ಗಡಿಜಿಲ್ಲೆ ಬಿಜೆಪಿಯಲ್ಲಿ ಹೊಸ ಹುರುಪು, ನೂತನ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಅಧಿಕಾರ ಸ್ವೀಕಾರ
ಚಾಮರಾಜನಗರ, ಜನವರಿ, 18: ಬಿಜೆಪಿ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಗುಂಡ್ಲುಪೇಟೆ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಇಂದು ಅಧಿಕಾರ ಸ್ವೀಕರಿಸಿದ್ದು, ಗಡಿಜಿಲ್ಲೆ ಬಿಜೆಪಿಯಲ್ಲಿ ಹೊಸ ಹುರುಪು ಕಂಡುಬಂದಿತು.
ವಿಧಾನಸಭಾ ಸೋಲಿನ ಬಳಿಕ ಲೋಕಸಭಾ ಚುನಾವಣೆಗೆ ಕಾರ್ಯಕರ್ತರಿಗೆ ಈ ಅಧಿಕಾರ ಸ್ವೀಕಾರ ಕಾರ್ಯಕ್ರಮ ಬೂಸ್ಟರ್ ಡೋಸ್ ನಂತಿದ್ದು, ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಆರಂಭ ಮಾಡಿದೆ.

ಇಂದು (ಜನವರಿ 18) ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ಅವರಿಂದ ಪಕ್ಷದ ಧ್ವಜವನ್ನು ಸಿ.ಎಸ್.ನಿರಂಜನಕುಮಾರ್ ಪಡೆಯುವ ಮೂಲಕ ಅಧಿಕಾರ ಸ್ವೀಕಾರ ಮಾಡಿದರು.
ಹೊಸ ವರಸೆ ಶುರು ಮಾಡಿದ ಎಂಪಿಆರ್: ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಸಂಬಂಧ ಹೇಳಿಕೆ ಮೇಲೆ ಹೇಳಿಕೆ ನೀಡುತ್ತಲೇ ಇರುವ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಈಗ ಮತ್ತೆ ಹೊಸ ವರಸೆ ಶುರು ಮಾಡಿದ್ದಾರೆ. ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂಬುದು ನನ್ನ ಅಪೇಕ್ಷೆಗಿಂತ ಜಿಲ್ಲೆಯ ಮತದಾರರು, ಬಿಜೆಪಿ ಮುಖಂಡರು, ಕಾರ್ಯಕರ್ತರ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ನಾನೂ ಟಿಕೆಟ್ ಆಕಾಂಕ್ಷಿ ಅಂತಾರೆ, ಮತ್ತೊಂದೆಡೆ ಬಿಜೆಪಿ ಗೆಲ್ಲಲೇಬೇಕು ಅಂತಾರೆ. ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರು ಲೋಕಸಭೆ ಅಭ್ಯರ್ಥಿ ಘೋಷಣೆಯಾಗುವವರೆಗೂ ನನ್ನ ಹೆಸರೇ ಇದೆ ಎನ್ನುತ್ತಾರೆ. ಸಿದ್ದೇಶಣ್ಣ, ಅವರ ತಂದೆ ಮಲ್ಲಿಕಾರ್ಜುನಪ್ಪರ ಬಗ್ಗೆ ಗೌರವವಿದೆ ಎನ್ನುತ್ತಾರೆ. ಮಗದೊಮ್ಮೆ ಸರ್ವೇ ನಡೆಸಿ, ಸಮೀಕ್ಷೆ ಆಧರಿಸಿ ಟಿಕೆಟ್ ಘೋಷಿಸಿ ಎನ್ನುತ್ತಾರೆ. ಒಟ್ಟಾರೆ ರೇಣುಕಾಚಾರ್ಯರ ನಡೆ ಬಿಜೆಪಿ ಪಕ್ಷದವರಿಗೆ ಗೊಂದಲ, ಬೇಸರ ತರಿಸುತ್ತಿದೆ.
