ಪಾಗಲ್ ಪ್ರೇಮಿಗಳ ಹುಚ್ಚಾಟದ ವಿಡಿಯೋ ವೈರಲ್ - ಬೈಕ್ ಸವಾರ ವಶಕ್ಕೆ

ಚಾಮರಾಜನಗರ, ಏಪ್ರಿಲ್ 23: ಬೈಕ್ ಇರೋದು ಜರ್ನಿ ಮಾಡೋಕೆ. ಆ ಜರ್ನಿ ಎಲ್ಲಿಗೆ ಯಾಕೆ ಅನ್ನೋದು ಸವಾರನಿಗೆ ಗೊತ್ತೇ ಇರುತ್ತೆ. ಸಾಧಾರಣವಾಗಿ ಬೈಕ್ ನಲ್ಲಿ ಜರ್ನಿ ಮಾಡಿದರೆ ಇಲ್ಲಿ ಸುದ್ದಿ ಬರೆಯೋ ಅವಶ್ಯಕತೆ ಇರೋದಿಲ್ಲ. ಚಾಮರಾಜ ನಗರದಲ್ಲಿ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿ ಜೊತೆ ವಿಚಿತ್ರ ರೀತಿಯಲ್ಲಿ ಹೋಗುವ ವಿಡಿಯೋ ವೈರಲ್ ಆಗಿತ್ತು. ಇದೀಗ ವೈರಲ್ ವಿಡಿಯೋದಲ್ಲಿದ್ದ ಯುವಕನನ್ನು ಚಾಮರಾಜನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊಬೈಲ್ ನಲ್ಲಿ ಸೆರೆಯಾಯ್ತು ಪ್ರೇಮಿಗಳ ಹುಚ್ಚಾಟದ ವಿಡಿಯೋ..!

ಚಾಮರಾಜನಗರ - ಗುಂಡ್ಲುಪೇಟೆ ಮುಖ್ಯರಸ್ತೆಯ ಯಡುಪುರ ಗ್ರಾಮದ ಸಮೀಪದಲ್ಲಿ ಬೈಕ್ ಸವಾರ ತನ್ನ ಪ್ರೇಯಸಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ‌ ಕೂರಿಸಿ ತನ್ನನ್ನು ಬಾಚಿ ತಬ್ಬಿಕೊಂಡು ಮತ್ತಷ್ಟು ಹತ್ತಿರಕ್ಕೆ ಸೆಳೆದುಕೊಂಡಿದ್ದಾನೆ. ಈ ವೇಳೆ ಪ್ರೇಮಿಗಳಿಬ್ಬರು ಹೆಲ್ಮೆಟ್ ಕೂಡ ಧರಿಸದೇ ಆಕ್ಷೇಪಾರ್ಹ ರೀತಿಯಲ್ಲಿ ಅಜಾಗರೂಕವಾಗಿ ಚಾಲನೆ ಮಾಡಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ವಿಡಿಯೋ ಚಾಮರಾಜನಗರದ ಸುತ್ತಮುತ್ತ ಸಾಕಷ್ಟು ವೈರಲ್ ಆಗಿದೆ.

ಸ್ವಯಂ ದೂರು ದಾಖಲಿಸಿದ ಚಾಮರಾಜನಗರ ಸಂಚಾರಿ ಪೊಲೀಸರು:

ಚಾಮರಾಜನಗದ ಪಾಗಲ್ ಪ್ರೇಮಿಗಳ ಬೈಕ್ ಸವಾರಿ ಸಾಕಷ್ಟು ವೈರಲ್ ಆಗಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿತ್ತು. ಈ ವೈರಲ್ ವಿಡಿಯೋ ಚಾಮರಾಜನಗತ ಪೊಲೀಸರಿಗೂ ತಲುಪಿತ್ತು. ವಿಡಿಯೋವನ್ನು ಗಮನಿಸಿದ ಚಾಮರಾಜನಗರ ಸಂಚಾರಿ ಪೊಲೀಸರು ಸ್ವಯಂ ಪ್ರೇರಿದ (ಸುಮೋಟೋ) ಕೇಸ್ ದಾಖಲಿಸಿಕೊಂಡು ತನಿಖೆಯನ್ನು ನಡೆಸಿದರು.

Chamarajanagar: Lovers Romance on Running Bike: rider arrest

ವಿಡಿಯೋ ಆಧರಿಸಿ ಮೊದಲು ಬೈಕ್ ನಂಬರ್ ಪತ್ತೆ ಮಾಡಿದ ಪೊಲೀಸರು.

