ಹನೂರು ವಿಧಾನಸಭಾ ಕ್ಷೇತ್ರ: ಆರು ದಶಕಗಳ 'ಕುಟುಂಬ ಪಾರುಪತ್ಯಕ್ಕೆ' ಜೆಡಿಎಸ್ ಬ್ರೇಕ್?

ಚಾಮರಾಜನಗರ, ಏಪ್ರಿಲ್. 29 : ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಲ್ಲಿ 60 ವರ್ಷಗಳಿಂದ ಎರಡು ಕುಟುಂಬಗಳ ಹಿಡಿತವಿದೆ. ಅಧಿಕಾರವು ಕೂಡ ಈ ಎರಡು ಕುಟುಂಬಗಳೊಂದಿಗೆ ಹಂಚಿಕೆಯಾಗುತ್ತಾ ಬಂದಿದೆ. ಕೆಲವೊಮ್ಮೆ ಮತದಾರರ ಮನಸ್ಥಿತಿಗೆ ಅನುಗುಣವಾಗಿ ಈ ಕುಟುಂಬ ನಡುವೆ ಅಧಿಕಾರ ಹಂಚಿಕೆಗೆ ಹನೂರು ಸಾಕ್ಷಿಯಾಗಿದೆ. ಆದರೆ, ಈ ಬಾರಿ ಕುಟುಂಬ ಪಾರುಪತ್ಯಕ್ಕೆ ಜೆಡಿಎಸ್‌ನಿಂದ ಕಡಿವಾಣ ಬೀಲುವ ಸಾಧ್ಯತೆಯಿದೆ.

ದಿವಂಗತ ಮಾಜಿ ಸಚಿವ ರಾಜುಗೌಡ ಮತ್ತು ಎಚ್ ನಾಗಪ್ಪ ಅವರ ಕುಟುಂಬಗಲ ಸ್ಪರ್ದೆಗೆ ಕ್ಷೇತ್ರ ಸಾಕ್ಷಿಯಾಗಿದೆ. ಮಾಜಿ ಸಚಿವ ರಾಜುಗೌಡ ಅವರ ಕುಟುಂಬ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನಲ್ಲಿದ್ದು, ಎಚ್ ನಾಗಪ್ಪ ಅವರ ಕುಟುಂಬ ಮೊದಲು ಜನತಾ ಪಕ್ಷದೊಂದಿಗೆ, ನಂತರ ಭಾರತೀಯ ಜನತಾ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು.

Family Rule: Will JDS end six decades of family rule in Hanur?

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರವು ಲಿಂಗಾಯತರು, ದಲಿತರು, ಕುರುಬರು, ಗೌಂಡರ್‌ಗಳು, ಆದಿವಾಸಿಗಳು, ಒಕ್ಕಲಿಗರು ಮತ್ತು ಇತರ ಸಣ್ಣ ಸಮುದಾಯಗಳ ಪ್ರಾಬಲ್ಯವನ್ನು ಹೊಂದಿದೆ. ಎರಡು ಪ್ರತಿಸ್ಪರ್ಧಿ ಕುಟುಂಬಗಳು ಕಳೆದ 60 ವರ್ಷಗಳಲ್ಲಿ ಹಲವು ಏರಿಳಿತಗಳನ್ನು ಕಂಡಿವೆ.

ಜಿ ವೆಂಕಟೇಗೌಡ 1957 ರಿಂದ 1962 ರವರೆಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು, ಅದೇ ಕುಟುಂಬದ ಜಿ ರಾಜುಗೌಡ 1978, 1985, 1989 ಮತ್ತು 1999 ರಲ್ಲಿ ಗೆದ್ದಿದ್ದಾರೆ ಮತ್ತು ಅವರ ಮಗ ನರೇಂದ್ರ 2008 ರಿಂದ ಮೂರು ಬಾರಿ ಗೆದ್ದಿದ್ದಾರೆ.

ಇನ್ನು, ಎಚ್ ನಾಗಪ್ಪ 1967 ಮತ್ತು 1984ರಲ್ಲಿ ಗೆದ್ದು, ಅರಣ್ಯ ದರೋಡೆಕೋರ ವೀರಪ್ಪನ್‌ನಿಂದ ಹತ್ಯೆಯಾದ ನಂತರ 2004ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಪತ್ನಿ ಪರಿಮಳ ಗೆದ್ದಿದ್ದರು. ಇಲ್ಲಿನ ಮತದಾರರು ಈ ಇಬ್ಬರು ಪ್ರತಿಸ್ಪರ್ಧಿಗಳ ಮೇಲೆ ಸತತವಾಗಿ ನಂಬಿಕೆಯನ್ನು ಹೊಂದಿದ್ದಾರೆ. ಪೀಳಿಗೆಯ ಬದಲಾವಣೆಯು ಸಹ ಮತದಾನದ ಮಾದರಿಯ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ.