ಅಲ್ಲದೆ ಮಲ್ಲಿಕಾರ್ಜುನಪ್ಪ ಅವರು ಎರಡು ಬಾರಿ ಸಂಸದರಾಗಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದಾರೆ. ಸಿದ್ದೇಶ್ವರ ಅವರು ನಾಲ್ಕು ಬಾರಿ ಎಂಪಿ ಆಗಿದ್ದಾರೆ. ಅವರ ಕೊಡುಗೆ ಮರೆಯುವಂತಿಲ್ಲ ಎನ್ನುವ ರೇಣುಕಾಚಾರ್ಯ ಈಗ ಹೊಸ ವರಸೆ ಶುರು ಮಾಡಿದ್ದಾರೆ. ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿರುವುದಾಗಿ ಹಾಗೂ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದೇನೆ. ಇದು ರೇಣುಕಾಚಾರ್ಯನ ಅಭಿಪ್ರಾಯ ಅಲ್ಲ, ಪಕ್ಷದ ಮುಖಂಡರು, ಕಾರ್ಯಕರ್ತರು, ಜಿಲ್ಲೆಯ ಅಭಿಮತವಾಗಿದೆ ಅಂತಿದ್ದಾರೆ.
ಈ ಅಭಿಪ್ರಾಯ ನಾನು ವ್ಯಕ್ತಪಡಿಸಿದ್ದೇನೆ ಅಷ್ಟೇ. ದಾವಣಗೆರೆ ಜಿಲ್ಲೆಯವರಿಗೇ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕು ಎಂಬ ಅಪೇಕ್ಷೆ ಇದೆ. ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುತ್ತೇವೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎಂಬುದು ದೇಶದ ಜನರ ಬಯಕೆ ಆಗಿದೆ. ಈ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ.
ಸಿದ್ದೇಶ್ವರ ಅವರು ನನಗೆ ಟಿಕೆಟ್ ಸಿಗುತ್ತದೆ ಎಂದು ದೃಢವಾಗಿ ಹೇಳುತ್ತಿದ್ದಾರೆ. ಮತ್ತೊಂದೆಡೆ ಸಿದ್ದೇಶ್ವರ ವಿರುದ್ಧ ನಾವಿಲ್ಲ, ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂಬ ಹೊಸ ವರಸೆ ಆರಂಭಿಸಿರುವ ರೇಣುಕಾಚಾರ್ಯ ದಾವಣಗೆರೆಗೆ ವಾರಕ್ಕೆ ನಾಲ್ಕೈದು ಬಾರಿ ಬಂದು ಹೋಗುತ್ತಿದ್ದಾರೆ. ಏನೇ ಕಾರ್ಯಕ್ರಮಗಳು ಇದ್ದರೂ ತಪ್ಪಿಸಿಕೊಳ್ಳುವುದಿಲ್ಲ, ಇಲ್ಲಿಗೆ ಬರುತ್ತಾರೆ. ಮಾಧ್ಯಮವದರ ಜೊತೆ ಮಾತನಾಡುತ್ತಾರೆ. ಅಭಿಪ್ರಾಯ ವ್ಯಕ್ತಪಡಿಸಿ ಹೋಗುತ್ತಿದ್ದಾರೆ. ಈ ಹೊಸ ವರಸೆ ಬಿಜೆಪಿ ಮುಖಂಡರಿಗೇ ಅರ್ಥವಾಗದಂತಾಗಿದೆ.
ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಗೆ ಆಗಮಿಸಿದ್ದ ರೇಣುಕಾಚಾರ್ಯ ಅವರು, ಮಾಧ್ಯಮದವರ ಜೊತೆ ಮಾತನಾಡಿದರು. ಸ್ಪರ್ಧೆ, ಪೈಪೋಟಿ ಯಾವುದೂ ಇಲ್ಲ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗುವುದನ್ನು ಬ್ರಹ್ಮನಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಖಾಲಿಪೀಲಿ 28 ಪಕ್ಷಗಳು ಸೇರಿಕೊಂಡಿವೆ. ಈ ಪಕ್ಷಗಳ ಆಟ ನಡೆಯಲ್ಲ ಎಂದು ಹೇಳಿದರು.












Click it and Unblock the Notifications