ಇಂದಿನಿಂದ ಆನ್ ಲೈನ್ ನಲ್ಲಿ ಮಾದಪ್ಪನ ದರ್ಶನ

ಚಾಮರಾಜನಗರ, ಮೇ 28: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹನೂರು ತಾಲೂಕಿನ ಮಲೆ ಮಹದೇಶ್ವರ ದೇಗುಲದಲ್ಲಿ ಇಂದಿನಿಂದ ಆನ್ ಲೈನ್ ದರ್ಶನ ಸೇವೆ ಆರಂಭವಾಗಿದೆ.

Recommended Video

      ಮನೆಯಲ್ಲೇ ಕ್ವಾರಂಟೈನ್ ಗೆ ಅವಕಾಶ ಕೊಡಿ ಎಂದು ಬೇಡಿಕೊಳ್ತಿದ್ದಾರೆ ಗರ್ಭಿಣಿಯರು | Oneindia Kannada

      ಪ್ರಾಧಿಕಾರದ ವೆಬ್ ಸೈಟ್ www.mmhillstemple.comನಲ್ಲಿ ಬೆಳಗ್ಗೆ 4 ರಿಂದ 5.30ರವರೆಗೆ ಹಾಗೂ ಸಂಜೆ 6.45 ರಿಂದ 8 ರವರೆಗೆ ನಡೆಯುವ ಪೂಜಾ ಕಾರ್ಯವು ಆನ್ ಲೈನ್ ನಲ್ಲಿ ನೋಡಲು ಲಭ್ಯವಿರಲಿದೆ. ಆನ್ ಲೈನ್ ಮೂಲಕವೇ ಮಲೆ ಮಹದೇಶ್ವರನ ದರ್ಶನ ಜನತೆಗೆ ಸಿಗಲಿದ್ದು, ಪೋಸ್ಟ್ ಮೂಲಕ‌ ಪ್ರಸಾದವನ್ನೂ ಸ್ವೀಕರಿಸಬಹುದಾಗಿದೆ.

      ಆನ್ ಲೈನ್ ಮೂಲಕವೇ ಭಕ್ತರು ಸೇವಾ ಚೀಟಿ ಪಡೆದು ಅವರ ಹೆಸರಿನಲ್ಲಿ ಪೂಜೆ ಮಾಡಿಸಬಹುದು. ವಿಶೇಷವಾಗಿ ಕರ್ನಾಟಕ ರಾಜ್ಯದ ಭಕ್ತರು ಸೇವೆ ಮಾಡಿಸಿದರೆ, ಅಂಚೆ ಮೂಲಕ ಕಲ್ಲುಸಕ್ಕರೆ, ದ್ರಾಕ್ಷಿ, ವಿಭೂತಿ ಹಾಗೂ ಬಿಲ್ವಪತ್ರೆಯನ್ನು ರವಾನಿಸಲಾಗುತ್ತದೆ. ಆದರೆ ಬೇರೆ ರಾಜ್ಯದ ಭಕ್ತರಿಗೆ ಅಂಚೆ ಪ್ರಸಾದ ಲಭ್ಯವಿಲ್ಲ. ಕೋವಿಡ್ 19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಕೆಲವು ಪೂಜಾ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

      Online Darshan Started From Today In Male Mahadeshwara Temple In Chamarajanagar

      ಹಂಪಿ ವಿರೂಪಾಕ್ಷನ ಪೂಜೆಗೆ ಆನ್ ಲೈನ್ ಬುಕಿಂಗ್ ಆರಂಭ: ಬಳ್ಳಾರಿಯ ಹಂಪಿ ವಿರೂಪಾಕ್ಷನ ಪೂಜೆಗೂ ಇಂದಿನಿಂದ ಆನ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಸಮಯದಲ್ಲೂ ಆನ್ ಲೈನ್ ನಲ್ಲಿ ಪೂಜೆಗೆ ಕಾಯ್ದಿರಿಸಬಹುದಾಗಿದೆ. ಇಂದು ಭಕ್ತರು ಕುಂಕುಮಾರ್ಚನೆಗೆ ಆನ್ ಲೈನ್ ನಲ್ಲಿ ಬುಕಿಂಗ್ ಮಾಡಿದ್ದರು. www.purepreyar.com ಮೂಲಕ ಬುಕಿಂಗ್ ಮಾಡಿ ದರ್ಶನ ಪಡೆದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+