತಿಹ್ಯ ಇರುವ ಈ ದೇವಾಲಯದಲ್ಲಿ ಸಡಗರದಿಂದ ಜಾತ್ರೆ ನಡೆಯುತ್ತಿದೆ.
ಚಾಮರಾಜನಗರ ಗಡಿಭಾಗದಲ್ಲಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಸೋಮವಾರದಿಂದ ಜಾತ್ರೆ ಆರಂಭಗೊಂಡಿದ್ದು, ಮಂಗಳವಾರ ಬೆಳಗ್ಗೆ ಭಕ್ತಿ ಶ್ರದ್ಧೆಯಿಂದ ಕೊಂಡೊತ್ಸವ ನೆರವೇರಿದೆ.
ಒಂದು ರೀತಿ ಪುರುಷ ಭಕ್ತರ ಜಾತ್ರೆ ಇದಾಗಿದ್ದು, ಜಾತ್ರೆಗೆ, ದೇವರ ದರ್ಶನಕ್ಕೆ ಮಹಿಳೆಯರ ಪ್ರವೇಶ ಇರುವುದಿಲ್ಲ. ಎರಡು ರಾಜ್ಯಗಳಿಂದ ಕೊಂಗಳ್ಳಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನಸ್ವಾಮಿಯ ಮಹಾನ್ ತಪಸ್ಸು ಮಾಡಲು ಈ ಪ್ರದೇಶ ಆರಿಸಿಕೊಂಡಿದ್ದರಿಂದ ದೇಗುಲಕ್ಕೆ ಮಹಿಳೆಯರ ಪ್ರವೇಶ ಇಲ್ಲ. ವರ್ಷಕ್ಕೆಮ್ಮೆ ಮಾತ್ರ ಊರಿನಲ್ಲಿ ಉತ್ಸವ ನಡೆಯಲಿದ್ದು, ಗ್ರಾಮಕ್ಕೆ ದೇವರ ಉತ್ಸವ ಮೂರ್ತಿ ತೆರಳಿದ ವೇಳೆ ಮಾತ್ರ ಮಹಿಳೆಯರು ದೇವರಿಗೆ ಪೂಜೆ ಸಲ್ಲಿಸುವ ವಿಶಿಷ್ಠ ಸಂಪ್ರದಾಯ ಇಲ್ಲಿನದ್ದಾಗಿದೆ.












Click it and Unblock the Notifications