ಗುಂಡ್ಲುಪೇಟೆಯ ದೊಡ್ಡಕೆರೆ, ಚೋಳರ ಕಾಲದ ಕಲ್ಯಾಣಿಯೇ?

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಗುಂಡ್ಲುಪೇಟೆ, ಮೇ 18: ಕೆಲವು ದಿನಗಳ ಹಿಂದೆ ಕೆರೆ ದುರಸ್ತಿ ಮಾಡುವಾಗ ನೀರು ಉಕ್ಕಿ ಬಂದು ಸುದ್ದಿಯಾಗಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಹಂಗಳ ಸಮೀಪದ ದೊಡ್ಡಕೆರೆ ಚೋಳರ ಕಾಲದ ಕಲ್ಯಾಣಿಯಂತೆ. ಇದಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆಯಂತೆ!

ಹಾಗೆಂದು ಊರಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆಂದೇ ಐತಿಹಾಸಿಕ ಸ್ಮಾರಕ ಎಂಬ ರೀತಿಯಲ್ಲಿ ಈ ಕೆರೆಯ ದುರಸ್ತಿ ಕಾರ್ಯ ಇಂದು ಸಮಾರೋಪಾದಿಯಲ್ಲಿ ನಡೆಯುತ್ತಿದೆ![ಬತ್ತಿದ ಬಂಡೀಪುರದ ಮೂಲೆಹೊಳೆ: ಜನ-ಜಾನುವಾರು ಪರದಾಟ]

Does Doddakere in Gundlupet belong to Chola dynasty?

ಹಂಗಳ ಗ್ರಾ.ಪಂ. ವತಿಯಿಂದ ನರೇಗಾ ಯೋಜನೆಯಡಿ ದುರಸ್ತಿ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದು ಸಂಪೂರ್ಣಗೊಂಡಿದ್ದೇ ಆದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ.

ಕೆಲವು ದಿನಗಳ ಹಿಂದೆ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯ ಹಿರಿಕೆರೆ ಸಮೀಪದ ದೊಡ್ಡಕೆರೆಯನ್ನು ಜೆಸಿಬಿ ಸಹಾಯದಿಂದ ಹೂಳೆತ್ತುವ ಸಂದರ್ಭದಲ್ಲಿ ಹಳೆಯ ಬಾವಿಯಿದ್ದ ಗುರುತುಗಳು ಹಾಗೂ ಕಲ್ಲಿನ ವಿಗ್ರಹ ದೊರೆತಿತ್ತು. ಹೀಗಾಗಿ ಜೆಸಿಬಿ ಚಾಲಕ ಹೂಳೆತ್ತಲು ನಿರಾಕರಿಸಿದ್ದನು. ಈ ಕೆರೆಯನ್ನು ಚೋಳರ ಕಾಲದ್ದು ಎನ್ನಲಾಗುತ್ತಿದ್ದು, ಈ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕಿದೆ.[ಬರದಲ್ಲೂ ಬಂಡೀಪುರದ ಮೂರು ಕೆರೆಗಳಿಗೆ ನೀರು ಬಂತು!]

Does Doddakere in Gundlupet belong to Chola dynasty?

ಇದಾದ ನಂತರ ಒಂದು ವಾರದಲ್ಲೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯಲ್ಲಿ ಉತ್ತಮ ಮಳೆಬಿದ್ದಿತ್ತು. ಆ ನಂತರ ದೊಡ್ಡಕೆರೆಯಲ್ಲಿ ನೀರು ಉಕ್ಕಿಬರತೊಡಗಿತು. ಹೀಗಾಗಿ ನರೇಗಾ ಯೋಜನೆಯಡಿ ದುರಸ್ತಿ ಕಾರ್ಯವನ್ನು ಗ್ರಾಪಂ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದು ನೀರನ್ನು ಖಾಲಿ ಮಾಡಿ ಅಲ್ಲಿರುವ ಕಟ್ಟಡದ ಕಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಹೂಳನ್ನು ಮೇಲೆತ್ತಲಾಗುತ್ತಿದೆ.

ಕೆರೆ ದುರಸ್ತಿಗೊಂಡು ಮುಂದಿನ ದಿನಗಳಲ್ಲಿ ಮಳೆ ಸುರಿದು ನೀರು ಸಂಗ್ರಹವಾಗಿದ್ದೇ ಆದರೆ ಗ್ರಾಮದ ನೀರಿನ ಬವಣೆ ಬಗೆಹರಿಸುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Is Doddakere in Gundlupet, Chamrajanagar district has history of 600 years and does it belong to Chola dynasty? Localites are believing like that. The research has to be taken place.
Please Wait while comments are loading...