ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸರ್ಗಿಕ ಕೃಷಿಗೆ ಒತ್ತು ನೀಡಿದ ಕೈಲಾಸ್ ಮೂರ್ತಿ!

By ಬಿ.ಎಂ.ಲವಕುಮಾರ್
|
Google Oneindia Kannada News

ಚಾಮರಾಜನಗರ, ಜೂನ್ 10: ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನಿವಾಸಿ ಪ್ರಗತಿಪರ ರೈತ ಮತ್ತು ನೈಸರ್ಗಿಕ ಕೃಷಿ ತಜ್ಞರಾಗಿರುವ ಕೈಲಾಸ್ ಮೂರ್ತಿ ಅವರು ರಾಸಾಯನಿಕ ಗೊಬ್ಬರವನ್ನು ದೂರವಿಟ್ಟು ನೈಸರ್ಗಿಕ ಕೃಷಿಯ ಮೂಲಕ ಕೃಷಿ ಮಾಡಿ ಆರೋಗ್ಯಕರ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕೃಷಿ ಮಾಡುವುದೆಂದರೆ ಬರೀ ಇಳುವರಿ ಪಡೆಯುವುದಲ್ಲ, ರಾಸಾಯನಿಕ ಮುಕ್ತ ಮತ್ತು ಆರೋಗ್ಯಕರ ಬೆಳೆಗಳನ್ನು ಉತ್ಪನ್ನ ಮಾಡುವುದು. ಆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದಾಗಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ಗುಂಡ್ಲುಪೇಟೆ: ಬರಿದಾದ ಕೆರೆಗಳಲ್ಲೀಗ ಜೀವಜಲಗುಂಡ್ಲುಪೇಟೆ: ಬರಿದಾದ ಕೆರೆಗಳಲ್ಲೀಗ ಜೀವಜಲ

ಇಂದು ಹೆಚ್ಚಿನ ಇಳುವರಿ ಪಡೆಯುವ ಮೂಲಕ ಹೆಚ್ಚಿನ ಲಾಭದ ಕಡೆಗೆ ಕೃಷಿಕರು ಮುಖ ಮಾಡುತ್ತಿರುವುದರಿಂದಾಗಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸದೆ ಬೆಳೆ ಬೆಳೆಯಲಾಗದು ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.

ಬತ್ತಿದ ಬಂಡೀಪುರದ ಕೆರೆಕಟ್ಟೆಗಳಿಗೆ ಜೀವ ನೀಡಿದ ವರುಣ!ಬತ್ತಿದ ಬಂಡೀಪುರದ ಕೆರೆಕಟ್ಟೆಗಳಿಗೆ ಜೀವ ನೀಡಿದ ವರುಣ!

ಕೃಷಿಯಲ್ಲಿ ಹಲವು ರೀತಿಯ ಸಂಶೋಧನೆಗಳನ್ನು ಮಾಡುತ್ತಾ ವಿನಾಶಕಾರಿ ಅಂಶಗಳನ್ನು ಸೇರಿಸುತ್ತಿರುವುದರಿಂದ ಇವತ್ತು ಸೇವಿಸುವ ಹಣ್ಣು, ತರಕಾರಿ, ಆಹಾರ ಪದಾರ್ಥಗಳಲ್ಲಿ ರುಚಿಯೂ ಮತ್ತು ದೇಹಕ್ಕೆ ಬೇಕಾದ ಪೋಷಕಾಂಶ ಕಡಿಮೆಯಾಗಿದೆ. ಜತೆಗೆ ವಿಷಕಾರಿ ಅಂಶಗಳು ನಮ್ಮ ದೇಹವನ್ನು ಸದ್ದಿಲ್ಲದೆ ಸೇರುತ್ತಿದೆ. ಪರಿಣಾಮ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತಿಲ್ಲ.

ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!

ಇದು ಹೀಗೆಯೇ ಮುಂದುವರೆದರೆ ಕೃಷಿ ಕ್ಷೇತ್ರದಲ್ಲಿ ಹಲವು ಆಘಾತಕಾರಿ ಬೆಳವಣಿಗೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿಯೇ ರಾಸಾಯನಿಕಯುಕ್ತ ಕೃಷಿ ಕ್ಷೇತ್ರವನ್ನು ರಾಸಾಯನಿಕ ಮುಕ್ತ ಕ್ಷೇತ್ರವನ್ನಾಗಿಸುವ ಕಾರ್ಯಕ್ಕೆ ಕೈಲಾಸ್ ಮೂರ್ತಿ ಮುಂದಾಗಿದ್ದಾರೆ.

