ಕೊಳ್ಳೇಗಾಲ: ಶಾಲಾ ಮಕ್ಕಳಿಗೆ ದಯವಿಟ್ಟು ಹೆಬ್ಬುಲಿ ಕಟ್ಟಿಂಗ್ ಮಾಡ್ಬೇಡಿ.. ನನ್ ಮಾತು ಕೇಳಿ: ಶಿಕ್ಷಕರು ಬರೆದ ಪತ್ರ ವೈರಲ್
ಚಾಮರಾಜನಗರ, ಸೆಪ್ಟೆಂಬರ್, 06: ಶಾಲಾ ಮಕ್ಕಳಿಗೆ ಹೆಬ್ಬುಲಿ ಕಟ್ಟಿಂಗ್ ಮಾಡ್ಬೇಡಿ ಎಂದು ಸವಿತಾ ಸಮಾಜದ ಅಧ್ಯಕ್ಷರಿಗೆ ಶಾಲಾ ಶಿಕ್ಷಕರೊಬ್ಬರು ಪತ್ರ ಬರೆದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಮಕ್ಕಳು ನಿಮ್ಮಲ್ಲಿಗೆ ಬಂದು ಹೆಬ್ಬುಲಿ ಕಟಿಂಗ್ ಮಾಡಿ ಎಂದರೆ ದಯವಿಟ್ಟು ಅವರು ಹೇಳಿದ ಹಾಗೆ ಕೇಳಬೇಡಿ. ನೀಟಾಗಿ ಕಟ್ಟಿಂಗ್ ಮಾಡಿ ಎಂದು ಕೊಳ್ಳೇಗಾಲದ ಬಾಪುನಗರ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಶಾಂತರಾಜು ಎಂಬುವರರು ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಇನ್ನು ಈ ಬಗ್ಗೆ ಮಕ್ಕಳಿಗೆ, ಪಾಲಕರಿಗೆ ಹೇಳಿದರೂ ಕೇಳುತ್ತಿಲ್ಲ. ಇಂತಹ ಕಟಿಂಗ್ ಮಾಡಿಸಿಕೊಂಡು ಬಂದರೆ ನಮಗೆ ಹಿಂಸೆ ಆಗುತ್ತದೆ ಎಂದು ಶಿಕ್ಷಕ ಶಾಂತರಾಜು ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಾರಿಗೆ ಬಸ್‌ಗಳಿಲ್ಲದೆ ಶಾಲಾ ಮಕ್ಕಳ ಪರದಾಟ
ಎಚ್.ಡಿ.ಕೋಟೆ ಹಿಂದುಳಿದ ತಾಲೂಕು ಆಗಿದ್ದು, ಇಲ್ಲಿನ ಗ್ರಾಮೀಣ ಪ್ರದೇಶಗಳು ಇನ್ನೂ ಕೂಡ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಆದಿವಾಸಿಗಳು ಕುಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸಾರಿಗೆ ಸೌಲಭ್ಯಗಳು ಸಮರ್ಪಕವಾಗಿ ಇಲ್ಲದ ಕಾರಣ ಪಟ್ಟಣದ ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ಕೆಲಸದ ನಿಮಿತ್ತ ಬರುವ ಕೂಲಿ ಕಾರ್ಮಿಕರು, ಇನ್ನಿತರರು ನಡಿಗೆ ಮೂಲಕ ಅಥವಾ ಯಾವುದಾದರೂ ಖಾಸಗಿ ವಾಹನಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. ಆದರೆ ಈ ಖಾಸಗಿ ವಾಹನಗಳಲ್ಲಿ ಕುರಿಗಳಂತೆ ತುಂಬುತ್ತಿದ್ದಾರೆ.
ಸುತ್ತಮುತ್ತಲ ಗ್ರಾಮಗಳ ಜನರು ಕೆಲಸಕ್ಕೆ, ವಿದ್ಯಾರ್ಥಿಗಳು ಶಾಲೆಗೆ ತಾಲೂಕು ಕೇಂದ್ರವಾದ ಎಚ್.ಡಿ.ಕೋಟೆ ಪಟ್ಟಣಕ್ಕೆ ಬರಲೇಬೇಕಾಗಿದೆ. ಅದರಲ್ಲೂ ಫೋಷಕರು ತಮ್ಮ ಮಕ್ಕಳು ಒಂದೊಳ್ಳೆಯ ಶಾಲೆಯಲ್ಲಿ ಕಲಿಯಬೇಕೆಂದು ಬಯಸಿ ಪಟ್ಟಣದ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಮತ್ತು ಶಾಲೆಗೆ ತಮ್ಮ ಊರಿನಿಂದ ಹೋಗಿ ಬರಲು ಬಸ್ ವ್ಯವಸ್ಥೆ ಇಲ್ಲದ ಕಾರಣದಿಂದ ಖಾಸಗಿ ವಾಹನಗಳಾದ ಪ್ಯಾಸೇಂಜರ್ ಮತ್ತು ಗೂಡ್ಸ್ ಆಟೋಗಳಲ್ಲಿ ಕಳಿಸುವುದು ಅನಿವಾರ್ಯವಾಗಿದೆ.
ಇದೆಲ್ಲದರ ಪರಿಣಾಮದಿಂದ ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಸರ್ಕಾರಿ ಮತ್ತು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬರುವ ಮಕ್ಕಳನ್ನು ಪ್ಯಾಸೇಂಜರ್ ಮತ್ತು ಗೂಡ್ಸ್ ಆಟೋಗಳಲ್ಲಿ ಕುರಿಗಳಂತೆ ತುಂಬಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಮಕ್ಕಳನ್ನು ಶಾಲೆಗಳಿಗೆ ಕರೆತರುವ ಪ್ಯಾಸೇಂಜರ್ ಆಟೋಗಳ ಚಾಲಕರು ಇಲ್ಲಿ ಅಕ್ಷರಶಃ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಮತ್ತು ಮಕ್ಕಳನ್ನು ತುಂಬಿಕೊಂಡು ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಸಂಚಾರ ನಡೆಸುತ್ತಿರುವುದು ಅಪಾಯಕಾರಿಯಾಗಿದೆ.
ಒಂದೆಡೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದರೆ, ಮತ್ತೊಂದು ಕಡೆ ಕೇರಳಿಗರು ಶುಂಠಿ ಜಮೀನುಗಳಿಗೆ ಬಡ ಕೂಲಿ ಕಾರ್ಮಿಕರನ್ನು ಥೇಟ್ ಕುರಿಗಳಂತೆ ತುಂಬಿಕೊಂಡು ಪ್ಯಾಸೇಂಜರ್ ಹಾಗೂ ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುವುದು ನಿರಂತರವಾಗಿ ನಡೆಯುತ್ತಿದೆ. ಆದರೆ ಇಂತಹ ವಾಹನಗಳ ಚಾಲಕರನ್ನು ತಡೆದು ದಂಡ ವಿಧಿಸುವುದಿರಲಿ, ಕನಿಷ್ಟ ಸವಾರರಿಗೆ ಸಂಚಾರಿ ನಿಯಮದ ಪಾಠವನ್ನೂ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.












Click it and Unblock the Notifications