ಪಾಗಲ್ ಪ್ರೇಮಿಗಳ ವಿಡಿಯೋ ವೈರಲ್ ಆಗ್ತಿದ್ದಂತೆ ಚಾಮರಾಜನಗರ ಪೊಲೀಸ್ ಅಧೀಕ್ಷಕ ಟಿಪಿ ಶಿವಕುಮಾರ್ ರವರು ಬೈಕ್ ಸಹಿತ ಸವಾರನ ಪತ್ತೆಗೆ ಚಾಮರಾಜನಗರ ಸಂಚಾರಿ ಪೊಲೀಸರಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದರು. ಇದರಿಂದಾಗಿ ಸ್ವಂ ಪ್ರೇರಿತ ದೂರು ದಾಖಲಿಸಿಕೊಂಡ ಚಾಮರಾಜನಗರ ಸಂಚಾರಿ ಪೊಲೀಸರು ಮೊದಲು ಬೈಕ್ ನಂಬರ್ ಅನ್ನು ಪತ್ತೆ ಮಾಡಿದ್ರು. ವಿಡಿಯೋದಲ್ಲಿದ್ದ ಬೈಕ್ KA 10 EA 5121 ಎಂಬುದು ತಿಳಿದು ಬರುತ್ತೆ. ಆ ಬಳಿಕ ಬೈಕ್ ನಂಬರ್ ಆಧರಿಸಿ ಆರ್ ಸಿ ನಂಬರ್ ಮೂಲಕ ಮಾಲೀಕನ ಪತ್ತೆಗೆ ಚಾಮರಾಜನಗರ ಸಂಚಾರಿ ಪೊಲೀಸರು ಮುಂದಾಗುತ್ತಾರೆ.

ವೈರಲ್ ವಿಡಿಯೋದಲ್ಲಿದ್ದ ಬೈಕ್ ಸವಾರ ಯಾರು..?

ಪ್ರೇಮಿಗಳ ಹುಚ್ಚಾಟದ ವಿಡಿಯೋ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದ ಬಳಿಕ ವೈರಲ್ ಆಗಿರುತ್ತೆ. ಈ ವಿಡಿಯೋದಲ್ಲಿರುವವರು ಯಾರು ಎಂಬ ಚರ್ಚೆಯು ಜೋರಾಗಿರುತ್ತದೆ. ಚಾಮರಾಜನಗರ ಸಂಚಾರಿ ಪೊಲೀಸರು ಶೀಘ್ರವೇ ಪಾಗಲ್ ಪ್ರೇಮಿಯನ್ನು ಪತ್ತೆ ಹಚ್ಚಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿನ ಶಿವಪುರ ಗ್ರಾಮದ ಸ್ವಾಮಿ ಎಸ್.ಸಿ ಎಂಬುವವನಾಗಿದ್ದು. ಪೊಲೀಸರು ಸ್ವಾಮಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

Chamarajanagar: Lovers Romance on Running Bike: rider arrest

ಪಾಗಲ್ ಪ್ರೇಮಿಗಳು ಸ್ವಲ್ಪ ಯಾಮಾರಿದ್ರೂ ಪ್ರಾಣಾಪಾಯ:

ವೈರಲ್ ವಿಡಿಯೋದಲ್ಲಿ ಪಾಗಲ್ ಪ್ರೇಮಿಗಳು ಆಕ್ಷೇಪಾರ್ಹ ರೀತಿಯಲ್ಲಿ ಕುಳಿತಿದ್ದಾರೆ. ಇನ್ನು ಈ ವೇಳೆ ಬೈಕ್ ಕೂಡ ಸಾಕಷ್ಟು ವೇಗವಾಗಿ ಸಾಗುತ್ತಿತ್ತು. ಬೈಕ್ ವೇಗವಾಗಿ ಸಾಗುವ ವೇಳೆ ಬೈಕ್ ಗೆ ಎದುರಾಗಿ ಲಾರಿ ಮತ್ತು ಕೆಎಸ್ ಆರ್ ಟಿ ಸಿ ಬಸ್ ಸಹ ಹಾದುಹೋಗುತ್ತದೆ. ಬೈಕ್ ಸವಾರ ತನ್ನ ಪ್ರೇಯಸಿಯನ್ನು ಕೂರಿಸಿಕೊಂಡು‌ ಅಡ್ಡಾದಿಡ್ಡಿ ಹೋಗುವ ವೇಳೆ ಕೊಂಚ ಯಾಮಾರಿದ್ರು ಅಪಘಾತವಾಗಿ ಜೀವವೇ ಹೋಗುವ ಸಂಭವವಿತ್ತು.

ಚಾಮರಾಜನಗರ ಸಂಚಾರಿ ಪೊಲೀಸ್ರ ಶೀಘ್ರ ಕಾರ್ಯಾಚರಣೆಗೆ ಶ್ಲಾಘನೆ:

ಚಾಮರಾಜನಗರ SP ಟಿಪಿ ಶಿವಕುಮಾರ್ ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಸುಂದರ್ ರಾಜ್ ಕೆ.ಎಸ್ ರವರು ಚಾಮರಾಜನಗರ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ತಿಮ್ಮರಾಜು, ಪಿಎಸ್ ಐ ನಂದೀಶ್ ಕುಮಾರ್, ಪೇದೆಗಳಾದ ಚಿಕ್ಕಣ್ಣ , ಜಯರಾಮ್ , ಮಹದೇವ ಸ್ವಾಮಿ, ಜಗದೀಶ್, ನವೀನ್ ಕುಮಾರ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+