Family Rule: Will JDS end six decades of family rule in Hanur?

ಆದರೆ, ಈ ಬಾರಿಯ ಚುನಾವಣೆಯಲ್ಲೂ ಯುವ ಪೀಳಿಗೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುವಂತೆ ಇದೆ. ಜೆಡಿಎಸ್ ಮತ್ತೊಮ್ಮೆ ಕುರುಬ ಜನಾಂಗದ ಎಂ.ಆರ್.ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದು, ಇದೇ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಗೆಲುವನ್ನೇ ಮಾನದಂಡ ಮಾಡಿಕೊಂಡಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಕುಟುಂಬಗಳಿಗೆ ಅಂಟಿಕೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ ಆರ್ ನರೇಂದ್ರ ಮತ್ತು ಬಿಜೆಪಿಯ ಪ್ರೀತಂ ನಾಗಪ್ಪ ಮತ್ತೆ ಕಣದಲ್ಲಿದ್ದಾರೆ. ಇಬ್ಬರು ಸಹ ಕುಟುಂಬದ ಪರಂಪರೆ ಮತ್ತು ಸಾಂಪ್ರದಾಯಿಕ ಬೆಂಬಲಿಗರನ್ನು ಅವಲಂಬಿಸಿದ್ದಾರೆ.

ಗೆಲುವು ದಾಖಲಿಸುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಸುಡು ಬಿಸಿಲನ್ನು ಲೆಕ್ಕಿಸದೇ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಭಾಗ್ಯಗಳು ಮತ್ತು ಕಾಂಗ್ರೆಸ್ ಪ್ರಕಟಿಸಿರುವ ಐದು ಗ್ಯಾರಂಟೆಗಳ ಪಟ್ಟಿಗಳನ್ನು ಮನೆ ಮನೆಗೆ ವಿತರಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ, ಪ್ರೀತಂ ನಾಗಪ್ಪ ಮತದಾರರಿಗೆ ಅಷ್ಟಾಗಿ ಪರಿಚಿತರಲ್ಲದಿದ್ದರೂ ಕಳೆದ ಚುನಾವಣೆಯಲ್ಲಿ 56,931 ಮತಗಳನ್ನು ಪಡೆದು ಕಳೆದೆರಡು ತಿಂಗಳಿಂದ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಹನೂರನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವ ಬಗ್ಗೆ ಬಗ್ಗೆ ತಮ್ಮ ಚಿಂತನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ. ಜೆಡಿಎಸ್ ಸಾಮಾಜಿಕ ಕೆಲಸಗಳು ಮತ್ತು ಜಾತಿಗಳ ಮರುಜೋಡಣೆಗಾಗಿ ಕೆಲಸ ಮಾಡುತ್ತಿದೆ. ದಲಿತರು, ಪಡಯಾಚಿ ಗೌಂಡರ್‌ಗಳು ಮತ್ತು ದಶಕಗಳಿಂದ ಕಾಂಗ್ರೆಸ್‌ನೊಂದಿಗೆ ಉಳಿದಿರುವ ಸಣ್ಣ ಹಿಂದುಳಿದ ಸಮುದಾಯಗಳನ್ನು ತಲುಪಲು ಜೆಡಿಎಸ್ ಯತ್ನಿಸುತ್ತಿದೆ.

ಕ್ಷೇತ್ರದಲ್ಲಿ ಒಕ್ಕಲಿಗ, ದಲಿತ ಮತ್ತು ಹಿಂದುಳಿದ ಸಮುದಾಯಗಳನ್ನು ಒಗ್ಗೂಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದರೆ, ಬಿಜೆಪಿಗೆ ಲಿಂಗಾಯತ, ಬೇಡಗಂಪನ ಸಮುದಾಯದ ಸೇರಿ ಮತ್ತಿತರರು ಬೆಂಬಲ ನೀಡಿದ್ದಾರೆ. ಆದರೆ ಈ ಬಾರಿ ಜೆಡಿಎಸ್‌ನ ಮಂಜುನಾಥ್ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಈಗ ಇತರೆ ಸಮುದಾಯಗಳನ್ನು ಓಲೈಸುವ ಅನಿವಾರ್ಯತೆಗೆ ಸಿಲುಕಿವೆ.

ಇನ್ನು, ಈ ಮೂವರು ಅಭ್ಯರ್ಥಿಗಳ ಜೊತೆಗೆ ಹನೂರು ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ಅಭ್ಯರ್ಥಿಯಾಗಿ ಜಿ. ಮುರುಗೇಶನ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಹರೀಶ್.ಕೆ., ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಯಾಗಿ ಮಾದೇಶ.ಎಂ. ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸಿ. ಸಿದ್ದಾರ್ಥನ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+