ಕೈಕೊಟ್ಟ ಪ್ರಿಯತಮನ ಮನೆ ಮುಂದೆ ಧರಣಿ ಕೂತಳು ಯುವತಿ
ಚಾಮರಾಜನಗರ, ಜುಲೈ 13: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಯುವಕನ ಮನೆ ಮುಂದೆ ವಂಚನೆಗೆ ಒಳಗಾದ ಯುವತಿ ನ್ಯಾಯಕ್ಕಾಗಿ ಏಕಾಂಗಿಯಾಗಿ ಧರಣಿ ನಡೆಸುತ್ತಿದ್ದಾಳೆ. ಇತ್ತ ವಿಷಯ ತಿಳಿದ ಯುವಕನ ಮನೆಯವರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಆಹಾರ ಸೇವಿಸದೆ ಪ್ರಿಯತಮನ ಮನೆ ಮುಂದೆ ಯುವತಿ ಧರಣಿ ನಡೆಸುತ್ತಿದ್ದಾಳೆ. ಯುವತಿಯ ಧರಣಿಗೆ ಬೆದರಿ ಮನೆಗೆ ಬೀಗ ಹಾಕಿ ಪರಾರಿಯಾಗಿರುವ ಯುವಕನ ಕುಟುಂಬ ಎಲ್ಲಿಗೆ ಹೋಗಿದೆ ಎಂಬುದೂ ತಿಳಿದುಬಂದಿಲ್ಲ.
ಕುಂತೂರು ಗ್ರಾಮದ ಕುಮಾರ್ ಎಂಬಾತ ಕುಂತೂರು ಮೋಳೆ ಗ್ರಾಮದ ಶೋಭಾ ಎಂಬ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ ಕೈ ಕೊಟ್ಟು ಪರಾರಿಯಾಗಿದ್ದಾನೆ. ಇದರಿಂದ ಕುಪಿತಳಾದ ಶೋಭಾ ಪ್ರಿಯಕರನಿಗಾಗಿ ಧರಣಿ ಕುಳಿತಿದ್ದಾಳೆ.

ಕುಮಾರ್ ನನ್ನನ್ನು ಮದುವೆಯಾಗುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ ಎಂದು ನ್ಯಾಯ ಕೊಡಿಸುವಂತೆ ಯುವತಿ ಪಟ್ಟು ಹಿಡಿದಿದ್ದಾಳೆ.












Click it and Unblock the Notifications