ಶಾಲಾ ಮಕ್ಕಳ ಮೂಲಕ ಅರಿವು ಮೂಡಿಸುವ ಕಾರ್ಯ

ಶಾಲಾ ಮಕ್ಕಳ ಮೂಲಕ ಅರಿವು ಮೂಡಿಸುವ ಕಾರ್ಯ

ರಾಸಾಯನಿಕ ಪದಾರ್ಥಗಳನ್ನು ಕೃಷಿಯಲ್ಲಿ ಸೇರಿಸಿದಾಗ ಅದರಿಂದ ಏನೆಲ್ಲ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಅವರು ಶಾಲಾ ಮಕ್ಕಳ ಮೂಲಕ ಮಾಡುತ್ತಿದ್ದಾರೆ. ಒಂದು ದಿನದ ನೈಸರ್ಗಿಕ ಕೃಷಿ ಜಾಗೃತಿ ಕಾರ್ಯಾಗಾರ ನಡೆಸುತ್ತಾ ಬಂದಿರುವ ಅವರು ಸಮೀಪದ ಶಾಲಾ ಮಕ್ಕಳು ಮತ್ತು ಶಿಕ್ಷಕರನ್ನು ತಮ್ಮ ತೋಟಕ್ಕೆ ಆಹ್ವಾನಿಸಿ ಅವರನ್ನು ಒಂದು ಕಡೆ ಕೂರಿಸಿ ತಮ್ಮದೇ ತೋಟದಲ್ಲಿ ನೈಸರ್ಗಿಕ ಕೃಷಿ ಮೂಲಕ ಬೆಳೆದ ಮಾವಿನ ಹಣ್ಣುಗಳನ್ನು ಮಕ್ಕಳಿಗೆ ನೀಡಿ, ಮಕ್ಕಳು ಹಣ್ಣು ತಿನ್ನುತ್ತಾ ಕುಳಿತರೆ ಕೈಲಾಸ್ ಮೂರ್ತಿ ಅವರು ನೈಸರ್ಗಿಕ ಕೃಷಿಯ ಅನುಕೂಲದ ಪಾಠ ಶುರು ಮಾಡುತ್ತಾರೆ.

ನೈಸರ್ಗಿಕ ಕೃಷಿ ಉಪಯುಕ್ತತೆ

ನೈಸರ್ಗಿಕ ಕೃಷಿ ಉಪಯುಕ್ತತೆ

ವಿನಾಶಕಾರಿಗಳ ಅಂಶಗಳನ್ನು ಕೃಷಿ ಚುವಟಿಕೆಗಳಿಗೆ ಸೇರಿಸುವ ಮೂಲಕ ಜನಸಾಮಾನ್ಯರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರಿಸುತ್ತಾರೆ. ಜತೆಗೆ ನೈಸರ್ಗಿಕ ಕೃಷಿಯಿಂದಾಗುವ ಉಪಯುಕ್ತತೆಯನ್ನು ತಿಳಿಸುತ್ತಾರೆ.

ಕ್ರಿಮಿನಾಶಕದ ದುಷ್ಪರಿಣಾಮದ ಕುರಿತು ಮಾಹಿತಿ

ಕ್ರಿಮಿನಾಶಕದ ದುಷ್ಪರಿಣಾಮದ ಕುರಿತು ಮಾಹಿತಿ

ಕೃಷಿಯಲ್ಲಿ ತ್ವರಿತವಾಗಿ ಹೆಚ್ಚು ಇಳುವರಿ ಪಡೆಯುವ ದೃಷ್ಟಿಯಿಂದ ಬೆಳೆಗಳಿಗೆ ಹಲವು ಬಗೆಯ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಇದರಿಂದ ಇಳುವರಿ ಬರುತ್ತಿದೆಯಾದರೂ ಅವುಗಳು ಆರೋಗ್ಯವನ್ನು ಹಾಳು ಮಾಡುತ್ತಿವೆ.

ರಾಸಾಯನಿಕ ಗೊಬ್ಬರ ಮನುಕುಲಕ್ಕೆ ಮಾರಕ

ರಾಸಾಯನಿಕ ಗೊಬ್ಬರ ಮನುಕುಲಕ್ಕೆ ಮಾರಕ

ಭೂಮಿಗೆ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿರುವುದರಿಂದ ಇದು ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಆದ್ದರಿಂದ ನೈಸರ್ಗಿಕ ಅಥವಾ ಸಾವಯವ ಕೃಷಿಯ ಮೂಲಕ ಬೆಳೆ ಬೆಳೆಯುವ ಕುರಿತು ರೈತರು ಆಲೋಚಿಸಬೇಕಾಗಿದೆ ಎಂಬ ಸಲಹೆಗಳನ್ನು ನೀಡುತ್ತಾರೆ. ಜತೆಗೆ ತಮ್ಮ ಮನೆಯ ಹಿತ್ತಲಲ್ಲೇ ಕೆಲವು ತರಕಾರಿಗಳನ್ನು ಬೆಳೆಯಲು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾರೆ.

ಹೆಚ್ಚು ಮಾವಿನ ಹಣ್ಣು ತಿನ್ನಿ, ಬಹುಮಾನ ಗೆಲ್ಲಿ

ಹೆಚ್ಚು ಮಾವಿನ ಹಣ್ಣು ತಿನ್ನಿ, ಬಹುಮಾನ ಗೆಲ್ಲಿ

ಇನ್ನು ಮಾವಿನ ಹಣ್ಣು ತಿನ್ನುವ ಸ್ಪರ್ಧೆ ಮಾಡಿ ಅತಿ ಹೆಚ್ಚು ಮಾವಿನ ಹಣ್ಣು ತಿಂದ ಮಕ್ಕಳಿಗೆ ಬಹುಮಾನವನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಾರೆ. ಪ್ರತಿವರ್ಷವೂ
ವಿದ್ಯಾರ್ಥಿಗಳಿಗಾಗಿ ನೈಸರ್ಗಿಕ ಕೃಷಿ ಜಾಗೃತಿ ಕಾರ್ಯಕ್ರಮ ನಡೆಸುವ ಕೈಲಾಸ್ ಮೂರ್ತಿ ಅವರು ಆ ಮೂಲಕ ರಾಸಾಯನಿಕಮುಕ್ತ ಕೃಷಿಯ ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರ ಈ ಕಾರ್ಯ ಹೀಗೆಯೇ ಮುಂದುವರೆಯಲಿ.

English summary
Kailas murthy, a natural agriculture expert from Doddinduwadi, Kollegal taluk, Chamarajanagar district, has proved the real meaning of agriculture. He is trying to create awareness about natural farming among the people of Chamarajanargar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X